Advertisement

ಮಂಗಳೂರು:ಗಾಳಿ,ಸಿಡಿಲಿಗೆ ಇಬ್ಬರು ಬಲಿ, ಹಲವೆಡೆ ಹಾನಿ 

01:31 PM May 03, 2017 | |

ಮಂಗಳೂರು : ಜಿಲ್ಲೆಯಲ್ಲಿ  ಮಂಗಳವಾರ ಸಂಜೆ ಗುಡುಗು ಮಿಂಚು, ಗಾಳಿ ಸಹಿತ ಮಳೆಯಾಗಿದ್ದು, ಬಜಪೆಯ ಎಕ್ಕಾರಿನಲ್ಲಿ ಹೊಟೇಲ್‌ವೊಂದರ ಮೇಲೆ ಮರ ಬಿದ್ದು ಮಾಲಿಕ ಸಾವನ್ನಪ್ಪಿದ್ದರೆ, ಮೂಡಬಿದಿರಿಗೆ ಸಿಡಿಲಿಗೆ ಬಾಲಕ ಬಲಿಯಾಗಿದ್ದಾನೆ. 

Advertisement

ಎಕ್ಕಾರಿನಲ್ಲಿ ರಸ್ತೆ ಬದಿಯಲ್ಲಿರುವ ಹೊಟೇಲ್‌ ಮೇಲೆ ಬೃಹತ್‌ ಅರಳಿ ಮರ ಬಿದ್ದ ಪರಿಣಾಮ ಮಾಲಿಕ ಸುಂದರ ಪೂಜಾರಿ (48)ಅವರು ಕಲ್ಲುಗಳ ಅಡಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದು , ಅವರ ಪತ್ನಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅವಘಡ ನಡೆಯುವ ವೇಳೆ ಮಗನೂ ಹೊಟೇಲ್‌ನಲ್ಲಿದ್ದ ಎಂದು ತಿಳಿದು ಬಂದಿದೆ. ಬಜಪೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮೂಡಬಿದಿರೆಯ ಬಲಾಯಿಪಾದೆಯಲ್ಲಿ ಸಿಡಿಲು ಬಡಿದ ಪರಿಣಾಮ ಲವಲೇಶ(15)ಎಂಬ ಬಾಲಕ ಮಲಗಿದ್ದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ರಾತ್ರಿ 9.50 ರ ವೇಳೆಗೆ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯ ಹಲವೆಡೆ ಗಾಳಿ ಮಳೆಗೆ ವಿದ್ಯುತ್‌ ಕಂಬಗಳು , ಮರಗಳು ಧರಾಶಾಯಿಯಾಗಿ ಅಪಾರ ಹಾನಿ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next