Advertisement

ಕೊಂಡೋತ್ಸವ ವೀಕ್ಷಿಸಲು ಮನೆ ಮೇಲೆ ನಿಂತಿದ್ದ ಜನ: ಮೇಲ್ಛಾವಣಿ ಕುಸಿದು ಮಹಿಳೆ ಮೃತ್ಯು

08:59 AM Mar 29, 2022 | Team Udayavani |

ಮಂಡ್ಯ: ಬಸವೇಶ್ವರ ಕೊಂಡೋತ್ಸವ ವೀಕ್ಷಿಸಲು ಮನೆಯೊಂದರ ಮೇಲೆ ನಿಂತಿದ್ದ ಹಿನ್ನಲೆಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಓರ್ವ ಮಹಿಳೆ ಮೃತಪಟ್ಟು 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹುಲಿಗೆರೆ ಪುರ ಗ್ರಾಮದಲ್ಲಿ ಜರುಗಿದೆ

Advertisement

ಹುಲಿಗೆರೆಪುರ ಗ್ರಾಮದ ದ್ಯಾವರಸ ರವರ ಪತ್ನಿ ಪುಟ್ಟಲಿಂಗಮ್ಮ 40 ಮೃತಪಟ್ಟ ಮಹಿಳೆಯಾಗಿದ್ದು ಸುಮಾರು 8ಮಕ್ಕಳು ಸೇರಿದಂತೆ ಮಹಿಳೆಯರು ವಯೋವೃದ್ಧರು ಮತ್ತು ಪುರುಷರು ಸೇರಿದಂತೆ 25 ಹೆಚ್ಚು ಮಂದಿ ಗಾಯಗೊಂಡಿದ್ದು ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ
ಗ್ರಾಮದಲ್ಲಿ ಸೋಮವಾರ ಬಂಡಿ ಉತ್ಸವ
ಹಾಗೂ ಇನ್ನಿತರ ಪೂಜಾ ವಿಧಿವಿಧಾನಗಳು ನೆರವೇರಿದ ಬಳಿಕ ಮಂಗಳವಾರ ಬೆಳಿಗ್ಗೆ ಗ್ರಾಮದ ಶ್ರೀ ಬಸವೇಶ್ವರ ಕೊಂಡೋತ್ಸವವನ್ನು ಏರ್ಪಡಿಸಲಾಗಿತ್ತು

ದೇವರಗುಡ್ಡ ಹಾಯುವ ಕೊಂಡೋತ್ಸವವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ ನೂರಾರು ಸಂಖ್ಯೆಯ ಗ್ರಾಮಸ್ಥರು ಪಟೇಲ್ ಸಿದ್ದೇಗೌಡ ಎಂಬುವರಿಗೆ ಸೇರಿದ ಮನೆಯ ಮೇಲೆ ನಿಂತು ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮೇಲ್ಚಾವಣಿ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ


ಸುಮಾರು 60 ವರ್ಷದ ಹಿಂದೆ ನಿರ್ಮಿಸಿದ ಮನೆಯ ಮೇಲೆ ಪ್ರತಿ ವರ್ಷದಂತೆ ಸ್ಥಳೀಯ ಗ್ರಾಮಸ್ಥರು ಕೊಂಡ ವೀಕ್ಷಿಸಲು ಮನೆಯ ಮೇಲೆ ಹತ್ತಿದ ಪರಿಣಾಮವಾಗಿ ನೂಕುನುಗ್ಗಲು ಉಂಟಾಗಿ ಮನೆಗೆ ಅಳವಡಿಸಿದ ಮೇಲ್ಚಾವಣಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸಾವು ನೋವು ಸಂಭವಿಸಿದೆ

ಬಳಿಕ ಸ್ಥಳದಲ್ಲಿದ್ದ ಗ್ರಾಮಸ್ಥರು ಶೀಘ್ರ ಕ್ರಮ ವಹಿಸಿದ ಹಿನ್ನೆಲೆಯಲ್ಲಿ ಅಪಾರ ಸಾವು ನೋವುಗಳ ಪ್ರಮಾಣ ಕಡಿಮೆಯಾಗಿದ್ದು ಕೆಲವರಿಗೆ ತಲೆ ಮುಖ ಕೈ ಕಾಲು ಸೇರಿದಂತೆ ಇನ್ನಿತರ ಗಾಯಗಳಾಗಿದ್ದು ಘಟನಾ ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಅಗತ್ಯ ಕ್ರಮವಹಿಸಿದ್ದು ತುರ್ತು ಚಿಕಿತ್ಸಾ ವಾಹನಗಳ ಮೂಲಕ ವಿವಿಧ ಆಸ್ಪತ್ರೆಗಳಿಗೆ ಗಾಯಗೊಂಡವರನ್ನು ರವಾನಿಸುತ್ತಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next