Advertisement

ಮಂಡ್ಯದಲ್ಲಿ ಲೀಥಿಯಂ ನಿಕ್ಷೇಪ : ಅಟೋಮಿಕ್‌ ಮಿನರಲ್ಸ್‌ ಡೈರೆಕ್ಟೊರೇಟ್‌ ಸಂಶೋಧನೆ

08:56 AM Feb 20, 2020 | sudhir |

ಹೊಸದಿಲ್ಲಿ: ವಿದ್ಯುತ್‌ ಕಾರುಗಳ ತಯಾರಿಕೆಗೆ ಅಗತ್ಯವಾದ ಬ್ಯಾಟರಿಗಳ ತಯಾರಿಕೆಗೆ ಬೇಕಾಗುವ ಲೀಥಿಯಂ ನಿಕ್ಷೇಪ ಹೇರಳವಾಗಿ ಮಂಡ್ಯದಲ್ಲಿ ಇದೆ!
ಭವಿಷ್ಯದಲ್ಲಿ ವಿದ್ಯುತ್‌ ಕಾರುಗಳ ಬಾಗಿಲು ತೆರೆಯುತ್ತಿರುವಂತೆಯೇ, ರಾಜ್ಯದಲ್ಲಿ ಇಂಥ ನಿಕ್ಷೇಪ ಪತ್ತೆಯಾಗಿರುವುದು ವಾಣಿಜ್ಯಿಕ ದೃಷ್ಟಿಯಿಂದ ಮಹತ್ವದ್ದಾಗಿದೆ.

Advertisement

ಕೇಂದ್ರ ಸರಕಾರದ ಅಣುಶಕ್ತಿ ಇಲಾಖೆಯ ಅಟೋಮಿಕ್‌ ಮಿನರಲ್ಸ್‌ ಡೈರೆಕ್ಟೊರೇಟ್‌ 14,100 ಟನ್‌ಗಳಷ್ಟು ಲೀಥಿಯಂ ಇರುವ ನಿಕ್ಷೇಪ ಪತ್ತೆ ಮಾಡಿದೆ. ಬ್ಯಾಟರಿ ತಂತ್ರಜ್ಞಾನ ಸಂಶೋಧಕ, ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್‌ಸಿ) ಗೌರವ ಪ್ರಾಧ್ಯಾಪಕ ಎನ್‌. ಮುನಿಚಂದ್ರಯ್ಯ ಈ ಬಗ್ಗೆ “ಕರೆಂಟ್‌ ಸೈನ್ಸ್‌’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಬಹಿರಂಗಪಡಿಸಿದ್ದಾರೆ.

ಒಟ್ಟಾರೆಯಾಗಿ ಗರಿಷ್ಠ 30,300 ಟನ್‌ ನಿಕ್ಷೇಪ ಇರುವ ಸಾಧ್ಯತೆ ಇದೆ ಎಂದು ಇದರಲ್ಲಿ ಉಲ್ಲೇಖೀಸಲಾಗಿದೆ.

2017ನೇ ಸಾಲಿನಲ್ಲಿ 384 ಮಿಲಿಯ ಲೀಥಿಯಂ ಬ್ಯಾಟರಿಗಳನ್ನು ಭಾರತ ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. 2019ರಲ್ಲಿ ಅದರ ಪ್ರಮಾಣ 1.2 ಬಿಲಿಯನ್‌ಗಳಿಗೆ ಏರಿಕೆಯಾಗಿದೆ. ವಿದ್ಯುತ್‌ ಕಾರುಗಳ ತಯಾರಿಕೆಗೆ ಲೀಥಿಯಂ ಬ್ಯಾಟರಿ ಅಗತ್ಯವಿದ್ದರೂ ದೇಶದಲ್ಲಿ ಸಾಕಷ್ಟು ಕಚ್ಚಾ ವಸ್ತು ಲಭ್ಯವಿದೆಯೇ ಎಂಬ ಬಗ್ಗೆ ಅಧ್ಯಯನವನ್ನೂ ನಡೆಸಲಾಗಿಲ್ಲ ಎಂದು ಎನರ್ಜಿ ಸ್ಟೋರೇಜ್‌ನ‌ ಅಧ್ಯಕ್ಷ ಡಾ| ರಾಹುಲ್‌ ಹೇಳಿದ್ದಾರೆ.

14,100 ಟನ್‌ ಲೀಥಿಯಂ
0.5×5 ಕಿ.ಮೀ. ವ್ಯಾಪ್ತಿಯಲ್ಲಿ 14,100 ಟನ್‌ಗಳಷ್ಟು ಲೀಥಿಯಂ ಸಿಗುವ ಸಾಧ್ಯತೆ ಇದೆ ಎಂದು ಮುನಿ ಚಂದ್ರಯ್ಯ ಅಂದಾಜಿಸಿದ್ದಾರೆ. ಚಿಲಿ, ಆಸ್ಟ್ರೇಲಿಯ, ಪೋರ್ಚುಗಲ್‌ಗ‌ಳಲ್ಲಿ ಸಿಗುವಂತೆ ಹೇರಳ ಪ್ರಮಾಣದಲ್ಲಿ ಲೀಥಿಯಂ ಸಿಗಲಾರದು. ಚಿಲಿಯಲ್ಲಿ 8.6 ಮಿಲಿಯ ಟನ್‌, ಆಸ್ಟ್ರೇಲಿಯದಲ್ಲಿ 2.8 ಮಿಲಿಯ ಟನ್‌, ಆರ್ಜೆಂಟೀನದಲ್ಲಿ 1.7 ಮಿಲಿಯ ಟನ್‌, ಪೋರ್ಚುಗಲ್‌ನಲ್ಲಿ ವಾರ್ಷಿಕವಾಗಿ 60 ಸಾವಿರ ಟನ್‌ಗಳಷ್ಟು ಲೋಹ ಸಿಗುತ್ತದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ. ಆದರೆ ಜಿಲ್ಲೆಯ ಯಾವ ಭಾಗದಲ್ಲಿ ಎಂಬ ಅಂಶದ ಬಗ್ಗೆ ಪ್ರಸ್ತಾವ ಮಾಡಲಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next