Advertisement

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

08:51 PM Oct 23, 2024 | Team Udayavani |

ಬೆಂಗಳೂರು: ಮಂಡ್ಯದಲ್ಲಿ ಡಿ.20 ರಿಂದ 3 ದಿನ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 25 ಕೋಟಿ ರೂ. ಬಿಡುಗಡೆಗೆ ಆರ್ಥಿಕ ಇಲಾಖೆ ಶಿಫಾರಸು ಮಾಡಿದ್ದು, ಸಾಧ್ಯವಾದಷ್ಟು ಇದರ ಇತಿಮಿತಿಯಲ್ಲೇ ವೆಚ್ಚ ನಿಯಂತ್ರಣ ಮಾಡಿಕೊಳ್ಳುವುದು ಸೂಕ್ತ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸಲಹೆ ನೀಡಿದರು.

Advertisement

ಬುಧವಾರ ವಿಕಾಸಸೌಧದಲ್ಲಿ ತಮ್ಮ ಕೊಠಡಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾರತ ಹಾಗೂ ಕನ್ನಡ ಧ್ವಜ ಮತ್ತು ಕರ್ನಾಟಕದ ಭೂಪಟ ಒಳಗೊಂಡ ಲಾಂಛನ ಬಿಡುಗಡೆ ಮಾಡಿ ಮಾತನಾಡಿ, ಹಾಗೆಂದು ಸಾಹಿತ್ಯ ಸಂಭ್ರಮಕ್ಕೆ ಯಾವುದೇ ಕೊರತೆ ಆಗಬಾರದು. ಹಬ್ಬದ ವಾತಾವರಣ ನಿರ್ಮಾಣವಾಗಬೇಕು ಎಂದರು.

ಮುದ್ದೆ ಬಸ್ಸಾರು ಸಹಿತ ಊಟೋಪಚಾರ:
ವ್ಯಾಪಕ ಪ್ರಚಾರ, ಉತ್ತಮ ಅಲಂಕಾರ ಮಾಡಬೇಕು. ಆಕರ್ಷಕ ಮೆರವಣಿಗೆ, ಅರ್ಥಪೂರ್ಣ ವಿಚಾರಗೋಷ್ಠಿ, ಕಾರ್ಯಕ್ರಮಗಳು, ಮುದ್ದೆ ಬಸ್ಸಾರು ಸೇರಿದಂತೆ ಸ್ಥಳೀಯ ಆಹಾರ ಹಾಗೂ ಉತ್ತರ ಕರ್ನಾಟಕದ ತಿನಿಸಿಸುಗಳ ಸಮ್ಮಿಶ್ರಣಗೊಂಡ ಊಟೋಪಚಾರ ವ್ಯವಸ್ಥೆ ಮಾಡಬೇಕು. ಎಂದು ನಿರ್ದೇಶನ ನೀಡಿದರು.
ಮಂಡ್ಯ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭಾರತ ಹಾಗೂ ಕನ್ನಡ ಧ್ವಜ ಮತ್ತು ಕರ್ನಾಟಕದ ಭೂಪಟ ಒಳಗೊಂಡ ಲಾಂಛನ ಬಿಡುಗಡೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next