Advertisement

ಮಂಡ್ಯ: ಮೊಬೈಲ್‌ ಕ್ಲಿನಿಕ್‌ಗೆ ಚಾಲನೆ

02:17 PM May 09, 2020 | mahesh |

ಮಂಡ್ಯ: ಕೋವಿಡ್‌-19 ಮೊಬೈಲ್‌ ಫಿವರ್‌ ಕ್ಲಿನಿಕ್‌ಗೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಧಿಕೃತ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೊಬೈಲ್‌ ಕ್ಲಿನಿಕ್‌ ಹಾಗೂ ಕೋವಿಡ್‌-19 ಸ್ವಾಬ್‌ ಟೆಸ್ಟಿಂಗ್‌ ಸೆಂಟರ್‌ ಕೂಡ ಆರಂಭವಾಗಿದ್ದು, ಇದರಿಂದ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ.

Advertisement

ಜಿಲ್ಲೆಯಲ್ಲಿ ಇದುವರೆಗೂ 4500 ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಹೋಬಳಿ ಮಟ್ಟದಲ್ಲಿ ಪರೀಕ್ಷೆ ಮಾಡಲು ಆಸ್ಪತ್ರೆಗಳಿಗೆ ಪರೀಕ್ಷೆಗಾಗಿ ಕರೆತರುವ ಬದಲು ಅವರಿರುವ ಸ್ಥಳದಲ್ಲೇ ಪರೀಕ್ಷೆ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಪ್ರತಿ ಹಂತದಲ್ಲೂ ಇದನ್ನು ಸ್ಯಾನಿಟೈಸರ್‌ ಮಾಡುವ ಸೂಚನೆ ನೀಡಲಾಗಿದೆ ಎಂದರು.

ಈಗಿರುವ 28 ಕೋವಿಡ್‌ ರೋಗಿಗಳಲ್ಲಿ ಇದುವರೆಗೂ 11 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮತ್ತಿಬ್ಬರು ಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಸದ್ಯದಲ್ಲೇ ಬಿಡುಗಡೆಯಾಗುವರು ಎಂದರು. ಡಿಎಚ್‌ಒ ಡಾ.ಮಂಚೇಗೌಡ, ಐಸಿಎಂಆರ್‌ ನಿರ್ದೇಶನದಂತೆ ಮೊಬೈಲ್‌ ಫಿವರ್‌ ಕ್ಲಿನಿ ಕ್‌ನ್ನು ಸಿದ್ಧಪಡಿಸಿದ್ದು, ಹಳ್ಳಿ ಹಳ್ಳಿಗಳಿಗೆ ತೆರಳಿ, ಸ್ವಾಬ್‌ ಪರೀಕ್ಷೆ ಮಾಡಲಾಗುತ್ತದೆ ಎಂದರು.

ಜಿಲ್ಲಾಧಿಕಾರಿಗಳು ಸ್ವಾಬ್‌ ಟೆಸ್ಟಿಂಗ್‌ ಹಾಗೂ ಮೊಬೈಲ್‌ ಬಸ್‌ನಲ್ಲಿರುವ ಸ್ಯಾನಿಟೈಸರ್‌ ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಡಾ.ಬಾಲಕೃಷ್ಣ ಸೇರಿದಂತೆ ಕೆಎಸ್‌ಆರ್‌ ಟಿಸಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next