Advertisement
ಮಂಗಳೂರಿಗೆ ಮಂಗಳವಾರ ಭೇಟಿ ನೀಡಿ ರೈಲ್ವೇ ವ್ಯವಸ್ಥೆ ಹಾಗೂ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳೂರು ಸೆಂಟ್ರಲ್‌ನಲ್ಲಿ ಪಿಟ್‌ಲೆçನ್ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಹೊಸ ಪ್ಲಾಟ್‌ಫಾರಂಗಳ ಕಾಮಗಾರಿಯನ್ನು ಕೈಗೆತ್ತಿಕೊಂಡು ಆರು ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು. ಇದರ ನಿರ್ಮಾಣಕ್ಕೆ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು ಗುತ್ತಿಗೆ ಪ್ರಕ್ರಿಯೆ ಕೂಡ ನಡೆದಿದೆ ಎಂದರು.
ಮಂಗಳೂರು ಭಾಗದ ವಿವಿಧ ಬೇಡಿಕೆ ಗಳ ಬಗ್ಗೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಸದಸ್ಯರು, ಜಿ.ಎಂ. ಜಾನ್ ಥಾಮಸ್ ಅವರಿಗೆ ಮನವಿ ಸಲ್ಲಿಸಿದರು.
Related Articles
Advertisement
ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸದಸ್ಯರಾದ ಹನುಮಂತ ಕಾಮತ್, ಅಹ್ಮದ್ ಬಾವ, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯ ಅನಿಲ್ ಹೆಗ್ಡೆ, ಜಿ.ಕೆ. ಭಟ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಇನ್ನು ಮೊಬೈಲ್ ಆ್ಯಪ್‌ನಲ್ಲೇ ಸಂಸತ್ ಕಲಾಪ ವೀಕ್ಷಿಸಿ!
ಮಹಾಪ್ರಬಂಧಕರಿಂದ ಪರಿಶೀಲನೆಜಾನ್ ಥಾಮಸ್ ಅವರು ಸೆಂಟ್ರಲ್‌ನಲ್ಲಿ 2ನೇ ಪ್ರವೇಶದ್ವಾರ, ಹೊಸ ಪಿಆರ್‌ಎಸ್ ಕೌಂಟರ್, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಕ್ಯಾಬಿನ್ ವ್ಯವಸ್ಥೆಗಳನ್ನು ಪರಿಶೀಲಿಸಿದರು. ರಿಕ್ರಿಯೇಶನ್ ಸೌಲಭ್ಯವನ್ನು ಉದ್ಘಾಟಿಸಿದರು. ಕುಲಶೇಖರದ ಪ್ರಸ್ತುತ ಇರುವ ಹಾಗೂ ಹೊಸದಾಗಿ ನಿರ್ಮಾಣವಾಗುತ್ತಿರುವ ಸುರಂಗ ಹಾಗೂ ಪಡೀಲ್‌ನಲ್ಲಿ ಭೂಕುಸಿತ ಪ್ರದೇಶಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು. ನೇತ್ರಾವತಿ ರೈಲ್ವೇ ಸೇತುವೆಯಿಂದ ಕಾಸರಗೋಡು ರೈಲುಮಾರ್ಗದಲ್ಲಿ ಸ್ಪೀಡ್ ಟ್ರಯಲ್ ನಡೆಸಿದ ಅವರು ಈ ಮಾರ್ಗದಲ್ಲಿನ ಬೃಹತ್ ಹಾಗೂ ಕಿರು ಸೇತುವೆಗಳನ್ನು ಹಾಗೂ ಲೆವೆಲ್ ಕ್ರಾಸಿಂಗ್‌ಗಳನ್ನು ಪರಿಶೀಲಿಸಿದರು. ರೈಲ್ವೇ ಆರೋಗ್ಯ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ವೈದ್ಯರು, ಸಿಬಂದಿ ಜತೆ ಸಂವಾದ ನಡೆಸಿ ಕೊರೊನಾ ಸಂದರ್ಭ ಅವರು ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದರು.