Advertisement

ಅಪಘಾತ: ಮಂಗಳೂರು ಮೂಲದ ನಿವೃತ್ತ ಹಿರಿಯ ಅಧಿಕಾರಿ ಸಾವು

10:51 AM Dec 06, 2018 | Team Udayavani |

ಮಂಗಳೂರು: ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಮಂಗಳೂರಿನ ಬೊನಿಫಾಸ್‌ ಗೋಡ್‌ಫಿÅ ವಿನ್‌ಸ್ಟನ್‌ ರಸ್ಕಿನ್ಹಾ (72) ಅವರು ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಮೂವರು ಪ‌ುತ್ರರು ಮತ್ತು ಓರ್ವ ಪ‌ುತ್ರಿಯನ್ನು ಅಗಲಿದ್ದಾರೆ. ನ. 28ರಂದು  ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ಅವರು ಡಿ. 4 ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 

Advertisement

ಲೋಕೋಪಯೋಗಿ ಇಲಾಖೆ ಅಧಿಕಾರಿಯಾಗಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದ ಅವರು ಬಳಿಕ ರಾಜ್ಯ ಸರಕಾರದ (ಪಿಡಬ್ಲ್ಯುಡಿ) ಕಾರ್ಯದರ್ಶಿಯಾಗಿದ್ದರು. ಬಿಬಿಎಂಪಿಯಲ್ಲಿ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ನಿವೃತ್ತಿ ಬಳಿಕ ಮಂಗಳೂರಿನ ಪಾಂಡೇ ಶ್ವರದಲ್ಲಿ ನೆಲೆಸಿದ್ದ ಅವರು ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ನ. 28ರಂದು ರಾತ್ರಿ 9ಕ್ಕೆ  ರಸ್ತೆ ಬದಿ ನಿಂತಿದ್ದಾಗ  ವೇಗವಾಗಿ ಬಂದ ಬೈಕ್‌  ಢಿಕ್ಕಿ ಹೊಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next