Advertisement

ಜಿಪಂ, ತಾಪಂ ಕ್ಷೇತ್ರಗಳ ವಿಂಗಡಣೆ

01:07 PM Apr 02, 2021 | Team Udayavani |

ಮಂಡ್ಯ: ಮುಂದಿನ ತಿಂಗಳು ಜಿಲ್ಲಾ ಪಂಚಾಯಿತಿಹಾಗೂ ತಾಲೂಕು ಪಂಚಾಯಿತಿಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲೆಯ 7 ತಾಲೂಕುಗಳ ಜಿಪಂ ಹಾಗೂ ತಾಪಂ ಕ್ಷೇತ್ರಗಳ ವಿಂಗಡಣೆ ಮಾಡಿ ರಾಜ್ಯ ಚುನಾವಣಾ ಆಯೋಗ ಅಂತಿಮ ಪಟ್ಟಿಗೆ ಆದೇಶ ಹೊರಡಿಸಿದೆ.

Advertisement

5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಹೆಚ್ಚಳ ಮಾಡಿತಾಲೂಕು ಪಂಚಾಯಿತಿಗಳನ್ನುಕಡಿತಗೊಳಿಸಿ ಗ್ರಾಮ, ಜನಸಂಖ್ಯೆ,ಕ್ಷೇತ್ರವಾರು ವಿಂಗಡಿಸಿ ಸಲ್ಲಿಸುವಂತೆಜಿಪಂ ಹಾಗೂ ತಾಪಂ ಆಡಳಿತಕ್ಕೆಸೂಚಿಸಿತ್ತು. ಅದರಂತೆ ವಿಂಗಡಿಸಿ ಅಂತಿಮಪಟ್ಟಿ ಸಲ್ಲಿಸಲಾಗಿತ್ತು. ಅದಕ್ಕೆ ಈಗ ರಾಜ್ಯಚುನಾವಣಾ ಆಯೋಗ ಅಂತಿಮ ಮುದ್ರೆ ಒತ್ತಿದೆ.

ಕ್ಷೇತ್ರಗಳ ಹೆಸರು ಬದಲಾವಣೆ: ಮಂಡ್ಯ ಜಿಲ್ಲೆಯಜಿಲ್ಲಾ ಪಂಚಾಯಿತಿಗೆ ಕಳೆದ ಬಾರಿ 41 ಕ್ಷೇತ್ರಗಳಿದ್ದವು.ಆದರೆ ಈ ಬಾರಿ ಆ ಕ್ಷೇತ್ರಗಳ ಸಂಖ್ಯೆಯನ್ನು5ಕ್ಕೇರಿಸಿದ್ದು, ಒಟ್ಟು 46 ಕ್ಷೇತ್ರಗಳನ್ನು ನಿಗದಿಪಡಿಸಿದೆ.ಮಂಡ್ಯ ತಾಲೂಕಿನಲ್ಲಿ 7 ಕ್ಷೇತ್ರಗಳಿದ್ದವು. ಸಾತನೂರುಕ್ಷೇತ್ರವನ್ನು ಸೇರಿಸಲಾಗಿದ್ದು, ಒಟ್ಟು 8 ಕ್ಷೇತ್ರಗಳನ್ನಾಗಿ ಮಾಡಲಾಗಿದೆ. ಇದರಲ್ಲಿ ದುದ್ದ ಕ್ಷೇತ್ರವನ್ನು ಶಿವಳ್ಳಿ ಹಾಗೂ ತಗ್ಗಹಳ್ಳಿ ಕ್ಷೇತ್ರವನ್ನು ಸಂತೆಕಸಲಗೆರೆ ಎಂದು ಬದಲಾಯಿಸಲಾಗಿದೆ.

ಮದ್ದೂರು: ತಾಲೂಕಿನಲ್ಲೂ ಕದಲೂರು ಒಂದು ಕ್ಷೇತ್ರ ಹೆಚ್ಚುವರಿ ಮಾಡಲಾಗಿದ್ದು, ಒಟ್ಟು 8ಕ್ಷೇತ್ರಗಳಿವೆ. ಮಳವಳ್ಳಿ ತಾಲೂಕಿನಲ್ಲೂ ಬಾಣಸಮುದ್ರಕ್ಷೇತ್ರ ಹೆಚ್ಚುವರಿ ಮಾಡಿದ್ದು ಒಟ್ಟು 8 ಕ್ಷೇತ್ರಗಳನ್ನಾಗಿವಿಂಗಡಿಸಲಾಗಿದೆ. ಇದರಲ್ಲಿ ದೊಡ್ಡಬೂವಳ್ಳಿಕ್ಷೇತ್ರವನ್ನು ಸಜ್ಜಲೂರು, ಚೊಟ್ಟನಹಳ್ಳಿ ಕ್ಷೇತ್ರವನ್ನು ಹೊಸಹಳ್ಳಿ ಎಂದು ಬದಲಾಯಿಸಲಾಗಿದೆ.

ಪಾಂಡವಪುರ: ತಾಲೂಕಿನಲ್ಲಿ ಯಾವುದೇ ಹೆಚ್ಚುವರಿ ಕ್ಷೇತ್ರ ವಿಂಗಡಿಸಿಲ್ಲ. ಆದರೆ 5 ಕ್ಷೇತ್ರಗಳಲ್ಲಿ ಜಕ್ಕನಹಳ್ಳಿಕ್ಷೇತ್ರವನ್ನು ಮೇಲುಕೋಟೆ, ಚಿನಕುರುಳಿ ಕ್ಷೇತ್ರವನ್ನುಗುಮ್ಮನಹಳ್ಳಿ, ಚಿಕ್ಕಾಡೆ ಕ್ಷೇತ್ರವನ್ನು ಕೆನ್ನಾಳು,ಕ್ಯಾತನಹಳ್ಳಿ ಕ್ಷೇತ್ರವನ್ನು ಅರಳುಕುಪ್ಪೆ ಎಂದು ಬದಲಾಯಿಸಲಾಗಿದೆ.

Advertisement

ಶ್ರೀರಂಗಪಟ್ಟಣ: ತಾಲೂಕಿನಲ್ಲಿ 4 ಕ್ಷೇತ್ರಗಳ ಪೈಕಿ ಒಂದು ಮಹದೇವಪುರ ಕ್ಷೇತ್ರವನ್ನು ಹೊಸದಾಗಿಸೇರಿಸಿದ್ದು ಒಟ್ಟು 5 ಕ್ಷೇತ್ರಗಳಿವೆ. ಶ್ರೀರಂಗಪಟ್ಟಣ ಕ್ಷೇತ್ರವನ್ನು ಕಿರಂಗೂರು ಕ್ಷೇತ್ರ ಎಂದು

ಬದಲಾಯಿಸಲಾಗಿದೆ. ಕೆ.ಆರ್‌.ಪೇಟೆ:ತಾಲೂಕಿನಲ್ಲಿ ಬಂಡಿಹೊಳೆ ಕ್ಷೇತ್ರವನ್ನು ಹೊಸದಾಗಿ ಗುರುತಿಸಲಾಗಿದ್ದು, ಒಟ್ಟು 7 ಕ್ಷೇತ್ರಗಳಿವೆ. ಅದರಲ್ಲಿಶೀಳನೆರೆ ಕ್ಷೇತ್ರವನ್ನು ಸಿಂಧಘಟ್ಟ ಕ್ಷೇತ್ರವನ್ನಾಗಿ ಬದಲಾಯಿಸಲಾಗಿದೆ.

ನಾಗಮಂಗಲ: ತಾಲೂಕಿನ 5 ಕ್ಷೇತ್ರಗಳಿದ್ದು, ಅದರಲ್ಲಿ ಬೆಳ್ಳೂರು ಕ್ಷೇತ್ರವನ್ನು ಚುಂಚನಹಳ್ಳಿ,ಮಾಯಿಗೋನಹಳ್ಳಿ ಕ್ಷೇತ್ರವನ್ನು ತುಪ್ಪದಮಡುಕ್ಷೇತ್ರವನ್ನಾಗಿ ಬದಲಾಯಿಸಲಾಗಿದ್ದು, ಗ್ರಾಮಗಳನ್ನು ಸೇರಿಸಲಾಗಿದೆ.

ತಾಪಂ 29 ಕ್ಷೇತ್ರ ಕಡಿತ :

ಅದರಂತೆ ಕಳೆದ ಬಾರಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ 155 ಕ್ಷೇತ್ರಗಳಿದ್ದ ತಾಪಂ ಕ್ಷೇತ್ರಗಳನ್ನು 126ಕ್ಕೆ ಇಳಿಸಲಾಗಿದೆ. ಇದರಿಂದ ಒಟ್ಟು 29 ಕ್ಷೇತ್ರಗಳನ್ನು ಕಡಿತಗೊಳಿಸಲಾಗಿದೆ. ಮಂಡ್ಯ 28ರಿಂದ 23ಕ್ಕಿಳಿಸಲಾಗಿದೆ. ಅದರಂತೆ ಮದ್ದೂರು 27ರಿಂದ 22ಕ್ಕೆ, ಮಳವಳ್ಳಿ 25ರಿಂದ 20ಕ್ಕೆ, ಪಾಂಡವಪುರ 17ರಿಂದ 14ಕ್ಕೆ,ಶ್ರೀರಂಗಪಟ್ಟಣ 16ರಿಂದ 13ಕ್ಕೆ, ಕೆ.ಆರ್‌.ಪೇಟೆ 24ರಿಂದ 19ಕ್ಕೆ ಹಾಗೂನಾಗಮಂಗಲ ತಾಲೂಕಿನಲ್ಲಿ 18ರಿಂದ 13ಕ್ಕಿಳಿಸಿ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಲಾಗಿದೆ. ಕೆಲವೊಂದು ಕ್ಷೇತ್ರಗಳಿಗೆ ಹೆಚ್ಚುವರಿ ಗ್ರಾಮಗಳು ಸೇರಿದ್ದರೆ, ಮತ್ತೆ ಕೆಲವು ಕ್ಷೇತ್ರಗಳಿಗೆ ಮತದಾರರು ಹಾಗೂ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next