Advertisement
ಈಗಾಗಲೇ ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಯ ಸೋಲಿ ನಿಂದ ಭದ್ರಕೋಟೆ ಅಲುಗಾಡುವ ಸ್ಥಿತಿಗೆ ಬಂದು ನಿಂತಿದೆ.ಇದಕ್ಕೆ ದಳಪತಿಗಳ ನಡುವಿನ ಒಗ್ಗಟ್ಟು ಹಾಗೂ ನಾಯಕತ್ವದ ಕೊರತೆಯೂ ಕಾರಣವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಶಾಸಕ ಸಿ.ಎಸ್.ಪುಟ್ಟರಾಜು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
Related Articles
Advertisement
ಒಗ್ಗಟ್ಟಿನ ಕೊರತೆ: ಪ್ರಸ್ತುತ ಜೆಡಿಎಸ್ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ಯಾರೂ ಮುಂದಾಗುತ್ತಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ದೇವೇಗೌಡರು ಹಾಗೂಕುಮಾರಸ್ವಾಮಿ ಬಂದಾಗ ಮಾತ್ರ ಒಗ್ಗಟ್ಟು ಎಂದು ಬಿಂಬಿಸಿಕೊಂಡವರು ಮತ್ತೆ ಒಂದುಗೂಡಲಿಲ್ಲ.ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜುಈಗಾಗಲೇ ಕುಮಾರಸ್ವಾಮಿ ಶಕ್ಯದಿಂದ ದೂರಸರಿಯುತ್ತಿದ್ದಾರೆ. ಅತ್ತ ಹಿರಿಯ ಶಾಸಕ ಡಿ.ಸಿ.ತಮ್ಮಣ್ಣ,ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಅನ್ನದಾನಿ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ.
ಕಾಂಗ್ರೆಸ್ ಸೇರುವ ಬಗ್ಗೆ ವದಂತಿ :
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಈಗಾಗಲೇ ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಇವರ ಜತೆಯಲ್ಲಿಯೇ ಶಾಸಕ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಅವರು ಕಾಂಗ್ರೆಸ್ ಸೇರುವ ಚರ್ಚೆ, ವದಂತಿಗಳು ಹರಿದಾಡುತ್ತಿವೆ. ಈಗಾಗಲೇ ಮರಿತಿಬ್ಬೇಗೌಡ ಹಾಗೂ ಕೆ.ಟಿ.ಶ್ರೀಕಂಠೇಗೌಡ ನಡುವೆ ತಮ್ಮ ಆಪ್ತರಿಗೆ ದಕ್ಷಿಣ ಪದವೀಧರ ಕ್ಷೇತ್ರದ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಕೋಲ್ಡ್ ವಾರ್ ನಡೆದಿತ್ತು. ಕೊನೆಗೆ ಶ್ರೀಕಂಠೇಗೌಡ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಮರಿತಿಬ್ಬೇಗೌಡ ಅಸಮಾಧಾನಗೊಂಡಿದ್ದು, ಪಕ್ಷದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.
ಜಿಲ್ಲೆಯಲ್ಲಿ ನಾವಿಕನಿಲ್ಲದ ದೋಣಿ :
ಜಿಲ್ಲೆಯಲ್ಲಿ ನಾಯಕತ್ವದ ಕೊರತೆಯೂ ಜೆಡಿಎಸ್ ಪಕ್ಷವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡರು ತಿಳಿಸಿದ್ದರು. ಆದರೆ ಸಾಮೂಹಿಕವಾಗಿ ಶಾಸಕರು ಚುನಾವಣೆಯಲ್ಲಿ ಒಂದಾಗಲೇ ಇಲ್ಲ. ತಮ್ಮ ಕ್ಷೇತ್ರಗಳಿಗೆ ಸೀಮಿತ ರಾಗಿದ್ದರು. ಇದರಿಂದ ಜೆಡಿಎಸ್‌ಗೆ ನಾವಿಕನಿಲ್ಲದ ದೋಣಿಯಂತಾದ ಸ್ಥಿತಿ ಎದುರಾಗಿತ್ತು. ಅಲ್ಲದೆ, ಜಿಲ್ಲೆಯ ಶಾಸಕರಿಗೆ ನಾಯಕತ್ವ ನೀಡುವ ಬದಲು ನಿಖೀಲ್‌ಕುಮಾರಸ್ವಾಮಿ ಅವರಿಗೆ ನೇತೃತ್ವ ವಹಿಸಲಾಗಿತ್ತು. ಇದು ಸಹ ಜಿಲ್ಲೆಯ ಶಾಸಕರಿಗೆಪಕ್ಷದಲ್ಲಿನ ನಾಯಕತ್ವ ಪ್ರಶ್ನಿಸುವಂತಾಗಿತ್ತು. ನಾಯಕತ್ವ ವಿಚಾರದಲ್ಲೂ ಪಕ್ಷದ ವರಿಷ್ಠರನಿರ್ಧಾರಗಳು ಜಿಲ್ಲೆಯಲ್ಲಿನ ಪಕ್ಷದ ಹಿನ್ನಡೆಗೆಕಾರಣವಾಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.