ಮಂಡ್ಯ: ಜಿಲ್ಲೆಯಲ್ಲಿ ಮೊದಲ ಬಾರಿಗೆ ದಾಖಲೆಯ 22 ಕೋವಿಡ್ 19 ಸೋಂಕು ಪ್ರಕರಣಗಳು ಭಾನುವಾರ ದೃಢಪಟ್ಟಿವೆ. ಇವರೆಲ್ಲರೂ ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲೂಕಿಗೆ ಸೇರಿದವರು. 22 ಮಂದಿ ಸೋಂಕಿತರಲ್ಲಿ 17 ಮಂದಿ ಮುಂಬೈನಿಂದ ಬಂದವರಾ ಗಿದ್ದರೆ, ಪಿ-869ರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 72ಕ್ಕೇರಿದೆ.
ಒಟ್ಟು 22 ಸೋಂಕಿತರಲ್ಲಿ 10 ಮಂದಿ ಪುರಷರು, 9 ಮಂದಿ ಮಹಿಳೆಯರು, ಓರ್ವ ಬಾಲಕಿ, ಓರ್ವ ಬಾಲಕ ಹಾಗೂ 1 ವರ್ಷದ ಗಂಡು ಮಗು ಸೇರಿದೆ. ಇವರಲ್ಲಿ 19 ಮಂದಿ ಕೆ.ಆರ್.ಪೇಟೆ ತಾಲೂ ಕಿಗೆ ಸೇರಿದವರಾಗಿದ್ದರೆ, ಮೂವರು ನಾಗಮಂಗಲ ತಾಲೂಕಿಗೆ ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ. ಪಿ-1097 ರಿಂದ ಪಿ-1117 ಹಾಗೂ ಪಿ-1125 ಸೋಂಕಿತ ವ್ಯಕ್ತಿಗಳಾಗಿದ್ದಾರೆ. ಇವರಲ್ಲಿ ಪಿ-1108, ಪಿ-1112, ಪಿ-1113, ಪಿ-1114 ಹಾಗೂ ಪಿ-1125 ಸೋಂಕಿತರು ಪಿ-869 ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರು.
ಪಿ-869ರ ಸಂಪರ್ಕದಲ್ಲಿದ್ದ ಐವರಿಗೆ ಸೋಂಕು: ಮುಂಬೈನಿಂದ ಬಂದಿದ್ದ ಕೆ.ಆರ್.ಪೇಟೆ ತಾಲೂಕು ಮರುವನಹಳ್ಳಿ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿತ್ತು. ಈತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಿ-1108 ಸೋಂಕಿತ 75 ವರ್ಷದ ವೃದ್ಧೆ, ಪಿ-1112 ಸೋಂಕಿತೆ 65 ವರ್ಷದ ಗೃಹಿಣಿ, ಪಿ-1113 ಸೋಂಕಿತೆ 60 ವರ್ಷದ ಮಹಿಳೆ, ಪಿ-1114 ಸೋಂಕಿತ 28 ವರ್ಷದ ಯುವಕ ಬೆಂಗಳೂರಿನ ಮೂಡಲಪಾಳ್ಯ ದಲ್ಲಿ ಕೆಲಸ ಮಾಡುತ್ತಿದ್ದು, ಯುಗಾದಿ ವೇಳೆ ಕೆ.ಆರ್. ಪೇಟೆಗೆ ಆಗಮಿಸಿದ್ದರು. ಪಿ-1125 ಸೋಂಕಿತ 53 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಇವರೆಲ್ಲರೂ ಮರುವನಹಳ್ಳಿಯವರು. ಪಿ-1105 ಸೋಂಕಿತೆ 48 ವರ್ಷದ ಮಹಿಳೆ ಪಿ-1104ರ ಹೆಂಡತಿ, ಪಿ-1106 ಸೋಂಕಿತೆ 32 ವರ್ಷದ ಮಹಿಳೆ ಪಿ-1104ರ ಮಗಳಾಗಿದ್ದಾರೆ. ಪಿ.1107 ಸೋಂಕಿತ 32 ವರ್ಷದ ವ್ಯಕ್ತಿ. ಮುಂಬೈ ನಲ್ಲಿ ಹೋಟೆಲ್ ಉದ್ಯಮಿ, ಈತ 1104ರ ಅಳಿಯ. ಪಿ-1100 ಸೋಂಕಿತೆ 11 ವರ್ಷದ ಬಾಲಕಿ ಪಿ-1104ರ ಮೊಮ್ಮಗಳು. ಪಿ-1099 ಸೋಂಕಿತ 9 ವರ್ಷದ ಬಾಲಕ ಪಿ-1004 ಸೋಂಕಿತನ ಮಗ. ಪಿ-1101 ಸೋಂಕಿತ 8 ವರ್ಷದ ಬಾಲಕ, ಈತ ಪಿ-1104ರ ಮೊಮ್ಮಗ. ಸಹ ಪ್ರಯಾಣಿಕರು: ಪಿ.1109 ಸೋಂಕಿತ 44 ವರ್ಷದ ವ್ಯಕ್ತಿ ಮುಂಬೈ ಸಾಂತಾಕ್ರೂಸ್‌ನಲ್ಲಿ ಕ್ಸಿ ಚಾಲಕನಾಗಿದ್ದು, ಮೇ 11ರಂದು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಬಂದಿದ್ದರೆ,
ಪಿ.1110 ಸೋಂಕಿತ 52 ವರ್ಷದ ವ್ಯಕ್ತಿ ಮುಂಬೈ ಬಿರಾ ಕಂಪ ನಿಯಲ್ಲಿ ಗಾರ್ಡ್‌ನ್ ಆಗಿ ಕೆಲಸ ಮಾಡುತ್ತಿದ್ದನು. ಇವರು ಮೇ 13ರಂದು ಬಸ್‌ನಲ್ಲಿ 26 ಮಂದಿ ಸಹ ಪ್ರಯಾಣಿಕರೊಂದಿಗೆ ಆಗಮಿಸಿದ್ದರು. ಪಿ.1111 ಸೋಂಕಿತೆ 35 ವರ್ಷದ ಗೃಹಿಣಿ ಮುಂಬೈ ಸಾಂತಾಕ್ರೂಜ್ ವಾಸಿ. ಪಿ-1115 ಸೋಂಕಿತೆ 32 ವರ್ಷದ ಗೃಹಿಣಿ. ಮುಂಬೈನ ಜಾಧವನಗರ ನಿವಾಸಿ. ಇವರಿಬ್ಬರೂ ಟಿಟಿ ವಾಹನದಲ್ಲಿ ಆಗಮಿಸಿದ್ದು, ಪಿ-1115ರ ಮಹಿಳೆ ನಾಗಮಂಗಲಕ್ಕೆ 12ರಂದು ಆಗಮಿಸಿದ್ದರು. ಪಿ-1116 ಸೋಂಕಿತ 39 ವರ್ಷದ ಯುವಕ, ಮುಂಬೈನ ಕಮಾನಿಕುರಾದಲ್ಲಿ ಕ್ಯಾಮರಾಮನ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಪಿ-1117 ಸೋಂಕಿತ 2 ವರ್ಷದ ಮಗು ಪಿ-1116ರ ಮಗ. ತಂದೆ-ಮಗು ಕಾರಿನ ಮೂಲಕ ಮೇ 12ರಂದು ಬೆಳ್ಳೂರು ಚೆಕ್‌ಪೋಸ್ಟ್‌ಗೆ ಬಂದಿದ್ದು, 13ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಇದೀಗ ಸೋಂಕು ದೃಢಪಟ್ಟಿದೆ.
ಒಂದೇ ಕುಟುಂಬದ 7 ಮಂದಿಗೆ ಸೋಂಕು: ಮುಂಬೈನಿಂದ ಟಿಟಿ ಬಸ್‌ನಲ್ಲಿ ಬಂದವರಲ್ಲಿ ಪಿ-1098, ಪಿ-1099, ಪಿ-1100, ಪಿ-1101, ಪಿ-1102, ಪಿ-1103, ಪಿ-1104, ಪಿ-1105, ಪಿ-1106, ಪಿ-1107, ಪಿ-1115ರಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಮೇ 11ರಂದು ಮುಂಬೈನಿಂದ ಹೊರಟು ಮೇ 12ರಂದು ಕೆ.ಆರ್.ಪೇಟೆಯ ಆನೆಗೊಳ ಚೆಕ್‌ಪೋಸ್ಟ್‌ಗೆ ಆಗಮಿಸಿದ್ದಾರೆ. 13ರಂದು ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಮುಂಬೈನ ವಿಲೇಪಾರ್ಲೆ, ಸಾಂತಾಕ್ರೂಜ್ ವಾಸಿಗಳಾಗಿದ್ದಾರೆ. ಪಿ.1104 58 ವರ್ಷದ ವ್ಯಕ್ತಿ, ಈತ ಮುಂಬೈ ತೋಟವೊಂ ದರಲ್ಲಿ ಕೆಲಸ ಮಾಡುತ್ತಿದ್ದ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರೊಂದಿಗೆ ಕೆ.ಆರ್.ಪೇಟೆಗೆ ಬಂದಿದ್ದಾರೆ. 13ರಂದು ಪರೀಕ್ಷೆಗೊಳಪಡಿಸಿದಾಗ ಸಿಟವ್ ಬಂದಿದೆ. ಈ ವ್ಯಕ್ತಿಯ ಕುಟುಂಬಕ್ಕೆ ಸೇರಿದ 7 ಮಂದಿಗೆ ಸೋಂಕು ದೃಢಪಟ್ಟಿದೆ.