Advertisement

ಅಪ್ರಾಪ್ತರ ಪ್ರೇಮ ಪ್ರಕರಣ : ಪ್ರಿಯಕರನ ಸಾವಿನಿಂದ ಮನನೊಂದ ಯುವತಿಯೂ ಆತ್ಮಹತ್ಯೆಗೆ ಶರಣು

04:58 PM Aug 31, 2021 | Team Udayavani |

ಮಂಡ್ಯ: ನಗರದ ಕಲ್ಲಹಳ್ಳಿಯ ಅಪ್ರಾಪ್ತ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಯುವತಿಯು ಡೆತ್‌ನೋಟ್ ಬರೆದಿಟ್ಟು ಬಾಲಮಂದಿರದಲ್ಲಿ ನೇಣಿಗೆ ಶರಣಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ನಡೆದಿದೆ.

Advertisement

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗು ಪುತ್ರಿ ಮಾನ್ವಿತಾ(17) ಕಲ್ಲಹಳ್ಳಿಯ ವಿವಿ ನಗರ ಬಡಾವಣೆಯ 14ನೇ ಕ್ರಾಸ್‌ನಲ್ಲಿರುವ ಬಾಲಮಂದಿರದ ಶೌಚಾಲಯದ ಕಿಟಿಕಿಗೆ ತನ್ನ ಚೂಡಿದಾರ್ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ಮಾನ್ವಿತಾ ಪೋಷಕರು ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಈಗಾಗಲೇ ಜೈಲಿನಲ್ಲಿದ್ದಾರೆ. ಅದರಂತೆ ಮಾನ್ವಿತಾ ಮನೆಯಲ್ಲಿರಲು ಇಷ್ಟಪಡದ ಕಾರಣ ಆಕೆಯನ್ನು ಬಾಲಮಂದಿರದಲ್ಲಿ ಇರಿಸಲಾಗಿತ್ತು. ಆಕೆ ಮಾನಸಿಕ ಖಿನ್ನತೆಯಿಂದ ಬಳಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ, ಡಿವೈಎಸ್ಪಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಎಸ್.ರಾಜಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ಬಾಲಮಂದಿರದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಡೆತ್‌ನೋಟ್ ವಶಪಡಿಸಿಕೊಂಡಿರುವ ಪೊಲೀಸರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ :ಬೈಕ್ ಗಳ ನಡುವೆ ಅಪಘಾತ : ರಾಷ್ಟ್ರೀಯ ಖೋ-ಖೋ ಆಟಗಾರ ಸಾವು, ಇನ್ನೋರ್ವ ಗಂಭೀರ

Advertisement

ಘಟನೆ ವಿವರ:
ಕೊಲೆಯಾಗಿದ್ದ ದರ್ಶನ್(17) ಹಾಗೂ ಮೃತ ಮಾನ್ವಿತಾ ಇಬ್ಬರೂ ಕಲ್ಲಹಳ್ಳಿ ವಿವಿ ನಗರ ಬಡಾವಣೆಯ ನಿವಾಸಿಗಳಾಗಿದ್ದರು. ದರ್ಶನ್ 10ನೇ ತರಗತಿ ಅನುತ್ತೀರ್ಣನಾದ ನಂತರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ನಗರಸಭೆ ಸದಸ್ಯ ಶಿವಲಿಂಗು ಅವರ ಪುತ್ರಿಯಾಗಿದ್ದ ಮಾನ್ವಿತ ಇಬ್ಬರು ಸುಮಾರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧ ಎರಡು ಮೂರು ಬಾರಿ ಜಗಳ ಕೂಡ ನಡೆದಿತ್ತು ಎನ್ನಲಾಗಿದೆ.

ಈ ನಡುವೆ ಕಳೆದ ಏಪ್ರಿಲ್ 15ರಂದು ತಡರಾತ್ರಿ ದರ್ಶನ್‌ಗೆ ಕರೆ ಮಾಡಿದ್ದ ಮಾನ್ವಿತಾ, ಮನೆಗೆ ಬರುವಂತೆ ತಿಳಿಸಿದ್ದಳು. ಅದರಂತೆ ಮನೆಗೆ ಬಂದ ಆತನ ಮೇಲೆ 10ಕ್ಕೂ ಹೆಚ್ಚು ಜನರು ಮನಬಂದಂತೆ ಹಲ್ಲೆ ನಡೆಸಿದ್ದರು.

ಗಲಾಟೆ ಗಮನಿಸಿದ ಅಕ್ಕಪಕ್ಕದ ಮನೆಯವರು, ದರ್ಶನ್ ಮನೆಯವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅವರೆಲ್ಲರೂ ಬಂದು ಮಗನನ್ನು ಬಿಡುವಂತೆ ಮನವಿ ಮಾಡಿದರೂ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇತ್ತ ತೀವ್ರ ಹಲ್ಲೆಗೊಳಗಾಗಿ ಅಸ್ವಸ್ಥಗೊಂಡಿದ್ದ ದರ್ಶನ್‌ನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದನು. ಈ ಸಂಬಂಧ ಮೃತ ಮಾನ್ವಿತ ತಂದೆ, ತಾಯಿ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next