Advertisement
ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಉದಯವಾಣಿ ಪ್ರಧಾನ ಸಂಪಾದಕ ರವಿಶಂಕರ್ ಕೆ. ಭಟ್, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ವಿಜಯಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಯುದ್ಧ ಮೆಡಲ್ ಪುರಸ್ಕೃತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು, ಯುವ ಸಶಕ್ತೀಕರಣ ಕ್ಷೇತ್ರದಿಂದ ಬಿ.ಎಸ್. ಅನುಪಮಾ ಸೇರಿದಂತೆ ಹಲವರಿಗೆ ಸಮ್ಮಾನ ಮಾಡಲಾಯಿತು.
ನ್ಯಾಯಾಲಯದ ತೀರ್ಪಿನಲ್ಲಿ ಕನ್ನಡ ಅವಶ್ಯ. ಇದು ಭಾವನಾತ್ಮಕವಾದ ಸಂಗತಿ ಎಂದು ನ್ಯಾ| ಬಿ. ಶಿವಲಿಂಗೇಗೌಡ ಹೇಳಿದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ -2022: ಪರಿಣಾಮಕಾರಿ ಅನುಷ್ಠಾನ ವಿಷಯದ ಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಲಯದಲ್ಲಿ ಕನ್ನಡದಲ್ಲಿ ತೀರ್ಪು ನೀಡುವುದರಿಂದ ಕನ್ನಡಿಗ ಕಕ್ಷಿದಾರರಿಗೆ ಅನುಕೂಲವಾಗುತ್ತದೆ. ಇದಕ್ಕೆ ಪೂರಕವಾಗುವಂತೆ ಈಗಾಗಲೇ ಅನೇಕ ಕಾನೂನು ಪುಸ್ತಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ನ್ಯಾಯಾಂಗದಲ್ಲಿ ನೆಲದ ಭಾಷೆ ಇಲ್ಲವಾದರೆ, ಪ್ರಕರಣದ ವಿಚಾರಣೆ ಸಮರ್ಪಕವಾಗುವುದಿಲ್ಲ ಎಂದು ಹೇಳಿದರು. ಗೆದ್ದು ಬೀಗಿದ ಡಿಜಿಟಲ್ ಕನ್ನಡ ಸಮ್ಮೇಳನ!
ಮಂಡ್ಯ: 87ನೇ ಸಾಹಿತ್ಯ ಸಮ್ಮೇಳನ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸದ್ದುಮಾಡಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್ ಆ್ಯಪ್, ಎಕ್ಸ್‌ನಲ್ಲಿ ಸಾಹಿತ್ಯ ಸಮ್ಮೇಳನ ಕುರಿತ ಚರ್ಚೆಗಳು ವ್ಯಾಪಕವಾಗಿ ನಡೆದಿವೆ.
Related Articles
Advertisement
ಮೊದಲ ಬಾರಿಗೆ ಪೊಲೀಸ್ ಬ್ಯಾಂಡ್ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕ ರಾಜ್ಯ ಪೊಲೀಸ್ ಬ್ಯಾಂಡ್ ಪಾಲ್ಗೊಳ್ಳುವ ಮೂಲಕ ಮಂಡ್ಯದ ಸಮ್ಮೇಳನ ಚರಿತ್ರೆ ನಿರ್ಮಿಸಿತು. ರವಿವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ರಾಜ್ಯದ ಪೊಲೀಸ್ ತಂಡ 10 ಕನ್ನಡ ಗೀತೆಗಳನ್ನು ವಾದ್ಯ ಸಂಗೀತ ಪ್ರಸ್ತುತಪಡಿಸಿ, ಸಂಗೀತ ರಸಿಕರ ಮನ ರಂಜಿಸಿತು. ಮೈಸೂರು ದಸರಾ ಹೊರತುಪಡಿಸಿ ಇದೇ ಮೊದಲ ಬಾರಿಗೆ ಕರ್ನಾಟಕ ಪೊಲೀಸ್ ಬ್ಯಾಂಡ್‌ನವರು ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿದ್ದಾರೆ. 700ಕ್ಕೂ ಹೆಚ್ಚು ಮಂದಿಗೆ
ಆರೋಗ್ಯ ತಪಾಸಣೆ
ಸಮ್ಮೇಳದ ಮೂರು ದಿನಗಳಲ್ಲಿ 700ಕ್ಕೂ ಅಧಿಕ ಜನ ಆರೋಗ್ಯದ ಸಮಸ್ಯೆ ಕಾರಣಕ್ಕೆ ಸಮ್ಮೇಳನದಲ್ಲಿನ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಚಿಕಿತ್ಸೆ ಪಡೆದಿದ್ದಾರೆ. ಬಂದವರಿಗೆಲ್ಲ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಬಹುತೇಕರಿಗೆ ಹೃದಯ ಸಂಬಂಧಿ ಕಾಯಿಲೆ ಕಂಡು ಬಂದಿದ್ದು, ಕೆಲವರನ್ನು ಆಸ್ಪತ್ರೆಗೂ ಕಳಿಸಿಕೊಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಮೋಹನ್ ಮಾಹಿತಿ ನೀಡಿದ್ದಾರೆ. ಸಮ್ಮೇಳನ ಸಮಾರೋಪಕ್ಕೆ
ಸಿಎಂ, ಡಿಸಿಎಂ ಗೈರು
ಮಂಡ್ಯ: ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಂದರ್ಭ ಜೆಡಿಎಸ್‌ನ ಜನಪ್ರತಿನಿಧಿಗಳು ಗೈರಾಗಿದ್ದರೆ, ಸಮಾರೋಪ ಸಮಾರಂಭದಲ್ಲಿ ಉಪಸ್ಥಿತಿ ವಹಿಸಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಗೈರು ಹಾಜರಾಗಿದ್ದರು. ಸಮ್ಮೇಳನದ ಉದ್ಘಾಟನೆ ಸಮಾರಂಭಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗೈರಾಗಿದ್ದರು. ಸಿದ್ದರಾಮಯ್ಯ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ್ದರು. ಆದರೆ ಸಮಾರೋಪಕ್ಕೆ ಹಾಜರಾಗಿಲ್ಲ. ಡಾ| ರಾಜ್‌ಕುಮಾರ್ ಯಶೋಗಾಥೆ 10 ಭಾಷೆಗಳಿಗೆ ಭಾಷಾಂತರ!
ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಮೇರು ನಟ ಡಾ| ರಾಜ್‌ಕುಮಾರ್ ಜೀವನಾಧಾರಿತ ಪುಸ್ತಕಗಳಿಗೆ ಬೇಡಿಕೆ ಹೆಚ್ಚಿತ್ತು. ಡಾ| ರಾಜ್ ಅವರ ಬಗ್ಗೆ ಹಲವಾರು ಪುಸ್ತಕಗಳು ಹೊರಬಂದಿದ್ದು, ಅವರ ರಂಗಭೂಮಿ, ಸಿನೆಮಾ ಹಾಗೂ ಜೀವನಾಧಾರಿತ ಕಥಾ ಹಂದರ ಹೊಂದಿರುವ ಮಹಾ ಸಂಶೋಧನಾ ಪ್ರಬಂಧವೊಂದು ಕನ್ನಡ ಸೇರಿದಂತೆ ಜಗತ್ತಿನ ವಿವಿಧ 10 ಭಾಷೆಗಳಿಗೆ ಭಾಷಾಂತರಗೊಳ್ಳಲು ಸಿದ್ಧವಾಗುತ್ತಿದೆ. ಮಂಡ್ಯ ಜಿಲ್ಲೆ ಪಾಂಡವಪುರ ಮೂಲದ ವಾಸಿ ಡಾ| ಡಿ. ಗುರುಮೂರ್ತಿ ಹಾರೋಹಳ್ಳಿ ಈ ಸಾಹಸಕ್ಕೆ ಮುಂದಾಗಿದ್ದಾರೆ. 7 ವರ್ಷಗಳ ಕಾಲ ನಿರಂತರ ಅಧ್ಯಯನ ನಡೆಸಿ 2023ರಲ್ಲಿ ಮೈಸೂರು ವಿಶ್ವವಿದ್ಯಾ ನಿಲಯಕ್ಕೆ ಸಲ್ಲಿಸಿದ “ಡಾ| ರಾಜ್‌ಕುಮಾರ್ ದಿ ಲೆಜೆಂಡ್ ಪುಸ್ತಕ’ ಈಗ ಕನ್ನಡದಲ್ಲಿ ಹಲವು ಸಂಚಿಕೆಗಳ ರೂಪದಲ್ಲಿ ಓದುಗರಿಗೆ ಲಭ್ಯವಿದ್ದು. ಇದರೊಟ್ಟಿಗೆ ಇಂಗ್ಲಿಷ್, ಹಿಂದಿ, ತೆಲುಗು, ಮಲೆಯಾಳಂ, ತಮಿಳು, ಬಂಗಾಲಿ, ಫ್ರೆಂಚ್, ಸ್ಪಾನಿಷ್, ಚೀನದ ಮ್ಯಾಂಡರೀನ್ ಭಾಷೆಯಲ್ಲಿಯೂ ಭಾಷಾಂತರಕ್ಕೆ ಸಿದ್ಧವಾಗುತ್ತಿದೆ.