Advertisement

ಹಿಮದ ಮಡಿಲಲ್ಲಿ ಸ್ತ್ರೀ ಶಕ್ತಿ

06:00 AM Mar 20, 2018 | Team Udayavani |

ನವದೆಹಲಿ: ಹಿಮಚ್ಛಾದಿತ ಪ್ರದೇಶದಲ್ಲಿ ಒಂದು ದಿನವನ್ನೂ ಕಳೆಯದ ಭಾರತದ ಮಹಿಳಾ ವಿಜ್ಞಾನಿ ಮಂಗಳಾ ಮಣಿ, ನಿರ್ದಿಷ್ಟ ಪ್ರಯೋಗಕ್ಕಾಗಿ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಅಂಟಾರ್ಟಿಕಾದಲ್ಲಿ ಉಳಿಯುವ ಮೂಲಕ  ಸ್ತ್ರೀ ಶಕ್ತಿಯ  ಹೊಸ ಸಾಧ್ಯತೆಯನ್ನೂ ಸಾಬೀತುಪಡಿಸಿದ್ದಾರೆ.  

Advertisement

ಭೂ ಮಂಡಲದಲ್ಲೇ ಅತ್ಯಂತ ಕಡಿಮೆ ಅಂದರೆ, ಉಷ್ಣಾಂಶ “- 90 ಡಿಗ್ರಿ ಸೆಲ್ಸಿಯಸ್‌’ ಇರುವ ಅಂಟಾರ್ಟಿಕಾದ ಚಳಿಗಾಲದಲ್ಲಿ ಆಗುವ ಬದಲಾವಣೆಗಳನ್ನು ಅಧ್ಯಯನ ಮಾಡಲೆಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ),  23 ಜನರ ವಿಜ್ಞಾನಿಗಳ ತಂಡವನ್ನು ಕಳುಹಿಸಿಕೊಟ್ಟಿತ್ತು. ಆ ತಂಡದಲ್ಲಿದ್ದ ಏಕೈಕ ಮಹಿಳೆ ಮಂಗಳಾ. 2016ರಿಂದ ಮಧ್ಯಭಾಗದಿಂದ 2017ರ ಅಂತ್ಯದವರೆಗೆ,  403 ದಿನಗಳ ಕಾಲ ಮಂಗಳಾ ತಮ್ಮ ತಂಡದ ಜತೆಯಲ್ಲಿದ್ದರು.

“ಅಂಟಾರ್ಟಿಕಾದ ಇಸ್ರೋದ ಕೇಂದ್ರವಾದ “ಭಾರತಿ’ಯಲ್ಲೇ ತಂಡವನ್ನು ಉಳಿಸಲಾಗಿತ್ತು. ಪ್ರತಿನಿತ್ಯ ಹೊರಗಡೆ ಹೋಗುವುದೇ ಕಷ್ಟವಾಗಿತ್ತು. ಪೋಲಾರ್‌ ಜ್ಯಾಕೆಟ್‌ಗಳನ್ನು ಧರಿಸಿ, ಅಧ್ಯಯನಕ್ಕಾಗಿ 2-3 ಗಂಟೆಗಳ ಕಾಲ ಹೋಗಿದ್ದರೂ, ಬೇಗನೇ ಕೇಂದ್ರಕ್ಕೆ ಹಿಂದಿರುಗಿ “ವಾರ್ಮ್-ಅಪ್‌’ ಮಾಡಿಕೊಳ್ಳಬೇಕಿತ್ತು’ ಎಂದಿದ್ದಾರೆ. ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗಿತ್ತು ಎಂದಿದ್ದಾರೆ. ರಷ್ಯಾ, ಚೀನಾದ ತಂಡಗಳು ಅಲ್ಲಿಗೆ  ಬಂದಿದ್ದರೂ, ಮಹಿಳಾ ಸದಸ್ಯರೇ ಇರಲಿಲ್ಲ  ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next