Advertisement

ಮಂಗಳೂರು ಅಂ. ವಿಮಾನ ನಿಲ್ದಾಣ: ಸಮಾನಾಂತರ ಟ್ಯಾಕ್ಸಿವೇಗೆ ಅನುಮತಿ

03:45 AM Feb 18, 2017 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಟ್‌ ಪ್ಯಾರಲಲ್‌ ಟ್ಯಾಕ್ಸಿ ಟ್ರಾಕ್ಸ್‌ನ 2ನೇ ಹಂತದ ನಿರ್ಮಾಣ ಮತ್ತು ದಕ್ಷಿಣ ಭಾಗದಲ್ಲಿ ಬೇಸಿಕ್‌ ಸ್ಟ್ರಿಪ್‌ನ ಗ್ರೇಡಿಂಗ್‌ ಕಾರ್ಯಕ್ಕೆ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಅನುಮತಿ ನೀಡಿದೆ. ಇದರ ವೆಚ್ಚ 98 ಕೋಟಿ ರೂ.ಗಳೆಂದು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ತಿಳಿಸಿದ್ದಾರೆ. 1200 ಮೀ. ಉದ್ದದ ಟ್ಯಾಕ್ಸಿವೇಯ ಮೊದಲ ಹಂತ ಈಗಾಗಲೇ ನಿರ್ಮಾಣವಾಗಿದ್ದು, ಕಾರ್ಯಾಚರಣೆಗೆ ಪ್ರಾಧಿಕಾರದ ಅನುಮತಿ ನಿರೀಕ್ಷೆಯಲ್ಲಿದೆ. ಟ್ಯಾಕ್ಸಿವೇ ಅನ್ನುವುದು ಟರ್ಮಿನಲ್‌ ಕಟ್ಟಡದಲ್ಲಿ ರನ್‌ವೇ ಮತ್ತು ವಿಮಾನಗಳ ನಿಲುಗಡೆ ಪ್ರದೇಶವನ್ನು ಸಂಪರ್ಕಿಸುತ್ತದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಖ್ಯೆ ಹೆಚ್ಚಿದಂತೆ, ನೂತನ ಸಮಾನಾಂತರ ಟ್ಯಾಕ್ಸಿವೇ ಹೆಚ್ಚು ಅನುಕೂಲಕರವಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next