ಉಡುಪಿ: ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಉಡುಪಿಯ ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ನಿಂದ ನಗರದ ಹೃದಯ ಭಾಗಕ್ಕೆ ಸನಿಹದಲ್ಲಿರುವ ಉಡುಪಿ-ಮಣಿಪಾಲ ಮುಖ್ಯರಸ್ತೆಯ ಕಲ್ಸಂಕದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಸೌಲಭ್ಯಗಳುಳ್ಳ “ಮಾಂಡವಿ ರಾಯಲ್ ಪ್ರಿನ್ಸ್’ ವಸತಿ ಮತ್ತು ವಾಣಿಜ್ಯ ಸಮುಚ್ಚಯದ ಉದ್ಘಾಟನೆ ಸೋಮವಾರ ಜರಗಿತು.
ಮಂಗಳೂರಿನ ಧರ್ಮಗುರು ರೆ|ಫಾ| ಗೋಡ್‌ಫಿ ಸಲ್ಡಾನ್ಹ, ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಧರ್ಮಗುರು ರೆ|ಫಾ| ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಮತ್ತು ಸಹಾಯಕ ಧರ್ಮಗುರು ರೆ| ಫಾ| ಅಂತೋನಿ ಕ್ಲೇನಿ ಡಿ’ಸೋಜಾ ಉದ್ಘಾಟಿಸಿದರು.
ರೆ|ಫಾ| ಗೋಡ್‌ಫಿÅ ಸಲ್ಡಾನ್ಹ ಮಾತನಾಡಿ, ಉಡುಪಿ, ಮಣಿಪಾಲ ಪರಿಸರದಲ್ಲಿ ಮಾಂಡವಿ ಬಿಲ್ಡರ್ನವರು 50ಕ್ಕೂ ಹೆಚ್ಚು ಸಮುಚ್ಚಯಗಳನ್ನು ನಿರ್ಮಿಸಿದ್ದಾರೆ. ಅವರಿಂದ ಇನ್ನಷ್ಟು ಸಮುಚ್ಚಯಗಳು ನಿರ್ಮಾಣಗೊಳ್ಳಲಿ ಎಂದು ಹಾರೈಸಿದರು.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಳವಡಿಸಲಾದ ಜಪಾನ್ ತಂತ್ರಜ್ಞಾನದ ಲಿಫ್ಟನ್ನು ಮಣಿಪಾಲ ಕೆಎಂಸಿಯ ಯೂನಿಟ್ 4ರ ಮುಖ್ಯಸ್ಥ ಡಾ| ಕಿರಣ್ ಕುಮಾರ್ ವೇದವ್ಯಾಸ ಆಚಾರ್ಯ, ಸಭಾ ಕಾರ್ಯಕ್ರಮವನ್ನು ಮಣಿಪಾಲ ಮೀಡಿಯ ನೆಟ್‌ವರ್ಕ್ ಲಿ.ನ ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ ಉದ್ಘಾಟಿಸಿ ಶುಭ ಕೋರಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ, ಶಾಸಕ ಕೆ. ರಘುಪತಿ ಭಟ್, ಲಯನ್ಸ್ ಗವರ್ನರ್ ವಿ.ಜಿ. ಶೆಟ್ಟಿ ಶುಭ ಕೋರಿದರು. ಉಜ್ವಲ್ ಡೆವಲಪರ್ನ ಪುರುಷೋತ್ತಮ ಪಿ. ಶೆಟ್ಟಿ ಸ್ವಿಮ್ಮಿಂಗ್ ಪೂಲ್ ಉದ್ಘಾಟಿಸಿದರು. ಆರ್ಕಿಟೆಕ್ಟ್ ಪ್ರಕಾಶ್ ಸೈಮನ್ ಅವರನ್ನು ಸಂಸ್ಥೆ ವತಿಯಿಂದ ಸಮ್ಮಾನಿಸಲಾಯಿತು. ಜೆರ್ರಿ ವಿನ್ಸೆಂಟ್ ಡಾಯಸ್ ಅವರ 65ನೇ ಜನ್ಮದಿನದ ಸಲುವಾಗಿ ಅವರ ಪುತ್ರರು ಅವರನ್ನು ಗೌರವಿಸಿದರು.
ಸಾಯಿರಾಧಾ ಡೆವಲಪರ್ನ ಮನೋಹರ ಎಸ್. ಶೆಟ್ಟಿ, ನಗರಸಭೆ ಸದಸ್ಯರಾದ ಗೀತಾ ಶೇಟ್, ಗಿರೀಶ್ ಅಂಚನ್, ಮೋಲಿ ಡಾಯಸ್, ಸಂಸ್ಥೆಯ ನಿರ್ದೇಶಕರಾದ ಗ್ಲೆನ್ ಡಾಯಸ್, ಜೇಸನ್ ಡಾಯಸ್ ಉಪಸ್ಥಿತರಿದ್ದರು.ಸಂಸ್ಥೆಯ ಎಂಡಿ ಜೆರ್ರಿ ವಿನ್ಸೆಂಟ್ ಡಾಯಸ್ ಸ್ವಾಗತಿಸಿದರು. ಸ್ಟೀವನ್ ಕ್ರಾಸ್ಟೋ ಉದ್ಯಾವರ ನಿರೂಪಿಸಿ, ವಂದಿಸಿದರು.
ಅತ್ಯಾಧುನಿಕ ಸೌಕರ್ಯ
ಈ ಸಮುಚ್ಚಯದಲ್ಲಿ ವಿಸಿಟರ್ ವೈಟಿಂಗ್ ಲಾಂಜ್‌ನೊಂದಿಗೆ ಗ್ರ್ಯಾಂಡ್ ಎಂಟ್ರೆನ್ಸ್ ಲಾಬಿ, ಅಟೋ ಡೋರ್‌ವುಳ್ಳ ತಲಾ 13 ಮಂದಿ ಸಾಮರ್ಥ್ಯದ 2 ಹೈಸ್ಪೀಡ್ ಬೆಡ್‌ಲಿಫ್ಟ್‌ಗಳು, ಕ್ಲಬ್‌ಹೌಸ್, ಚಿಲ್ಡ್ರನ್ಸ್ ಪ್ಲೇ ಏರಿಯಾ, ಸ್ವಿಮ್ಮಿಂಗ್ ಪೂಲ್, ಮಲ್ಟಿ ಪರ್ಪಸ್ ಸಭಾಂಗಣ, 24 ಗಂಟೆನೀರು, ವಿದ್ಯುತ್, ವಿಶೇಷ ಭದ್ರತೆ, ಸಿಸಿಟಿವಿ, ಡ್ರೈವರ್ ರೆಸ್ಟ್ ರೂಮ್ ಮೊದಲಾದ ಸೌಲಭ್ಯಗಳಿವೆ. ತಳ ಮತ್ತು ನೆಲ ಅಂತಸ್ತು ಸೇರಿ ಒಟ್ಟು 10 ಅಂತಸ್ತುಗಳಿವೆ. ನೆಲ ಅಂತಸ್ತು, ಮೊದಲ ಅಂತಸ್ತಿನಲ್ಲಿ 14 ಶಾಪಿಂಗ್ ಸೆಂಟರ್, ಉಳಿದ ಅಂತಸ್ತುಗಳಲ್ಲಿ 3 ಬಿಎಚ್‌ಕೆಯ 1,564 ಚ.ಅಡಿಯಿಂದ 2,140 ಚ.ಅಡಿ ವರೆಗೆ, 2 ಬಿಎಚ್‌ಕೆಯ 1,244 ಚ.ಅಡಿಯ 36 ಫ್ಲ್ಯಾಟ್‌ಗಳಿವೆ.