Advertisement

ಮಂಗಳಾ ಕಪ್‌ ಶಟ್ಲ್ ಬ್ಯಾಡ್ಮಿಂಟನ್‌ ಸಂಪನ್ನ

10:54 PM Mar 06, 2022 | Team Udayavani |

ಮಂಗಳೂರು: ಮಂಗಳಾ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ವತಿಯಿಂದ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ “ಮಂಗಳಾ ಕಪ್‌ ಬ್ಯಾಡ್ಮಿಂಟನ್‌-2022′ ರವಿವಾರ ಸುಸಂಪನ್ನಗೊಂಡಿತು. ವಿವಿಧ ವಿಭಾಗಗಳಲ್ಲಿ ಚಾಂಪಿಯನ್‌ ಆದವರಿಗೆ ಪ್ರಶಸ್ತಿ ವಿತರಿಸಲಾಯಿತು.

Advertisement

ರವಿವಾರ ಸಂಜೆ ಯು.ಎಸ್‌. ಮಲ್ಯ ಸಭಾಂಗ ಣದಲ್ಲಿ ನಡೆದ ಸಮಾರೋಪ‌ದಲ್ಲಿ ಮುಕ್ಕ ಗ್ರೂಪ್‌ನ ಮುಖ್ಯಸ್ಥ ಕೆ. ಮಹಮ್ಮದ್‌ ಹಾರೀಸ್‌ ಮುಖ್ಯ ಅತಿಥಿಯಾಗಿದ್ದರು. ದ.ಕ. ಜಿಲ್ಲಾ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ನ ಕಾರ್ಯದರ್ಶಿ ಐವಾನ್‌ ಪತ್ರಾವೊ, ದ.ಕ. ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ನ ಉಪಾಧ್ಯಕ್ಷ ಗಿರಿಧರ್‌ ಶೆಟ್ಟಿ, ಮಂಗಳೂರು ಎಂಆರ್‌ಪಿಎಲ್‌ನ ಎಚ್‌ಆರ್‌ ವಿಭಾಗ ಗ್ರೂಪ್‌ ಜನರಲ್‌ ಮ್ಯಾನೇಜರ್‌ ಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.

ಮಂಗಳಾ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ನ ಅಧ್ಯಕ್ಷ ಅಶೋಕ್‌ ಕುಮಾರ್‌ ಹೆಗ್ಡೆ ಅವರು ಸಂಸ್ಥೆಯ ಸಾಧನೆಯನ್ನು ವಿವರಿಸಿದರು. ಕಾರ್ಯದರ್ಶಿ ಶಿವಪ್ರಸಾದ್‌ ಪ್ರಭು ವಂದಿಸಿದರು. ಆಡಳಿತ ಸಮಿತಿಯ ಸಲಹೆಗಾರ ಪರಿಮೇಳಝಗನ್‌ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಓದಿದರು. ಸುಮಿತ್‌ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು.

ಮಂಗಳಾ ಕಪ್‌ ವಿಜೇತರು
– 13 ಬಾಲಕರ ಸಿಂಗಲ್ಸ್‌: ಸಾಯಿ ಪುಷ್ಕರ್‌, ಡಬಲ್ಸ್‌: ಅಮಿತ್‌ ರಾಜ್‌ ಎನ್‌.-ಹಾರ್ದಿಕ್‌ ದಿವ್ಯಾನ್ಶಿ.
– 13ರ ಬಾಲಕಿಯರ ಸಿಂಗಲ್ಸ್‌: ರಿದಿಮಾ, ಡಬಲ್ಸ್‌: ಅಮೃತಾ-ರಿದಿಮಾ.
– 16ರ ವಿಭಾಗದ ಬಾಲಕರ ಸಿಂಗಲ್ಸ್‌: ಅಭಿಷೇಕ್‌, ಡಬಲ್ಸ್‌: ಕ್ಷಿತಿಜ್‌ ದೀಪಕ್‌- ಚೆಂಗಪ್ಪ.
– 16ರ ವಿಭಾಗದ ಬಾಲಕಿಯರ ಸಿಂಗಲ್ಸ್‌: ಪ್ರೇರಣಾ, ಡಬಲ್ಸ್‌: ದೀಪಿಕಾ-ಶ್ರವಂತಿ.
– 19ರ ವಿಭಾಗದ ಬಾಲಕರ ಸಿಂಗಲ್ಸ್‌: ಆದಿತ್ಯ ದಿವಾಕರ್‌. ಡಬಲ್ಸ್‌: ಆದಿತ್ಯ ದಿವಾಕರ್‌-ಕಿಶಾಲ್‌ ಗಣಪತಿ.
– 19ರ ಬಾಲಕಿಯರ ಸಿಂಗಲ್ಸ್‌: ಗ್ಲೋರಿಯಾ ವಿ.ಎ., ಡಬ್ಬಲ್ಸ್‌: ಗ್ಯಾನದಾ-ಸಾನಿಯಾ.
– ಪುರುಷರ ಸಿಂಗಲ್ಸ್‌: ಡ್ಯಾನಿಯಲ್‌ ಫರೀದ್‌, ಪುರುಷರ ಡಬಲ್ಸ್‌: ಪ್ರಕಾಶ್‌ ರಾಜ್‌-ಕುಶಾಲ್‌ ರಾಜ್‌.
-ಮಹಿಳೆಯರ ಸಿಂಗಲ್ಸ್‌: ಪ್ರೇರಣಾ ಶೇಟ್‌, ಮಹಿಳೆಯರ ಡಬಲ್ಸ್‌: ಗ್ಯಾನದಾ-ಸಾನಿಯಾ.
– ಮಿಕ್ಸೆಡ್‌ ಡಬ್ಬಲ್‌: ಅನುಷಾ-ಲೋಕೇಶ್‌ ವಿಶ್ವನಾಥ್‌.
– ಮಹಿಳೆಯರ ಡಬಲ್ಸ್‌ 30 ಪ್ಲಸ್‌ ವಿಭಾಗ: ನಿಶ್ಚಿತಾ-ವರ್ಷಾ.
– ಪುರುಷರ ಡಬಲ್ಸ್‌ 35 ಪ್ಲಸ್‌ ವಿಭಾಗ: ಗೋಪಿನಾಥ್‌-ರಿಯಾಜ್‌ ಅಹಮ್ಮದ್‌.
– ಪುರುಷರ ಡಬಲ್ಸ್‌ 45 ಪ್ಲಸ್‌ ವಿಭಾಗ: ಮಾರ್ಕೋಸ್‌-ಝೇವಿಯರ್‌(ಪ್ರ).

Advertisement

Udayavani is now on Telegram. Click here to join our channel and stay updated with the latest news.

Next