ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿನಡೆದಿರುವ ಮೆಗಾಡೇರಿ ನಿರ್ಮಾಣದಲ್ಲಿ ಭ್ರಷ್ಟಾಚಾರಹಾಗೂ ಹಾಲು-ನೀರು ಹಗರಣದಿಂದ ಮನ್‌ಮುಲ್ ಮೈಷುಗರ್ ಹಾದಿಯಲ್ಲಿ ಸಾಗುತ್ತಿದೆಯೇಎಂಬ ಚರ್ಚೆ ಶುರುವಾಗಿದೆ.
ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯುಆಡಳಿತ ಮಂಡಳಿ ಹಾಗೂ ಅ ಧಿಕಾರಿಗಳ ವೈಫಲ್ಯದಿಂದರೋಗಗ್ರಸ್ಥವಾಗಿ ಮಾರ್ಪಟ್ಟಿದೆ. ಇದರಿಂದಜಿಲ್ಲೆಯ ಲಕ್ಷಾಂತರ ರೈತರು ಸಂಕಷ್ಟಕ್ಕೆಒಳಗಾಗಿದ್ದರು. ನಂತರ ಮನ್‌ಮುಲ್‌ರೈತರ ಆರ್ಥಿಕ ಸಂಕಷ್ಟ ನೀಗಿಸುವಸಂಜೀವಿನಿ ಯಂತೆ ಗೋಚ ರಿಸಿತ್ತು.ಕೊರೊನಾ ಸಂಕಷ್ಟದ ಲ್ಲೂ ರೈತರಹಿಡಿಯುವಲ್ಲಿ ಮನ್‌ಮುಲ್‌ಯಶಸ್ವಿಯಾಗಿತ್ತು.
ಅಧಿಕಾರಿಗಳ ವೈಫಲ್ಯ: ಕಳೆದಬಾರಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗಮೆಗಾಡೇರಿ ನಿರ್ಮಾಣದಲ್ಲಿ ಭಾರಿಭ್ರಷ್ಟಾಚಾರ ಕೇಳಿ ಬಂದಿತ್ತು. ಮತ್ತೆಪ್ರಸ್ತುತ ಇರುವ ಆಡಳಿತ ಮಂಡಳಿ ಯಲ್ಲಿಹಾಲು-ನೀರು ಹಗರಣ ಬೆಳಕಿಗೆ ಬಂದಿರು ವುದರಿಂದಜಿಲ್ಲೆಯ ರೈತರು, ಹೋರಾಟಗಾರರು, ಹಾಲುಉತ್ಪಾದಕರು ಮೈಷುಗರ್‌ನಂತೆ ಮನ್‌ಮುಲ್‌ಅವನತಿ ಹಾದಿ ಹಿಡಿಯುತ್ತಿದೆ. ಮನ್‌ಮುಲ್‌ನಲ್ಲಿನಡೆಯುತ್ತಿರುವ ಹಗರಣಗಳಿಗೆ ಆಡಳಿತ ಮಂಡಳಿಹಾಗೂ ಅ ಧಿಕಾರಿಗಳ ವೈಫಲ್ಯವೇ ಕಾರಣ ಎಂಬ ಚರ್ಚೆ ಸದ್ದು ಮಾಡುತ್ತಿವೆ.
ರಾಜಕೀಯ ದಾಳವಾದ ಮನ್‌ಮುಲ್
ಹಗರಣ ಹೊರ ಬರುತ್ತಿದ್ದಂತೆ ಮನ್‌ಮುಲ್ ಅನ್ನು ರಾಜಕೀಯಪಕ್ಷಗಳು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿವೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಲು ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ರಾಜಕೀಯಪ್ರಭಾವ ಹೆಚ್ಚಾಗುತ್ತಿರುವುದರಿಂದ ತನಿಖೆ ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ವಾದಿಸುತ್ತಿದ್ದರೆ, ಬಿಜೆಪಿ ಇದನ್ನೇ ಬಂಡವಾಳವಾಗಿಸಿಕೊಂಡು ಸೂಪರ್ ಸೀಡ್‌ಮಾಡಲು ಸರ್ಕಾರದ ಮೇಲೆ ಒತ್ತಡ ತರುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಜೆಡಿಎಸ್ ನಾಯಕರು ಈ ಹಗರಣ 2014ರಿಂದಲೂ ನಡೆಯುತ್ತಿದೆ. ಕಪ್ಪು ಪಟ್ಟಿಯಲ್ಲಿದ್ದಗುತ್ತಿಗೆದಾರರನ್ನು ತೆಗೆದುಕೊಂಡಿದ್ದೇ ಕಾಂಗ್ರೆಸ್ ಆಡಳಿತ. ನಮ್ಮ ಆಡಳಿತ ಮಂಡಳಿಜೀವದ ಹಂಗು ತೊರೆದು ಪ್ರಕರಣ ಪತ್ತೆ ಹಚ್ಚಿದೆ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಮನ್‌ಮುಲ್ ಅನ್ನು ಮೂರು ರಾಜಕೀಯ ಪಕ್ಷಗಳು ದಾಳವಾಗಿ ಬಳಸಿಕೊಂಡಿವೆ.
ಎಚ್.ಶಿವರಾಜು