Advertisement

ಮಂಗಳೂರು: ಹೀಗೊಂದು ವಿಶೇಷ ಪ್ರತಿಭಟನೆ !

12:39 PM May 01, 2017 | Team Udayavani |

ಮಂಗಳೂರು: ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸುವಲ್ಲಿ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಸ್ವತ್ಛ ಮಂಗಳೂರು ಕಾರ್ಯಕರ್ತರು ಹಾಗೂ ಅಗ್ಲಿ ಇಂಡಿಯನ್ಸ್‌ ಕಾರ್ಯಕರ್ತರು ಪಾಲಿಕೆ ಮುಂಭಾಗವೇ ಬ್ಯಾನರ್‌ಗಳನ್ನು ರಾಶಿ ಹಾಕುವ ಮೂಲಕ ವಿಭಿನ್ನ ರೀತಿಯಲ್ಲಿ ಎಚ್ಚರಿಕೆ ನೀಡುವ ಪ್ರತಿಭಟನ ಆಂದೋಲನವನ್ನು ಕೈಗೊಂಡಿದ್ದಾರೆ.

Advertisement

ಮಂಗಳೂರಿನ ಸುತ್ತಮುತ್ತಲಿರುವ ಕಸಗಳನ್ನು ತೆಗೆದು ಸ್ವತ್ಛಗೊಳಿಸುವುದಲ್ಲದೇ ನಗರದ ರೂಪಗೆಡಿಸುವ ಅನಧಿಕೃತ ಬ್ಯಾನರ್‌ಗಳನ್ನು ತೆಗೆದು ಸ್ವತ್ಛಗೊಳಿಸುವ ಕಾರ್ಯವನ್ನು ಸ್ವತ್ಛ ಮಂಗಳೂರು ಕಾರ್ಯಕರ್ತರು ಹಾಗೂ ಅಗ್ಲಿ ಇಂಡಿಯನ್ಸ್‌ ನಡೆಸುತ್ತಿದ್ದರು. ಅನಧಿಕೃತ ಬ್ಯಾನರ್‌ಗಳ ತೆರವಿಗಾಗಿ ಸಂಬಂಧಪಟ್ಟವರಿಗೆ ಮನವಿಯನ್ನು ಕೂಡ ಸಲ್ಲಿಸಲಾಗಿತ್ತು.

ಹಲವು ವಾರಗಳ ಕಾಲ ಸ್ವತ್ಛತಾ ಕಾರ್ಯ ನಡೆಸಿದರೂ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಮಾತ್ರ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಸ್ವತಃ ಕಾರ್ಯಕರ್ತರೇ ಮುಂದೆ ಬಂದು ಪಾಲಿಕೆಯ ಸಂಬಂಧಪಟ್ಟವರನ್ನು ಎಚ್ಚರಿಸುವ ನಿಟ್ಟಿನಲ್ಲಿ ಲಾಲ್‌ಬಾಗ್‌ ಪರಿಸರದಲ್ಲಿ ನೇತಾಡುತ್ತಿದ್ದ ಅನಧಿಕೃತ ಬ್ಯಾನರ್‌ಗಳನ್ನು ತೆಗೆದು ಪಾಲಿಕೆ ಕಚೇರಿಯ ಮುಂಭಾಗ ಗೇಟ್‌ಗೆ ಅಳವಡಿಸಿದಲ್ಲೇ ರಾಶಿ ಹಾಕಿದ್ದಾರೆ. 

ಪಾಲಿಕೆ ಇನ್ನೂ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಈ ಕೆಲಸಕ್ಕಾಗಿಯೇ ಪ್ರತ್ಯೇಕ ತಂಡವನ್ನು ಕಾರ್ಯಾಚರಣೆಗೆ ಇಳಿಸುವ ಉದ್ದೇಶವನ್ನು ಸ್ವತ್ಛ ಮಂಗಳೂರಿನ ಹಿರಿಯ ಕಾರ್ಯಕರ್ತರು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next