Advertisement

ಮಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ ಬಿಲ್ಡಿಂಗ್‌ ವಿಸ್ತರಣೆ

07:55 AM Apr 04, 2018 | Harsha Rao |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ ಬಿಲ್ಡಿಂಗ್‌ನ ವಿಸ್ತರಣಾ ಯೋಜನೆಯನ್ನು 132 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಟ್ಟಡವು ಹೊಸ ಅರೈವಲ್‌ ಹಾಲ್‌ ಒಳಗೊಂಡಿರುತ್ತದೆ.

Advertisement

ವಿಸ್ತರಣಾ ಕಟ್ಟಡದ ಕಾಮಗಾರಿಗೆ ಟೆಂಡರ್‌ ವಹಿಸಿಕೊಡಲಾಗಿದ್ದು, ಶೀಘ್ರವೇ ಕೆಲಸ ಆರಂಭವಾಗಲಿದೆ. ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್‌ ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ  ತಿಳಿಸಿದರು.

ವಿಸ್ತರಣಾ ಕಟ್ಟಡದ ಪ್ರಥಮ ಮಹಡಿ ಯನ್ನು ನಿರ್ಗಮನ ಹಾಗೂ ಎರಡನೇ ಮಹಡಿಯನ್ನು ಆಗಮನಕ್ಕೆ ಮೀಸಲಿಡಲಾಗುವುದು. ಅರೈವಲ್‌ ಹಾಲ್‌ ನಿರ್ಮಾಣದಿಂದ ವಿಶೇಷ ವಾಗಿ ವಿದೇಶಿ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಪ್ರಸ್ತುತ ಇರುವ ಅರೈವಲ್‌ ಹಾಲ್‌ 250 ಜನರ ಸಾಮರ್ಥ್ಯ ಹೊಂದಿದ್ದು, ನೂತನ ಅರೈವಲ್‌ ಹಾಲ್‌ 600 ಮಂದಿ ಪ್ರಯಾಣಿಕರು ನಿಲ್ಲುವ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರ ದಟ್ಟಣೆ ಯನ್ನು ಪರಿಗಣಿಸಿ ಆಗಮನ ಹಾಲ್‌ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ತ್ವರಿತ ಗತಿಯಲ್ಲಿ  ಬೆಳವಣಿಗೆ
ಮಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲಿಯೇ ತ್ವರಿತ ಗತಿ ಯಲ್ಲಿ  ಬೆಳವಣಿಗೆ ಹೊಂದು
ತ್ತಿರುವ ವಿಮಾನ ನಿಲ್ದಾಣವೆಂದು ಪರಿಗಣಿತ ವಾಗಿದೆ. 2017- 18ನೇ ಸಾಲಿನಲ್ಲಿ ಎಪ್ರಿಲ್‌ ತನಕ ಈ ವಿಮಾನ ನಿಲ್ದಾಣದ ಮೂಲಕ 23.5 ಲಕ್ಷ ಮಂದಿ ಪ್ರಯಾ ಣಿಸಿದ್ದು, ಈ ವರ್ಷ 30 ಲಕ್ಷ ಪ್ರಯಾ ಣಿಕರು ಪ್ರಯಾಣಿಸುವ ಗುರಿ ಹೊಂದ ಲಾಗಿದೆ. ಪ್ರತಿ ದಿನ ದೇಶೀಯ, ವಿದೇಶಿ ಹಾಗೂ ವಾಣಿಜ್ಯ ವಿಮಾನಗಳು ಸೇರಿದಂತೆ ಒಟ್ಟು ವಿಮಾನಗಳ ಹಾರಾಟ 30ರಿಂದ 40ಕ್ಕೇರಿದೆ. ಸರಕು ನಿರ್ವಹಣೆಯಲ್ಲಿ  ಶೇ. 30ರಷ್ಟು ಹೆಚ್ಚಳವಾಗಿದೆ ಎಂದರು.

ಗಲ್ಫ್ ರಾಷ್ಟ್ರಗಳಿಗೆ ಹೆಚ್ಚುವರಿ ವಿಮಾನ ಯಾನ ಆರಂಭಿಸುವ ಉದ್ದೇಶ ಇದೆಯೇ ಎಂಬ ಪತ್ರ ಕರ್ತರ ಪ್ರಶ್ನೆಗೆ, ಈ ಬಗ್ಗೆ ಆಯಾ ವಿಮಾನ ಕಂಪೆನಿಗಳು  ಪ್ರಯಾಣಿಕರ ದಟ್ಟಣೆ ಯನ್ನು ಗಮನಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ವಿ.ವಿ. ರಾವ್‌ ವಿವರಿಸಿದರು.

Advertisement

ಉಚಿತ ವೈಫೈ
ವಿಮಾನ ನಿಲ್ದಾಣದಲ್ಲಿ  ಪ್ರಯಾ ಣಿಕರಿಗೆ 45 ನಿಮಿಷಗಳ ಉಚಿತ ವೈಫೈ ಸೇವೆ ಸೌಲಭ್ಯ ಶೀಘ್ರ ಲಭ್ಯವಾಗಲಿದೆ ಎಂದರು.

ವಿಮಾನ ನಿಲ್ದಾಣದಲ್ಲಿ  ಮಲ್ಲಿಗೆ ಕಂಪು !
ವಿಮಾನ ನಿಲ್ದಾಣದ ಒಳಪ್ರವೇಶಿಸುವ ಪ್ರಯಾಣಿಕರನ್ನು ಮಲ್ಲಿಗೆ ಹೂವಿನ ಸುವಾಸನೆ ಸ್ವಾಗತಿಸುತ್ತದೆ. ಟರ್ಮಿನಲ್‌ ಕಟ್ಟಡದ ಒಳಗೆ ಅಲ್ಲಲ್ಲಿ ಸ್ವಯಂ ಚಾಲಿತ ಯಂತ್ರಗಳನ್ನು ಸ್ಥಾಪಿಸಿ ಮಲ್ಲಿಗೆಯ ಪರಿಮಳ ಸೂಸುವಂತೆ ಮಾಡಲಾಗಿದೆ. ಜಾಗತಿಕವಾಗಿ ಮನ್ನಣೆ ತಂದುಕೊಟ್ಟ ಮಂಗಳೂರು ಮಲ್ಲಿಗೆ ಖ್ಯಾತಿಯನ್ನು ಇನ್ನಷ್ಟು ಪಸರಿಸುವುದು ಇದರ ಉದ್ದೇಶ ಎಂದರು.

ಇದಲ್ಲದೆ ವಿಮಾನ ನಿಲ್ದಾಣದ ಒಳಹೊರಗಿನ ಗೋಡೆಗಳಲ್ಲಿ ಮಂಗಳೂರಿನ ಪ್ರಾದೇಶಿಕತೆ, ಸಂಸ್ಕೃತಿಯನ್ನು ಸಾರುವ ಚಿತ್ರಪಟಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಸುಮಾರು 1 ಕೋಟಿ ರೂ. ವೆಚ್ಚ ಮಾಡಲಾಗುವುದು. ಇದರಿಂದಾಗಿ ಮಂಗಳೂರಿನ ಸಂಸ್ಕೃತಿಯ ಸೊಗಡನ್ನು ವಿಮಾನ ನಿಲ್ದಾಣದಲ್ಲೇ ಅವಲೋಕಿಸಬಹುದು ಎಂದು ನಿರ್ದೇಶಕ ವಿ.ವಿ. ರಾವ್‌ ಹೇಳಿದರು.

ದೇಶದಲ್ಲೇ ನಂ. 1 ಸ್ವತ್ಛ  ನಿಲ್ದಾಣದ ಹೆಗ್ಗಳಿಕೆ
ಮಂಗಳೂರು ಅಂ.ರಾ. ವಿಮಾನ ನಿಲ್ದಾಣಕ್ಕೆ ದೇಶದಲ್ಲೇ ನಂಬರ್‌ ವನ್‌ ಸ್ವತ್ಛ ನಿಲ್ದಾಣ ಎಂಬ ಹೆಗ್ಗಳಿಕೆ ಲಭಿಸಿದೆ. ಕೇಂದ್ರ ಸರಕಾರ ಫೆಬ್ರವರಿಯಲ್ಲಿ ನಡೆಸಿದ ಸ್ವತ್ಛತಾ ಸಮೀಕ್ಷೆಯಲ್ಲಿ 15 ಲಕ್ಷದಿಂದ 50 ಲಕ್ಷ ವರೆಗಿನ ಪ್ರಯಾಣಿಕರ ನಿರ್ವಹಣೆಯ ವಿಭಾಗದಲ್ಲಿ  ಮೊದಲ ಸ್ಥಾನ ಲಭಿಸಿದೆ. ದ್ವಿತೀಯ ಸ್ಥಾನ ಕೇರಳದ ತಿರುವನಂತಪುರ ಹಾಗೂ ತೃತೀಯ ಸ್ಥಾನ ಗುವಾಹಟಿ ವಿಮಾನ ನಿಲ್ದಾಣಕ್ಕೆ ಲಭಿಸಿದೆ ಎಂದು ನಿರ್ದೇಶಕ ವಿ.ವಿ. ರಾವ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next