Advertisement

ಮಂಗಳವಾರ ರಜಾ ದಿನ ಡಿಸೆಂಬರ್‌ನಲ್ಲಿ ತೆರೆಗೆ

04:59 PM Nov 13, 2020 | Suhan S |

ಮಂಗಳವಾರ ರಜಾದಿನ ಚಿತ್ರದ ಶೀರ್ಷಿಕೆ ಹಾಡು ನವೆಂಬರ್‌ 24ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಯೋಗರಾಜ್‌ ಭಟ್ ಬರೆದಿರುವ ಈ ಚಿತ್ರದ ಶೀರ್ಷಿಕೆ ಹಾಡನ್ನು ವಿಜಯಪ್ರಕಾಶ್‌ ಹಾಡಿದ್ದಾರೆ. ಪ್ರಜೋತ್‌ ಡೇಸಾ ಸಂಗೀತ ನೀಡಿರುವ ಈ ಹಾಡುಲಹರಿ ಮ್ಯೂಸಿಕ್‌ ಮೂಲಕ ಬಿಡುಗಡೆಯಾಗಲಿದೆ.

Advertisement

ಕ್ಷೌರಿಕನ ಸುತ್ತ ಹೆಣೆಯಲಾಗಿರುವ ಕಥಾ ಹಂದರ ಹೊಂದಿದೆ ಈ ಸಿನಿಮಾ. ಈ ಚಿತ್ರದ ಶೀರ್ಷಿಕೆ ಗೀತೆ ಕೂಡ ಸವಿತಾ ಸಮಾಜದವರ ಕೀರ್ತಿ ಸಾರುವ ಹಾಗಿದೆ ಎನ್ನುತ್ತಾರೆ ನಿರ್ದೇಶಕ ಯುವಿನ್‌.ತ್ರಿವರ್ಗ ಫಿಲಂಸ್‌ ಲಾಂಛನದಲ್ಲಿನಿರ್ಮಾಣವಾಗಿರುವ ಈ ಚಿತ್ರದ  ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಬಹುತೇಕ ಭಾಗದ ಚಿತ್ರೀಕರಣ ನಡೆದಿದೆ. ಯವಿನ್‌ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ನಾಯಕನಾಗಿ ಬಿಗ್‌ ಬಾಸ್‌ ಖ್ಯಾತಿಯ ಚಂದನ್‌ ಆಚಾರ್‌ ನಟಿಸಿದ್ದಾರೆ. ಚಂದನ್‌ ಆಚಾರ್‌ ಈ ಚಿತ್ರದಲ್ಲಿ ಕ್ಷೌರಿಕನ ಪಾತ್ರ ನಿರ್ವಹಣೆ ಮಾಡಿದ್ದಾರೆ. ಲಾಸ್ಯ ನಾಗರಾಜ್ ಈ ಚಿತ್ರದ ನಾಯಕಿ.

ಜಹಂಗೀರ್‌, ರಜನಿಕಾಂತ್‌, ಗೋಪಾಲ್‌ ದೇಶ ಪಾಂಡೆ, ನಂದನ್‌ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಾಲ್ಕು ಹಾಡುಗಳಿದ್ದು ಪ್ರಜೋತ್‌ ಡೇಸಾ ಸಂಗೀತ ನೀಡಿದ್ದಾರೆ. ಋತ್ವಿಕ್‌ ಮುರಳೀಧರ್‌ ಹಿನ್ನೆಲೆ ಸಂಗೀತ, ಉದಯ್‌ ಲೀಲಾ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಡಿಸೆಂಬರ್‌ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ನಡೆಯುತ್ತಿದೆ.­

Advertisement

Udayavani is now on Telegram. Click here to join our channel and stay updated with the latest news.

Next