Advertisement
ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿ ಎಚ್.ಭೂವನಹಳ್ಳಿ ಗ್ರಾಮದ ಹೊನ್ನಮ್ಮ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
Related Articles
Advertisement
ಜಿಪಂ ಚುನಾವಣೆ ಯಾವಾಗ ನಡೆಯುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅದು ಆಗುತ್ತೋ ಇಲ್ಲವೋ, ಆದರೆ 2023ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿಕೊಡುವ ಸಂಕಲ್ಪ ಮಾಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಹಸ್ತದ ಗುರುತು:ನೀವೆಲ್ಲ ನನ್ನ ಅಣ್ಣ, ತಮ್ಮಂದಿರಿದ್ದಂತೆ. ನಾನು ಎಲ್ಲರ ನ್ನು ಒಂದೇ ಗೌರವ ವಿಶ್ವಾಸದಿಂದ ಕಾಣುತ್ತೇನೆ. ಪಕ್ಷಕ್ಕೆ ಬರುವವರನ್ನು ಇನ್ನಷ್ಟು ಕರೆತನ್ನಿ. ಕಾಂಗ್ರೆಸ್ ಜಾತ್ಯಾ ತೀತ ಪಕ್ಷ. ಮೋದಿ ಬಗ್ಗೆ ಮಾತನಾಡಲು ಬೇಕಾ ದಷ್ಟು ವಿಚಾರ ಗಳಿವೆ. ಕೇವಲ ಜಾತಿ ಎತ್ತಿಕಟ್ಟುವ ಪಕ್ಷ ಬಿಜೆಪಿ. ಕಾಂಗ್ರೆಸ್ ಸರ್ಕಾರ ಇದ್ದಾಗ ಹಾಲಿಗೆ, ಅಕ್ಕಿಗೆ ಕೊಟ್ಟ ಸಬ್ಸಿಡಿ ಒಕ್ಕಲಿಗರಿ ಗಷ್ಟೇ ಸಿಕ್ಕಿಲ್ಲ.
ಇದನ್ನೂ ಓದಿ:- ರಾಜನಿವಾಸದಲ್ಲಿ ಶ್ರೀನಗರ ಕಿಟ್ಟಿ ಗೆಸ್ಟ್
ದಲಿತರು ಸೇರಿ ಸಮಾಜದ ಎಲ್ಲಾ ಜಾತಿ ಜನಾಂಗಗಳಿಗೂ ಸಿಕ್ಕಿದೆ.ಇನ್ನು ಕ್ಷೇತ್ರದಲ್ಲಿ ತನ್ನ ಫೋಟೋ ಜತೆಗೆ ಕಾಂಗ್ರೆಸ್ ಹಸ್ತದ ಗುರುತನ್ನು ಬಳಸಿ. ನಾನು ಕಾಂಗ್ರೆಸ್ ಎಂಬುದನ್ನು ತೋರಿಸುವ ಕೆಲಸ ಕಾರ್ಯ ಕರ್ತರಿಂದ ಆಗಬೇಕು ಎಂದರು. ಈ ವೇಳೆ ಹೊನ್ನಾವರ ಗ್ರಾಪಂ ವ್ಯಾಪ್ತಿಯ ಹತ್ತಾರು ಯುವಕರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಸನ್ನ, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ತಿಮ್ಮ ರಾಯಿಗೌಡ, ರಾಜ್ಯ ಸಹಕಾರ ಮಹಾ ಮಂಡಲದನಿರ್ದೇಶಕ ಬಿ.ರಾಜೇಗೌಡ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಎನ್.ಟಿ.ಕೃಷ್ಣಮೂರ್ತಿ, ಮಖಂಡ ಮುಕುಂದ, ಹೊನ್ನಾವರ ಪುಟ್ಟರಾಜು, ಮಾದಹಳ್ಳಿ ಮಂಜು, ಮಾಚನಾಯಕನಹಳ್ಳಿ ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಜೆಡಿಎಸ್ ಸರ್ಕಾರವಿದ್ದಾಗ ಮೈಷುಗರ್ ನಿಂತಿತು-
ನಾಗಮಂಗಲ: ರಾಜ್ಯದಲ್ಲಿ ಜೆಡಿಎಸ್ ಪಕ್ಷದವರೇ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈಷುಗರ್
ಕಾರ್ಖಾನೆ ಸ್ಥಗಿತಗೊಂಡಿದ್ದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರಮೋದಿ
ಅವರೊಂದಿಗೆ ಚೆನ್ನಾಗಿದ್ದೇನೆಂದು ಹೇಳಿಕೊಂಡಿದ್ದವರು ಕಾರ್ಖಾನೆಯನ್ನು ಮುಂದುವರಿಸಬೇಕಿತ್ತು ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಪರೋಕ್ಷವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕುಟುಕಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ 8ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದಾಗಿ ಹೇಳಿಕೆ ನೀಡುತ್ತಿರುವವರು ಅದನ್ನು ಪೆಟ್ಟಿಗೆಯಲ್ಲಿಟ್ಟು ಬೀಗಹಾಕಿಡಲು ಸಾಧ್ಯವೇ?. ಅದರಲ್ಲಿ 100ಕೋಟಿ ಅನುದಾನವನ್ನು ಮೈಷುಗರ್‌ಗೆ ಕೊಟ್ಟು ಕಾರ್ಖಾನೆ ಆರಂಭಿಸಬಹುದಿತ್ತಲ್ಲವೇ ಎಂದು ಹೆಸರೇಳದೆ ಎಚಿxಕೆ ವಿರುದ್ಧ ವ್ಯಂಗ್ಯವಾಡಿದರು.
ಈ ಹಿಂದಿನ ಸರ್ಕಾರದಲ್ಲಿ ಅನುಮೋದನೆಗೊಂಡು, ಡಿಪಿಆರ್ ಆದ ರಸ್ತೆಗಳ ಕೆಲಸ ಈಗ ಆಗುತ್ತಿದೆ. ಇವರು ಏನು ಮಾಡಿದ್ದಾರೆಂಬುದು ಒಂದೂವರೆ ವರ್ಷ ಕಳೆದ ನಂತರವಷ್ಟೇ ಗೊತ್ತಾಗುತ್ತದೆ ಎಂದು ಶಾಸಕ ಸುರೇಶ್ ಗೌಡಗೆ ಟಾಂಗ್ ನೀಡಿದರಲ್ಲದೇ, ಇಲ್ಲಿನ ಅಭಿವೃದ್ಧಿ ಬಗ್ಗೆ ಜನ ಮಾತನಾಡುತ್ತಾರೆ ಬಿಡಿ ಎಂದರು