Advertisement

ಮಂಗಳೂರು ಲಾಕ್ ಡೌನ್ ಪ್ರಸಂಗ: ರೂಮ್ ಗೆ ಸೂಟ್ ಕೇಸ್ ನಲ್ಲಿ ಗೆಳೆಯನನ್ನು ತಂದು ಸಿಕ್ಕಿಬಿದ್ದ!

09:28 AM Apr 13, 2020 | Naveen |

ಮಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ನಿಯಮ ಮೀರಿ ಗೆಳೆಯನನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ರೂಮಿಗೆ ಕರೆದೊಯ್ದು ಸಿಕ್ಕಿಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.

Advertisement

ನಗರದ ಆರ್ಯಸಮಾಜ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯೊಬ್ಬ ಬಾಡಿಗೆಗೆ ವಾಸವಾಗಿದ್ದ. ವಸತಿ ಸಮುಚ್ಚಯ ಅಸೋಸಿಯೇಷನ್ ಲಾಕ್ ಡೌನ್ ಹಿನ್ನಲೆಯಲ್ಲಿ ವಾಸ್ತವ್ಯ ಇರುವವರು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಿಸಲಾಗಿತ್ತು. ವಿದ್ಯಾರ್ಥಿ ಮಾತ್ರ ತನ್ನ ಗೆಳೆಯನನ್ನು ರೂಮಿಗೆ ಕರೆತರುತ್ತೇನೆ ಎಂದು ಹೇಳುತ್ತಲೇ ಇದ್ದ. ಇದಕ್ಕೆ ಅಪಾರ್ಟ್ ಮೆಂಟ್ ನವರು ಅವಕಾಶ ನೀಡಿರಲಿಲ್ಲ.

ಆದರೂ ಹಠ ಬಿಡದ ಯುವಕ ರವಿವಾರ ಬೆಳಗ್ಗೆ ತನ್ನ ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಸೂಟ್ ಕೇಸ್ ನಲ್ಲಿ ಸಂಚಲನ ಕಂಡು ಬಂದಿದ್ದು, ವಸತಿ ಸಮುಚ್ಚಯದಲ್ಲಿರುವ ಇತರರ ಗಮನಕ್ಕೆ ಬಂದಿದೆ. ಕೂಡಲೇ ಎಲ್ಲರೂ ಸೇರಿ ಸೂಟ್ ಕೇಸ್ ತೆರೆಯುವಂತೆ ಒತ್ತಾಯಿಸಿದ್ದಾರೆ. ಸಂದಿಗ್ಧ ಸ್ಥಿತಿಗೆ ಸಿಲುಕಿದ ಯುವಕ ಸೂಟ್ ಕೇಸ್ ತೆರೆಯುವಾಗ ಸತ್ಯಾಂಶ ಬಹಿರಂಗವಾಗಿದೆ.

ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಇಬ್ಬರನ್ನೂ ಠಾಣೆಗೆ ಕರೆಸಿದ್ದಾರೆ. ಬಳಿಕ ಮನೆಮಂದಿಯನ್ನು ಕರೆಸಿ ಯುವಕರಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next