Advertisement

Ipl 2024: ರಾಜಸ್ಥಾನ್‌ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಂಜಾಬ್

08:25 AM May 16, 2024 | Team Udayavani |

ಗುವಾಹಾಟಿ: ಸ್ಯಾಮ್‌ ಕರನ್‌ ಮತ್ತು ಬೌಲರ್‌ ಗಳ ಅಮೋಘ ನಿರ್ವಹಣೆ ಯಿಂದಾಗಿ ಪಂಜಾಬ್‌ ತಂಡವು ಬುಧವಾರದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿದೆ.

Advertisement

ಸತತ ನಾಲ್ಕನೇ ಪಂದ್ಯದಲ್ಲಿ ಸೋಲನ್ನು ಕಂಡಿರುವ ರಾಜಸ್ಥಾನ್‌ ರಾಯಲ್ಸ್‌ ತಂಡವು ಸದ್ಯ 13 ಪಂದ್ಯಗಳಿಂದ 16 ಅಂಕ ಪಡೆದು ಪ್ಲೇ ಆಫ್ ತೇರ್ಗಡೆಯನ್ನು ಖಚಿತಪಡಿಸಿದೆ. ಆದರೆ ಸತತ ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಸದ್ಯ ಇರುವ ದ್ವಿತೀಯ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಸದ್ಯ 14 ಅಂಕ ಹೊಂದಿರುವ ಸನ್‌ರೈಸರ್ ಹೈದರಾಬಾದ್‌ಗೆ ಇನ್ನೆರಡು ಪಂದ್ಯಗಳಲ್ಲಿ ಆಡಲಿದ್ದು ದ್ವಿತೀಯ ಸ್ಥಾನಕ್ಕೇರುವ ಸಾಧ್ಯತೆಯಿದೆ.

ಬೌಲರ್‌ಗಳ ಉತ್ತಮ ದಾಳಿಯಿಂದಾಗಿ ರಾಜಸ್ಥಾನದ ಓಟವನ್ನು 9 ವಿಕೆಟಿಗೆ 144 ರನ್ನಿಗೆ ನಿಯಂತ್ರಿಸಿದ ಪಂಜಾಬ್‌ ಆಬಳಿಕ ಸ್ಯಾಮ್‌ ಕರನ್‌ ಅವರ ಅಜೇಯ ಅರ್ಧಶತಕದಿಂದಾಗಿ 18.5 ಓವರ್‌ಗಳಲ್ಲಿ ಐದು ವಿಕೆಟಿಗೆ 145 ರನ್‌ ಗಳಿಸಿ ಜಯಭೇರಿ ಬಾರಿಸಿತು. ಸ್ಯಾಮ್‌ ಕರನ್‌ ಅವರ ಅಜೇಯ 63 ರನ್‌ ನೆರವಿನಿಂದ ಪಂಜಾಬ್‌ ಸುಲಭ ಗೆಲುವು ಕಂಡಿತು.

ಮಂಗಳವಾರ ರಾತ್ರಿ ಲಕ್ನೋ ವಿರುದ್ಧ ಡೆಲ್ಲಿ ಗೆಲುವು ಸಾಧಿಸಿದ ಬಳಿಕ ರಾಜಸ್ಥಾನ್‌ ತಂಡದ ಪ್ಲೇ ಆಫ್ ಅಧಿಕೃತಗೊಂಡಿತ್ತು. ಸ್ಯಾಮ್ಸನ್‌ ತಂಡದ ಮುಂದಿನ ಗುರಿ ಅಗ್ರಸ್ಥಾನಕ್ಕೆ ಏರುವುದು. ಇನ್ನೊಂದೆಡೆ ಪಂಜಾಬ್‌ ಕಿಂಗ್ಸ್‌ ಈಗಾಗಲೇ ಕೂಟದಿಂದ ನಿರ್ಗಮಿಸಿದೆ.

ಆರಂಭದಲ್ಲೇ ಹೊಡೆತ
ಕರನ್‌ ಮೊದಲ ಓವರ್‌ನಲ್ಲೇ ಯಶಸ್ವಿ ಜೈಸ್ವಾಲ್‌ (4) ವಿಕೆಟ್‌ ಹಾರಿಸಿ ರಾಜಸ್ಥಾನಕ್ಕೆ ಆಘಾತವಿಕ್ಕಿದರು. ಪವರ್‌ ಪ್ಲೇಯಲ್ಲಿ ಪಂಜಾಬ್‌ ಬೌಲರ್ ಸಂಪೂರ್ಣ ಮೇಲುಗೈ ಸಾಧಿಸಿದರು. ರಾಜಸ್ಥಾನಕ್ಕೆ ಗಳಿಸಲು ಸಾಧ್ಯವಾದದ್ದು 38 ರನ್‌ ಮಾತ್ರ.

Advertisement

ಪವರ್‌ ಪ್ಲೇ ಮುಗಿದ ಬೆನ್ನಲ್ಲೇ ನಥನ್‌ ಎಲ್ಲಿಸ್‌ ದೊಡ್ಡದೊಂದು ಬೇಟೆಯಾಡಿದರು. ನಾಯಕ ಸಂಜು ಸ್ಯಾಮ್ಸನ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಸ್ಯಾಮ್ಸನ್‌ ಗಳಿಕೆ 15 ಎಸೆತಗಳಿಂದ 18 ರನ್‌. ಪದಾರ್ಪಣ ಪಂದ್ಯವಾಡಿದ ಕ್ಯಾಡ್‌ ಮೋರ್‌ ಕೂಡ 18ರ ಗಡಿಯಲ್ಲಿ ಎಡವಿದರು. ಇವರಿಬ್ಬರ ವಿಕೆಟ್‌ 2 ರನ್‌
ಅಂತರದಲ್ಲಿ ಉರುಳಿತು. ಹೀಗಾಗಿ ಅರ್ಧ ಹಾದಿ ಕ್ರಮಿಸುವಾಗ ರಾಜಸ್ಥಾನ್‌ 3ಕ್ಕೆ 58 ರನ್‌ ಮಾಡಿ ಕುಂಟುತ್ತಿತ್ತು.

ಅಸ್ಸಾಮ್‌ನವರೇ ಆದ ರಿಯಾನ್‌ ಪರಾಗ್‌ ಹೋರಾಟವೊಂದನ್ನು ಸಂಘಟಿಸಿ 48 ರನ್‌ ಹೊಡೆದರು (6 ಬೌಂಡರಿ). ಸ್ಯಾಮ್‌ ಕರನ್‌, ಹರ್ಷಲ್‌ ಪಟೇಲ್‌, ಚಹರ್‌ ತಲಾ 2 ವಿಕೆಟ್‌ ಉರುಳಿಸಿ ರಾಜಸ್ಥಾನಕ್ಕೆ ಕಡಿವಾಣ ಹಾಕಿದರು.

ಬಟ್ಲರ್‌ ಬದಲು ಕ್ಯಾಡ್‌ಮೋರ್‌
ರಾಜಸ್ಥಾನ್‌ ರಾಯಲ್ಸ್‌ ತಂಡದ ಇಂಗ್ಲೆಂಡ್‌ ಆರಂಭಕಾರ ಜಾಸ್‌ ಬಟ್ಲರ್‌ ತವರಿಗೆ ಮರಳಿದ ಕಾರಣ ಇಂಗ್ಲೆಂಡ್‌ನ‌ವರೇ ಆದ ಟಾಮ್‌ ಕೋಹÉರ್‌ ಕ್ಯಾಡ್‌ಮೋರ್‌ ಐಪಿಎಲ್‌ ಪದಾರ್ಪಣೆ ಮಾಡಿ ದರು. ಆದರೆ ಪಂಜಾಬ್‌ಗ ನಾಯಕ ಸ್ಯಾಮ್‌ ಕರನ್‌ ಲಭ್ಯರಾದರು.

ಸ್ಕೋರ್‌ ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌
ಯಶಸ್ವಿ ಜೈಸ್ವಾಲ್‌ ಬಿ ಕರನ್‌ 4
ಟಾಮ್‌ ಕ್ಯಾಡ್‌ಮೋರ್‌ ಸಿ ಜಿತೇಶ್‌ ಬಿ ಚಹರ್‌ 18
ಸಂಜು ಸ್ಯಾಮ್ಸನ್‌ ಸಿ ಚಹರ್‌ ಬಿ ಎಲ್ಲಿಸ್‌ 18
ರಿಯಾನ್‌ ಪರಾಗ್‌ ಎಲ್‌ಬಿಡಬ್ಲ್ಯು ಪಟೇಲ್‌ 48
ಆರ್‌. ಅಶ್ವಿ‌ನ್‌ ಸಿ ಶಶಾಂಕ್‌ ಬಿ ಅರ್ಷದೀಪ್‌ 28
ಧ್ರುವ ಜುರೆಲ್‌ ಸಿ ಬ್ರಾರ್‌ ಬಿ ಕರನ್‌ 0
ರೋವ¾ನ್‌ ಪೊವೆಲ್‌ ಸಿ ಮತ್ತು ಬಿ ಚಹರ್‌ 4
ಡೊನೊವಾನ್‌ ಫೆರೀರ ಸಿ ರೋಸ್ಯೂ ಬಿ ಪಟೇಲ್‌ 7
ಟ್ರೆಂಟ್‌ ಬೌಲ್ಟ್ ರನೌಟ್‌ 12
ಆವೇಶ್‌ ಖಾನ್‌ ಔಟಾಗದೆ 3
ಇತರ 2
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 144
ವಿಕೆಟ್‌ ಪತನ: 1-4, 2-40, 3-42, 4-92, 5-97, 6-102, 7-125, 8-138, 9-144.
ಬೌಲಿಂಗ್‌:
ಸ್ಯಾಮ್‌ ಕರನ್‌ 3-0-24-2
ಅರ್ಷದೀಪ್‌ ಸಿಂಗ್‌ 4-0-31-1
ನಥನ್‌ ಎಲ್ಲಿಸ್‌ 4-0-24-1
ಹರ್ಷಲ್‌ ಪಟೇಲ್‌ 4-0-28-2
ರಾಹುಲ್‌ ಚಹರ್‌ 4-0-26-2
ಹರ್‌ಪ್ರೀತ್‌ ಬ್ರಾರ್‌ 1-0-10-0
ಪಂಜಾಬ್‌ ಕಿಂಗ್ಸ್‌
ಪ್ರಭ್‌ಸಿಮ್ರಾನ್‌ ಸಿಂಗ್‌ ಸಿ ಚಹಲ್‌ ಬಿ ಬೌಲ್ಟ್ 6
ಜಾನಿ ಬೇರ್‌ಸ್ಟೋ ಸಿ ಪರಾಗ್‌ ಬಿ ಚಹಲ್‌ 14
ರಿಲೀ ರೋಸೊ ಸಿ ಜೈಸ್ವಾಲ್‌ ಬಿ ಆವೇಶ್‌ 22
ಶಶಾಂಕ್‌ ಸಿಂಗ್‌ ಎಲ್‌ಬಿಡಬ್ಲ್ಯು ಬಿ ಆವೇಶ್‌ 0
ಸ್ಯಾಮ್‌ ಕರನ್‌ ಔಟಾಗದೆ 63
ಜಿತೇಶ್‌ ಶರ್ಮ ಸಿ ಪರಾಗ್‌ ಬಿ ಚಹಲ್‌ 22
ಅಶುತೋಷ್‌ ಶರ್ಮ ಔಟಾಗದೆ 17
ಇತರ: 1
ಒಟ್ಟು (18.5 ಓವರ್‌ಗಳಲ್ಲಿ 5 ವಿಕೆಟಿಗೆ) 145
ವಿಕೆಟ್‌ ಪತನ: 1-6, 2-36, 3-36, 4-48, 5-111
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 3-0-27-1
ಸಂದೀಪ್‌ ಶರ್ಮ 4-0-28-0
ಆವೇಶ್‌ ಖಾನ್‌ 3.5-0-28-2
ಆರ್‌. ಅಶ್ವಿ‌ನ್‌ 4-0-31-0
ಯಜುವೇಂದ್ರ ಚಹಲ್‌ 4-0-31-2
ಪಂದ್ಯಶ್ರೇಷ್ಠ: ಸ್ಯಾಮ್‌ ಕರನ್‌

Advertisement

Udayavani is now on Telegram. Click here to join our channel and stay updated with the latest news.

Next