ಮಂಗಳೂರು: ಕೆನರಾ ಕೈಗಾರಿಕಾ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಮತ್ತು ನವಭಾರತ ದೈನಿಕ ಪತ್ರಿಕೆಯ ಸ್ಥಾಪನಾ ಸಂಪಾದಕ ದಿ.ವಿ.ಎಸ್. ಕುಡ್ವ ಅವರ ದ್ವಿತೀಯ ಪುತ್ರ, ಕೆನರಾ ವರ್ಕ್‌ಶಾಪ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಶ್ರೀನಿವಾಸ್ ವಿ. ಕುಡ್ವ (87 ವರ್ಷ) ಆ. 29 ರಂದು ಶನಿವಾರ ರಾತ್ರಿ ನಂತೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು
ಕೆನರಾ ವರ್ಕ್‌ಶಾಪ್ಸ್ ಲಿಮಿಟೆಡ್‌ನ ಸಂಸ್ಥಾಪಕ ದಿವಂಗತ ವಿ ಎಸ್ ಕುಡ್ವಾ ಅವರ ಎರಡನೆಯ ಪುತ್ರರಾದ ಶ್ರೀನಿವಾಸ್ ಕುಡ್ವಾ ಅವರು 1933ರಲ್ಲಿ ಜನಿಸಿದ್ದರು. ಡೊಂಗರಕೇರಿ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ಅವರು ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಿಂದ ಬಿ ಎಸ್ ಸಿ ಪದವಿ ಪಡೆದರು. ಯುಎಸ್ಎನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.
ವಿದ್ಯಾಭ್ಯಾಸದ ನಂತರ ಶ್ರೀನಿವಾಸ್ ಕುಡ್ವಾ ಅವರು ಕೆನರಾ ವರ್ಕ್ ಶಾಪ್ ಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇರಿದರು. ಅವರು ಆಧುನಿಕ ತಂತ್ರಜ್ಞಾನಗಳ ಜ್ಞಾನ ಹೊಂದಿದ್ದ ಅವರು ತಮ್ಮ ಕಂಪನಿಯಾದ ನಿರ್ಮಿಸಿದ ಕೆನರಾ ಸ್ಪ್ರಿಂಗ್ಸ್‌ನ ಗುಣಮಟ್ಟವನ್ನು ಸುಧಾರಿಸಿದರು. ಸಾರಿಗೆ ಕ್ಷೇತ್ರದಲ್ಲಿ ಕೆನರಾ ಸ್ಪ್ರಿಂಗ್ಸ್‌ನ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಕೆಸಿಸಿಐ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ವಿ ಶ್ರೀನಿವಾಸ ಕುಡ್ವ ಅವರು ರೋಟರಿ ಕ್ಲಬ್, ಮಂಗಳೂರು ಮಿಡ್‌ಟೌನ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅಂತಿಮ ದರ್ಶನಕ್ಕಾಗಿ ಪಾರ್ಥೀವ ಶರೀರವನ್ನು ಕದ್ರಿ ಹಿಲ್ಸ್ ಬಳಿಯ ಮನೆಯಲ್ಲಿ ಇಡಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಮೃತರು ಪತ್ನಿ ಶ್ರೀಮತಿ ಶಾರದಾ, ಇಬ್ಬರು ಪುತ್ರರಾದ ಪ್ರೇಮನಾಥ ಕುಡ್ವ ಮತ್ತು ವಸಂತ ಕುಡ್ವ, ಇಬ್ಬರು ಪುತ್ರಿಯರಾದ ಶೈಲಾ ಮತ್ತು ನೀನಾ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶ್ರೀನಿವಾಸ ಕುಡ್ವ ಅವರ ನಿಧನಕ್ಕೆ ಅವರ ಹಿತೈಷಿಗಳು, ಬಂಧು ಮಿತ್ರರು, ಕೆನರಾ ವರ್ಕ್‌ಶಾಪ್ ಮತ್ತು ಸಿಪಿಸಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.