ಮಂಡ್ಯ: ಮುಂಬೈನಿಂದ ಬಂದ ಮಹಿಳೆ, ಬಾಲಕ,ಮಳವಳ್ಳಿಯ ಓರ್ವ ಸೇರಿ, ಐವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂ ದಿಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಸೋಂಕಿತರನ್ನು ಪಿ-961, ಪಿ-962, ಪಿ- 963, ಪಿ-964 ಎಂದು ಗುರುತಿಸಲಾಗಿದೆ. ಪಿ- 961 ಸೋಂಕಿತ 48 ವರ್ಷದ ಮಹಿಳೆಯಾ ಗಿದ್ದು, ಈಕೆ ಹಲ ವರ್ಷಗಳಿಂದ ಮುಂಬೈನ ಅಂಧೇರಿ ಈಸ್ಟ್‌ನಲ್ಲಿ ವಾಸವಾಗಿದ್ದರು. ಪತಿ ಆಟೋ ಚಾಲಕನಾಗಿದ್ದು, ಮಗ ಬ್ಯಾಂಕ್ ಉದ್ಯೋಗಿ. ಇವರು ಮೂಲತಃ ಕೆ.ಆರ್.ಪೇಟೆ ತಾಲೂಕು ಸಾರಂಗಿ ಗ್ರಾಮದವರು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಹೇಳಿದ್ದಾರೆ.
ಸೋಂಕು ಖಚಿತ: ಮುಂಬೈನಲ್ಲಿ ಜೀವನ ನಡೆಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಪಾಸ್ ತೆಗೆದುಕೊಂಡು ಮೇ 10ರಂದು ಮುಂಬೈ ನಿಂದ ಟಿಟಿ ವಾಹನದಲ್ಲಿ ಪ್ರಯಾಣಿಸಿ 11ರಂದು ತುಮಕೂರು ಜಿಲ್ಲೆ ಮಾಯಸಂದ್ರ ಚೆಕ್‌ಪೋಸ್ಟ್ ಮೂಲಕ ಜಿಲ್ಲೆಗೆ ಆಗಮಿಸಿ ದ್ದರು. ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾ ಗಿತ್ತು. ಮೇ 13ರಂದು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ 19 ಇರುವುದು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಈಕೆಯ ಪತಿ ಹಾಗೂ ಮಗ ನನ್ನು ಗುರುತಿಸಲಾಗಿದೆ. ಇಬ್ಬರಲ್ಲೂ ಸೋಂಕಿ ಲ್ಲವೆಂದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.
ತಂದೆ, ಮಗನಿಗೆ ಸೋಂಕು: ಪಿ-962ರ ಸೋಂಕಿತ 38 ವರ್ಷದ ವ್ಯಕ್ತಿ, ಮೂಲತಃ ನಾಗಮಂಗಲ ತಾಲೂಕು ಗಿಡದಹೊಸಹಳ್ಳಿ ಯವರು. ಕೆ.ಆರ್.ಪೇಟೆಯ ಜಯನಗರ ದವರು. ಹತ್ತು ವರ್ಷದಿಂದ ಮುಂಬೈ ವೆಸ್ಟ್ ನಲ್ಲಿರುವ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿ ದ್ದರು. ಮುಂಬೈನ ಸಾಂತಾಕ್ರೂಜ್‌ನ ವೆಸ್ಟ್‌ಲಿಂಕ್ ರಸ್ತೆಯಲ್ಲಿ ವಾಸವಾಗಿದ್ದರು.
ಮೇ 10ರಂದು ಮುಂಬೈನಿಂದ ಪತ್ನಿ ಹಾಗೂ ಪುತ್ರ ನೊಂದಿಗೆ ಹೊರಟು, ಮೇ 11ರಂದು ಇಲ್ಲಿಗೆ ಆಗಮಿಸಿದ್ದರು. ಇವರನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಗಂಟಲು ದ್ರವ ಪರೀ ಕ್ಷೆಗೊಳಪಡಿಸಿದಾಗ ಸೋಂಕಿರುವುದು ಪತ್ತೆ ಯಾಗಿದೆ. ಹಾಗೆಯೇ ಪಿ-963ರ ಸೋಂಕಿತ 6 ವರ್ಷದ ಬಾಲಕ, ಪಿ-962ರ ಪುತ್ರನಾಗಿದ್ದಾನೆ. ಈತ ತಂದೆ-ತಾಯಿಯೊಂದಿಗೆ ಆಗಮಿ ಸಿದ್ದಾರೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿದ್ದ ಮತ್ತೋರ್ವ: ಪಿ-964ರ ಸೋಂಕಿತ 26 ವರ್ಷದ ವ್ಯಕ್ತಿ, ಮುಂಬೈ ಸೆಂಟ್ರಲ್‌ನ ಮೆರಿನ್ ಡ್ರೈವ್‌ನ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಬಸ್‌ನಲ್ಲಿ ಸ್ನೇಹಿತರೊಂದಿಗೆ ಮಾ.29ರಂದು ಮುಂಬೈ ನಿಂದ ಮಡಗಾಂವ್‌ಗೆ ಆಗಮಿಸಿ ಮೇ 8 ರವರೆಗೂ ಅಲ್ಲಿಯೇ ಇದ್ದು, ಮೇ 10ರಂದು ಕೆ.ಆರ್.ಪೇಟೆಗೆ ಆಗಮಿಸಿದ್ದರು. ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿಜಿಗಂಟಲು ದ್ರವ ಪರೀಕ್ಷೆಗೊಳ ಪಡಿಸಿದಾಗ ಸೋಂಕಿರುವುದು ದೃಢಪಟ್ಟಿದೆ. ಇವರೊಂದಿಗೆ 7 ಜನ ಪ್ರಾಥಮಿಕ ಸಂಪರ್ಕ ಹಾಗೂ 5 ಜನರನ್ನು ದ್ವಿತೀಯ ಸಂಪರ್ಕದಲ್ಲಿ ಗುರುತಿಸಲಾಗಿದೆೆ.
19 ಮಂದಿ ಗುಣಮುಖ: ಜಿಲ್ಲೆಯಲ್ಲಿರುವ ಒಟ್ಟು ಸೋಂಕಿತರಲ್ಲಿ 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಮಂಡ್ಯ, ಮಳವಳ್ಳಿ ಹಾಗೂ ನಾಗಮಂಗಲ ತಾಲೂಕು ಸಾತೇನಹಳ್ಳಿ ಗ್ರಾಮದ ಸೋಂಕಿತರು ಗುಣ ಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವೆಂಕ ಟೇಶ್ ಹೇಳಿದ್ದಾರೆ.