Advertisement

ದುರಸ್ತಿಗೆ ಕಾಯುತ್ತಿದೆ ಮಂಗಳಪದವು-ಕೋಡಪದವು-ಕಿನಿಲ ರಸ್ತೆ

09:55 PM Jan 26, 2021 | Team Udayavani |

 

Advertisement

ವಿಟ್ಲ: ವಿಟ್ಲಕಸಬಾ, ವೀರಕಂಬ ಮತ್ತು ವಿಟ್ಲಪಟ್ನೂರು ಗ್ರಾಮಗಳನ್ನು ಸಂಪರ್ಕಿಸುವ ಸುಮಾರು 6 ಕಿ.ಮೀ. ದೂರದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಜಿ.ಪಂ. ಇಲಾಖೆ ವ್ಯಾಪ್ತಿಯ ಈ ರಸ್ತೆಗೆ ಮರುಡಾಮರು ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಇದು ಮಂಗಳಪದವು-ಕೋಡಪದವು- ಕಿನಿಲ ರಸ್ತೆ. ವಿಟ್ಲ-ಕಲ್ಲಡ್ಕ ಅಂತಾರಾಜ್ಯ ಹೆದ್ದಾರಿಯಿಂದ, ವಿಟ್ಲಕಸಬಾ ಗ್ರಾಮದ ಮಂಗಳಪದವಿನಿಂದ ಕೋಡಪದವು, ಕೋಡಪದವಿನಿಂದ ಕಿನಿಲಕ್ಕೆ ಸಾಗುವ ಈ ರಸ್ತೆ ಹಿಂದಿನಿಂದಲೂ ಕೂಡು ರಸ್ತೆಯಾಗಿದೆ. ಇದರಲ್ಲಿ ಮಂಗಳಪದವಿನಿಂದ ಕೋಡ ಪದವು ತನಕದ 3.6 ಕಿ.ಮೀ. ದೂರದ ರಸ್ತೆಗೆ 2006ರಲ್ಲಿ ಡಾಮರು ಹಾಕಲಾಗಿತ್ತು. ಬಳಿಕ ಕೆಲವೊಮ್ಮೆ ತೇಪೆ ಹಚ್ಚುವ ಕಾರ್ಯ ಬಿಟ್ಟರೆ, ಈ ರಸ್ತೆಯ ಅಭಿವೃದ್ಧಿ ನಡೆದಿಲ್ಲ.

ಮೂರು ಗ್ರಾಮ ಸಂಪರ್ಕ :

ಈ ರಸ್ತೆ ವಿಟ್ಲಕಸಬಾ, ವೀರಕಂಬ ಮತ್ತು ವಿಟ್ಲಪಟ್ನೂರು ಗ್ರಾಮಗಳನ್ನು ಸಂಪರ್ಕಿಸುತ್ತದೆ. 1 ಕಿ.ಮೀ. ದೂರದ ರಸ್ತೆ ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿದೆ. ಇದಕ್ಕೆ ಪ.ಪಂ.ನಿಂದ 20 ಲಕ್ಷ ರೂ.ವೆಚ್ಚದ ನಗರೋತ್ಥಾನ ಅನುದಾನ ಬಿಡುಗಡೆಗೊಳಿಸಿ, 1 ಕಿ.ಮೀ. ಅಭಿವೃದ್ಧಿ ಪಡಿಸಲಾಗಿದೆ.

Advertisement

ಚುನಾವಣೆ ಸಂದರ್ಭದಲ್ಲೇ ಈ ರಸ್ತೆ ಅಭಿ ವೃದ್ಧಿಗೆ ಬೇಡಿಕೆಯಿತ್ತು. ಅಲ್ಲಿಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳುತ್ತೇನೆ. ಆದರೆ ರಸ್ತೆಯನ್ನು ಪೂರ್ತಿ ಅಭಿವೃದ್ಧಿ ಪಡಿಸಬೇಕಾದಲ್ಲಿ ದೊಡ್ಡ ಮೊತ್ತದ ಅನುದಾನ ಬೇಕು. ಈ ಬಗ್ಗೆ ಶಾಸಕರ ಬಳಿ ವಿನಂತಿ ಮಾಡುತ್ತೇನೆ.  ಮಂಜುಳಾ ಮಾಧವ ಮಾವೆ,  ಜಿ.ಪಂ. ಸದಸ್ಯರು

2006ರಲ್ಲಿ ವಿಟ್ಲ ಶಾಸಕರಾಗಿದ್ದ ಪದ್ಮನಾಭ ಕೊಟ್ಟಾರಿ ಅವರ ಅವಧಿಯಲ್ಲಿ ಈ ರಸ್ತೆಗೆ ಡಾಮರು ಹಾಕಲಾಗಿದೆ. ಆ ಬಳಿಕ ಈ ರಸ್ತೆ ಅಭಿ ವೃದ್ಧಿ ಕಂಡಿಲ್ಲ. ತೇಪೆ ಹಚ್ಚುವುದು ಬೇಡ. ಮರುಡಾಮರು ಹಾಕಿ, ರಸ್ತೆ ಅಗಲಗೊಳಿಸಿ, ಸುಸಜ್ಜಿತ ರಸ್ತೆಯನ್ನಾಗಿಸಬೇಕು.  ವಿಷ್ಣು ಭಟ್‌ ಸಾಂದೀಪನಿ,  ಸ್ಥಳೀಯರು

 

-ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next