Advertisement

Mangaluru Central: 4, 5ನೇ ಪ್ಲಾಟ್‌ಫಾರಂ ಕಾಮಗಾರಿ ಪೂರ್ಣ

11:23 PM Nov 25, 2023 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ 4 ಮತ್ತು 5ನೇ ಪ್ಲಾಟ್‌ಫಾರಂ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಿದೆ.

Advertisement

ಪ್ರಯಾಣಿಕರಿಗೆ ಮೂಲಸೌಕರ್ಯ ಕಲ್ಪಿಸುವ ವ್ಯವಸ್ಥೆಗಳು ಇನ್ನಷ್ಟೇ ಆಗಬೇಕಿರುವುದರಿಂದ ಪ್ರಸ್ತುತ ನಿಲ್ದಾಣಕ್ಕೆ ಆಗಮಿಸುವ ರೈಲುಗಳಿಗೆ ಇಲ್ಲಿ ತಂಗಲು ಅವಕಾಶ ಕಲ್ಪಿಸಲಾಗುತ್ತಿದೆ.ಶನಿವಾರ ಬೆಳಗ್ಗೆ ಆಗಮಿಸಿದ ಕಾಚಿಗುಡ-ಮಂಗಳೂರು ಸೆಂಟ್ರಲ್‌ ರೈಲಿಗೆ ಹೊಸ ಪ್ಲಾಟ್‌ ಫಾರಂನಲ್ಲಿ ತಂಗಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

ಬೋಗಿಗಳ ಸ್ವತ್ಛಗೊಳಿಸುವಿಕೆ, ತಾಂತ್ರಿಕ ನಿರ್ವಹಣೆಯನ್ನೂ ನಡೆಸಲಾಗಿದೆ. ಹೊಸ ಪ್ಲಾಟ್‌ ಫಾರಂನಲ್ಲಿ ಪ್ರಯಾಣಿಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆಗೆ ಮೇಲ್ಫಾವಣಿ, ವಿದ್ಯುದ್ದೀಪ, ಕುಡಿಯುವ ನೀರು ಮೊದಲಾದ ಮೂಲ ಸೌಕರ್ಯ ಇನ್ನಷ್ಟೇ ಕಲ್ಪಿಸಬೇಕಾಗಿದೆ. ಪಾದಚಾರಿ ಮೇಲ್ಸೇತುವೆ ಜನವರಿ ಅಂತ್ಯದೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ನೂತನ ಪ್ಲ್ಯಾಟ್‌ಫಾರಂಗಳು 600 ಮೀಟರ್‌ ಉದ್ದವಿದ್ದು, 24 ರೈಲು ಬೋಗಿಗಳ ನಿಲುಗಡೆಗೆ ಅವಕಾಶ‌ವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next