Advertisement

ಕುರಿ ಪ್ರತಾಪ್, ಸಾಧು ಅಭಿನಯದ “ಮನೆ ಮಾರಾಟಕ್ಕಿದೆ” ಸಿನಿಮಾ ಟ್ರೇಲರ್ ಭರ್ಜರಿ ಸದ್ದು

09:46 AM Nov 12, 2019 | Nagendra Trasi |

ಬೆಂಗಳೂರು: ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಎರಡು ದಿನಗಳಲ್ಲಿಯೇ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

Advertisement

ಕೇವಲ ಎರಡು ದಿನಗಳಲ್ಲಿಯೇ ಮನೆ ಮಾರಾಟಕ್ಕಿದೆ ಚಿತ್ರದ ಟ್ರೇಲರ್ ಅನ್ನು ಬರೋಬ್ಬರಿ 13ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಶ್ರಾವಣಿ ಸುಬ್ರಮಣ್ಯ ಮತ್ತು ಶ್ರೀಕಂಠ ಚಿತ್ರಗಳ ಖ್ಯಾತಿಯ ಮಂಜು ಸ್ವರಾಜ್ ಅವರ ನಿರ್ದೇಶನದ ಹಾರರ್-ಹಾಸ್ಯ ಮಿಶ್ರಿತ ಚಿತ್ರಕಥೆ ಮನೆ ಮಾರಾಟ ಸಿನಿಮಾದಲ್ಲಿದೆ.

ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಮೊದಲ ಬಾರಿಗೆ ಕುರಿ ಪ್ರತಾಪ್ ನಟಿಸಿದ್ದು, ಸಿನಿಮಾದಲ್ಲಿ ಸಾಧು ಕೋಕಿಲಾ, ಚಿಕ್ಕಣ್ಣ, ರವಿಶಂಕರ್ ಗೌಡ, ಕುರಿ ಪ್ರತಾಪ್ ನಟಿಸಿದ್ದು,  ಹಾಸ್ಯ ನಟರ ದಂಡು ಚಿತ್ರದಲ್ಲಿದೆ.

ಅಂದ ಹಾಗೆ ಮನೆ ಮಾರಾಟಕ್ಕಿದೆ ಸಿನಿಮಾದಲ್ಲಿ ಶೃತಿ ಹರಿಹರನ್, ಕಾರುಣ್ಯ ರಾಮ್ ನಾಯಕಿಯರಾಗಿದ್ದಾರೆ. ಚಿತ್ರಕ್ಕೆ ಎಸ್ .ವಿ. ಬಾಬು ಬಂಡವಾಳ ಹೂಡಿದ್ದು, ನವೆಂಬರ್ 15ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next