ಪ್ರೀತಿ, ಪ್ರೇಮ ಹಾಗೂ ಸ್ನೇಹ… ಈ ಮೂರು ಅಂಶಗಳನ್ನು ಮುಖ್ಯವಾಗಿಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ “ಮಂಡ್ಯ ಹೈದ’. ಯೂತ್‌ಫುಲ್ ಕಥೆಯೊಂದನ್ನು ಸಖತ್ ಜೋಶ್‌ನಿಂದ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿರುವುದು ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ.
ಆರಂಭದಲ್ಲಿ ಪ್ರೀತಿ ಮಾಡಲು ಮುಂದಾಗುವ ಜೋಡಿಗಳು ಒಂದು ಕಡೆಯಾದರೆ, ಅದನ್ನು ಬ್ರೇಕಪ್ ಮಾಡಲು ಕಾಯುತ್ತಿರುವ ಗುಂಪು ಮತ್ತೂಂದು ಕಡೆ, ಆ ಹಾದಿಯಲ್ಲಿನ ಖುಷಿ, ಬೇಸರಗಳ ಮೂಲಕ ಸಾಗುವ ಚಿತ್ರ ಮುಂದೆ ಪ್ರೀತಿ, ಸ್ನೇಹವನ್ನು ಮುಖ್ಯವಾಗಿಟ್ಟುಕೊಂಡು ಮಗ್ಗುಲು ಬದಲಿಸುತ್ತದೆ. ನಿರ್ದೇ ಶಕರು ಒಂದು ಹರೆ ಯದ ಕಥೆಯನ್ನು ಇಂದಿನ ಟ್ರೆಂಡ್‌ಗೆ ತಕ್ಕಂತೆ ಹೇಳಲು ಪ್ರಯತ್ನಿಸಿದ್ದಾರೆ.
ಒಂದು ಕಮರ್ಷಿಯಲ್ ಸಿನಿಮಾವನ್ನು ಕಟ್ಟಿಕೊಡುವಾಗ ಯಾವ್ಯಾವ ಅಂಶಗಳು ಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದ್ದಂತಿದೆ. ಅದೇ ಕಾರಣದಿಂದ ಚಿತ್ರದಲ್ಲಿ ಕಲರ್‌ಫುಲ್ ಹಾಡು, ಭಝರರಿ ಫೈಟ್‌ಗಳಿವೆ. ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಮೊದಲರ್ಧ ಪಾತ್ರ, ಪರಿಚಯ, ಕಥೆಯ ಆರಂಭದಲ್ಲೇ ಕಳೆದು ಹೋಗುತ್ತದೆ. ಇಲ್ಲೂ ಅದೇ ಮುಂದುವರೆದಿದೆಯಾದರೂ, ದ್ವಿತೀಯಾರ್ಧ ಸಿನಿಮಾ ಹೆಚ್ಚು ಗಂಭೀರವಾಗುತ್ತದೆ.
ಪ್ರೀತಿಯನ್ನು ಪಡೆಯಲು ಹೋಗಿ ಕೆಲವರು ಸಾಯುತ್ತಾರೆ, ಮತ್ತೆ ಕೆಲವರು ಸಾಯಿಸ್ತಾರೆ, ಇಲ್ಲಿ ಹೀರೋ ಕೂಡಾ ಈ ಪ್ರೀತಿಯನ್ನು ಪಡೆಯಲು ಹೋಗಿ ಯಾರನ್ನಾದರೂ ಸಾಯಿಸುತ್ತಾ ನಾ ಅಥವಾ ತಾನೇ ಸಾಯುತ್ತಾನಾ ಎನ್ನುವುದೇ “ಮಂಡ್ಯ ಹೈದ’ ಚಿತ್ರದ ಒಟ್ಟು ಸಾರಾಂಶ.
ನಾಯಕ ಅಭಯ್ ತಮ್ಮ ನಟನೆ, ಡ್ಯಾನ್ಸ್ ಮೂಲಕ ಭರವಸೆ ಹುಟ್ಟಿಸಿದ್ದಾರೆ. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಭೂಮಿಕಾ ಹಾಗೂ ಇತರ ಕಲಾವಿದರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಒಂದು ಹಳ್ಳಿ ಸೊಗಡಿನ ಯೂತ್ ಸಿನಿಮಾವಾಗಿ “ಮಂಡ್ಯ ಹೈದ’ ಪ್ರೇಕ್ಷಕರನ್ನು ರಂಜಿಸುತ್ತದೆ.
ರವಿ ರೈ