Advertisement
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವೀಪ್ ಕಮಿಟಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ನೇತೃತ್ವದಲ್ಲಿ ಆಮಂತ್ರಣ ಪತ್ರಿಕೆಯನ್ನು ರಚಿಸಲಾಗಿದ್ದು, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಆಮಂತ್ರಣ ಇದೆ. ಜಿಲ್ಲಾ ಪಂಚಾಯತ್ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಡಾ| ಕುಮಾರ್ ಮತ್ತು ಮಹಾನಗರ ಪಾಲಿಕೆ ಆಯುಕ್ತರಾದ ಚನ್ನಬಸಪ್ಪ ಕೆ. ಅವರ ಉಸ್ತುವಾರಿಯಲ್ಲಿ ಆಮಂತ್ರಣ ಪತ್ರಿಕೆ ಸಿದ್ಧಗೊಳಿಸಲಾಗಿದೆ. ಇದನ್ನು ಮತದಾರರಿಗೆ ಹಂಚಿ ಮತದಾನ ಹಬ್ಬಕ್ಕೆ ಆಹ್ವಾನಿಸುವ ಕೆಲಸ ಅಧಿಕಾರಿ ವರ್ಗದಿಂದ ನಡೆಯುತ್ತಿದೆ.
ಆತ್ಮೀಯ ಮತದಾರರೇ, ಅತ್ಯತ್ತಮ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಜನದನಿ ಪ್ರಮುಖ ಪಾತ್ರ ವಹಿಸುತ್ತದೆ. ಮೇ 10, 2023ರಂದು ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಸುವರ್ಣಾವಕಾಶ ಇಲ್ಲಿದೆ. ನಿಮ್ಮ ಪ್ರದೇಶದ ಚುನಾಯಿತ ಪ್ರತಿನಿಧಿಗಳು ನಿಮ್ಮ ಜೀವನದ ಹಲವು ಅಂಶಗಳ ಮೇಲೆ ಪರಿಣಾಮ ಬೀರುವ ಮಹತ್ವದ ನಿರ್ಧಾರಗಳನ್ನು ಕೈಗೆತ್ತಿಕೊಳ್ಳುವಲ್ಲಿ ಮತದಾನ
ನೆರವಾಗಲಿದೆ. ಜತೆಗೆ ನಿಮ್ಮ ಜೀವನದ ಗುಣಮಟ್ಟ ಹಾಗೂ ತಾಯ್ನಾಡಿನ ಪ್ರಗತಿಯ ಮೇಲೆ ಇದು ಅಗಾಧ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಮತ ಅಮೂಲ್ಯವಾಗಿದೆ ಹಾಗೂ ಅದರಿಂದ ಬಹುದೊಡ್ಡ ಬದಲಾವಣೆ ಸಾಧ್ಯ ವಾಗುತ್ತದೆ. ಪ್ರಜಾಪ್ರಭುತ್ವದ
ಈ ಪವಿತ್ರ ಹಬ್ಬದಲ್ಲಿ ನಿಮ್ಮ ಅಮೂಲ್ಯ ಉಪಸ್ಥಿತಿ ಮತ್ತು ಸಕಾರಾತ್ಮಕ ಭಾಗವಹಿಸುವಿಕೆಯನ್ನು ಕೋರಲಾಗಿದೆ. ಮೇ 10, 2023 ರಂದು ಬಂದು ಮತ ಚಲಾ ಯಿಸಲು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸಲಾಗಿದೆ. ಸ್ಥಳ: ನಿಮ್ಮ ಮತದಾನ ಕೇಂದ್ರ, ಸಮಯ ಬೆಳಗ್ಗೆ 7 ರಿಂದ ಸಂಜೆ 6ರ ವರೆಗೆ.
Related Articles
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಮತದಾನದಲ್ಲಿ 18 ವರ್ಷ ಮೇಲ್ಪಟ್ಟದ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾಗವಹಿಸಲೇಬೇಕು. ಆದರೆ ನಮ್ಮಲ್ಲಿ ಮತದಾನದ ವಿಚಾರವಾಗಿ ಗ್ರಾಮೀಣ
Advertisement
ಭಾಗದ ಜನರಿಗೆ ಇರುವಷ್ಟು ಆಸಕ್ತಿ ನಗರ ಪ್ರದೇಶ ಜನರಿಗೆ ಇಲ್ಲ. ಆದ್ದರಿಂದ ನಗರ ಪ್ರದೇಶದಲ್ಲೇ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋ ಜಿಸಲಾಗುತ್ತಿದೆ. ಅದರಂತೆ ಆಮಂತ್ರಣ ಪತ್ರಿಕೆ ಮೂಲಕ ಮತದಾರರ ಮನೆ ಬಾಗಿಲಿಗೆ ತೆರಳಿ ಆಹ್ವಾನಿಸಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಮಂಗಳೂರು ದಕ್ಷಿಣದಲ್ಲಿ ಅತೀ ಕಡಿಮೆ ಮತದಾನ2018ರ ಚುನಾವಣೆಯಲ್ಲಿ ಮಂಗಳೂರು ನಗರ ಪ್ರದೇಶದಲ್ಲಿ ಜಿಲ್ಲೆಯಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿತ್ತು. ಮಂಗಳೂರು ದಕ್ಷಿಣ ಕ್ಷೇತ್ರದ ಒಟ್ಟು 2,40,057 ಮತದಾರರ ಪೈಕಿ 1,63,387 ಮಂದಿ ಮಾತ್ರ ಮತದಾನ ಮಾಡಿದ್ದು ಮತದಾನ ಪ್ರಮಾಣ ಶೇ.68.05 ಆಗಿತ್ತು. ಅನಂತರದ ಸ್ಥಾನದಲ್ಲಿ ಮಂಗಳೂರು ಉತ್ತರ ಕ್ಷೇತ್ರವಿತ್ತು. ಇದು ಕೂಡ
ನಗರ ಪ್ರದೇಶವನ್ನು ಒಳಗೊಂಡ ಕ್ಷೇತ್ರವಾಗಿದ್ದು, 2,34,826 ಮಂದಿ ಮತದಾರರ ಪೈಕಿ 1, 76,104 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು ಮತದಾನ ಪ್ರಮಾಣ ಶೇ.74.98.ಆಗಿತ್ತು. ನಗರಕ್ಕೆ ಹೊಂದಿಕೊಂಡಂತಿರುವ ಇನ್ನೊಂದು ಕ್ಷೇತ್ರವಾದ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 76.30 ಮತದಾನವಾಗಿದ್ದು, 1,95, 735 ಮಂದಿಯಲ್ಲಿ 1,49, 358 ಮಂದಿ ಮತದಾನ
ಮಾಡಿದ್ದರು. ಉಳಿದಂತೆ ಮೂಡುಬಿದಿರೆ ಕ್ಷೇತ್ರದಲ್ಲಿ ಶೇ. 76.10 ಮತದಾನ ದಾಖಲಾಗಿದ್ದರೆ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳನ್ನೇ ಹೊಂದಿರುವ ಸುಳ್ಯ, ಪುತ್ತೂರು, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಶೇ. 80ಕ್ಕಿಂತ ಮೇಲ್ಪಟ್ಟು ಮತದಾನವಾಗಿತ್ತು. ನಗರ ಪ್ರದೇಶ ಅತೀ ಹೆಚ್ಚು ವಿದ್ಯಾವಂತರು ಇರುವ ಪ್ರದೇಶ. ಆದರೆ ಮತದಾನದ ವಿಚಾರಕ್ಕೆ ಬಂದಾಗ ಇವರದು ನಿರ್ಲಕ್ಷ್ಯ ಧೋರಣೆ . ಇದು ಮಂಗಳೂರು ನಗರಕ್ಕೂ ಅನ್ವಯಿಸುತ್ತದೆ. ನನ್ನ ಒಂದು ಮತದಿಂದ ಏನು ಆಗುತ್ತದೆ ಎನ್ನುವ ಭಾವನೆಯೂ
ಇರಬಹುದು. ಆದ್ದರಿಂದ ಮತದಾನ ಕೇಂದ್ರಗಳಿಗೆ ಬಂದು ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸುವ ವಿವಿಧ ಅಭಿಯಾನಗಳನ್ನು ಸ್ವೀಪ್ ಸಮಿತಿ ಮಾಡುತ್ತಿದೆ. – ಡಾ| ಕುಮಾರ್, ಸ್ವೀಪ್ ಸಮಿತಿ ಅಧ್ಯಕ್ಷರು,
ಮುಖ್ಯಕಾರ್ಯನಿರ್ವಹಣಾಧಿಕಾರಿ ದ.ಕ. ಜಿ.ಪಂ.