Advertisement

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗೂ ಕೋವಿಡ್ ಪಾಸಿಟಿವ್

03:27 PM Jul 08, 2020 | sudhir |

ಮಂಗಳೂರು : ಕೋವಿಡ್ ಸೋಂಕು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರಲ್ಲೂ ದೃಢಪಟ್ಟಿದ್ದು ಈ ವಿಚಾರ ಸ್ವತಃ ಕಾರ್ಪೋರೇಟರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisement

ಮಂಗಳೂರು ಪಾಲಿಕೆ ಸದಸ್ಯೆ ಸೋಂಕಿಗೆ ತುತ್ತಾಗಿದ್ದು ಅವರು ಸಾಮಾಜಿಕ ಜಾಲತಾಣದಲ್ಲಿ ತನಗೆ ಕೋವಿಡ್ ಪಾಸಿಟಿವ್ ವರದಿ ಬಂದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಾರ್ಪೋರೇಟರ್ ಕಳೆದ ಕೆಲ ದಿನಗಳ ಹಿಂದೆ  ಪ್ರಾಥಮಿಕ ಆರೋಗ್ಯ ಕೇಂದ್ರದ ಸಭೆಯಲ್ಲಿ ಭಾಗಿಯಾಗಿದ್ದರು, ಈ ಸಂದರ್ಭ ಆ ಸಭೆಯಲ್ಲಿ ಭಾಗಿಯಾದ ಒಬ್ಬರಲ್ಲಿ ಸೋಂಕು ದೃಢಪಟ್ಟಿತ್ತು ಹಾಗಾಗಿ ಅಂದಿನಿಂದ ಸದಸ್ಯೆ ಸೆಲ್ಫ್ ಕ್ವಾರೆಂಟೈನ್ ಆಗಿದ್ದರು ಈ ಸಂದರ್ಭ ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು ಆದರೆ ಇಂದು ಬಂದ ವರದಿಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next