Advertisement

ಮಕ್ಕಳಿಗೆ ಕಡ್ಡಾಯ ಕೋವಿಡ್‌ ಲಸಿಕೆ ಹಾಕಿಸಿ

12:07 PM Mar 17, 2022 | Team Udayavani |

ಬಳ್ಳಾರಿ: ಭಾರತ ಸರ್ಕಾರವು ಆರಂಭಿಸಿರುವ ಕೋವಿಡ್‌ ಲಸಿಕಾ ಅಭಿಯಾನದಲ್ಲಿ 12ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಾರ್ಬಿವ್ಯಾಕ್ಸ್‌ ಲಸಿಕೆಯನ್ನು ನೀಡಲು ಉದ್ದೇಶಿಸಿದ್ದು, ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಬೇಕು. ಇದರಿಂದ ಕೋವಿಡ್‌ ಸಾಂಕ್ರಾಮಿಕವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್‌.ಎಲ್‌. ಜನಾರ್ಧನ ಹೇಳಿದರು.

Advertisement

ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್‌ ಲಸಿಕೆ ನೀಡಿಕೆ ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಕೋವಿಡ್‌ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು. 2010 ಮಾ.15ರ ಪೂರ್ವದಲ್ಲಿ ಜನಿಸಿದ ಎಲ್ಲ ಮಕ್ಕಳಿಗೆ ಇಂದಿನಿಂದ ಆರಂಭವಾಗುವ ಅಭಿಯಾನದಲ್ಲಿ ಕಾರ್ಬಿವ್ಯಾಕ್ಸ್‌ ಲಸಿಕೆಯನ್ನು ನೀಡಲಾಗುತ್ತಿದ್ದು, 7ನೇ, 8ನೇ ಹಾಗೂ 9ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಎಲ್ಲ ಮಕ್ಕಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಬೇಕು ಎಂದರು. 60 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಈಗಾಗಲೇ ತಾವು ಎರಡನೇ ಡೋಸ್‌ ಲಸಿಕೆ ಪಡೆದು 9 ತಿಂಗಳು ಪೂರ್ಣವಾದಲ್ಲಿ ತಪ್ಪದೇ ಮುನ್ನೆಚ್ಚರಿಕಾ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಆರ್‌. ಅನಿಲ್‌ ಕುಮಾರ್‌ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 66,150 ಹಾಗೂ ವಿಜಯನಗರ ಜಿಲ್ಲೆಯಲ್ಲಿ 59,726 ಮಕ್ಕಳು ಸೇರಿದಂತೆ ಒಟ್ಟು 1,25,876 ಮಕ್ಕಳಿಗೆ ಲಸಿಕೆಯನ್ನು ನೀಡಲು ಉದ್ದೇಶಿಸಲಾಗಿದೆ ಮತ್ತು 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಬಳ್ಳಾರಿ ಜಿಲ್ಲೆಯಲ್ಲಿ 1,20,589 ಹಾಗೂ ವಿಜಯನಗರ ಜಿಲ್ಲೆಯಲ್ಲಿ 1,09,693 ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ವಿವರಿಸಿದರು. ಕಾರ್ಬಿವ್ಯಾಕ್ಸ್‌ 2 ಡೋಸ್‌ ಪಡೆಯಬೇಕಿದೆ. ಮೊದಲನೇ ಡೋಸ್‌ ಪಡೆದ ನಂತರ 128 ದಿನಗಳ ಅಂತರದಲ್ಲಿ 2ನೇಯ ಡೋಸ್‌ ಪಡೆಯಬಹುದು ಎಂದು ಹೇಳಿದ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಅನಿಲಕುಮಾರ್‌ ಅವರು ಈ ನಿಟ್ಟಿನಲ್ಲಿ ಯಾವುದೇ ಭಯವಿಲ್ಲದೇ ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವ ಮೂಲಕ ಮಕ್ಕಳ ಆರೋಗ್ಯವನ್ನು ಕೋವಿಡ್‌ ಸೋಂಕಿನಿಂದ ಮುಕ್ತ ಮಾಡಲು ಸಹಕರಿಸಬೇಕು ಎಂದು ಅವರು ಕೋರಿದರು. ಕಾರ್ಯಕ್ರಮದಲ್ಲಿ ಜಿಎಮ್‌ ಎಚ್‌ಪಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯರಾದ ಶ್ರೀಲಹರಿ, ಸೌಮ್ಯ ಸೇರಿದಂತೆ ಇನ್ನಿತರೆ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಕಾರ್ಬಿವ್ಯಾಕ್ಸ್‌ ಲಸಿಕೆ ನೀಡಲಾಯಿತು ಮತ್ತು 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮುನ್ನೆಚ್ಚರಿಕೆ ಲಸಿಕೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌.ಬಸರೆಡ್ಡಿ, ವಿಮ್ಸ್‌ ನಿರ್ದೇಶಕ ಡಾ| ಗಂಗಾಧರ ಗೌಡ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ| ಗುರುನಾಥ ಬಿ.ಚೌವ್ಹಾಣ, ಎಸ್‌ಎಮ್‌ಒ ಡಾ| ಆರ್‌. ಎಸ್‌ ಶ್ರೀಧರ್‌, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ| ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಧಿಕಾರಿ ಡಾ| ವಿ.ಇಂದ್ರಾಣಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ| ಮೋಹನಕುಮಾರಿ, ಆರ್‌ ಎಂಒ ಡಾ| ವಿಶ್ವನಾಥ್‌, ಮಕ್ಕಳ ತಜ್ಞ ಡಾ| ಬಾಲವೆಂಕಟೇಶ್‌, ಡಾ| ಯೋಗೇಶ್ವರ್‌, ಡಾ| ನಜ್ಮಾ, ಕೆಹೆಚ್‌ಪಿಟಿ ಅಧಿಕಾರಿ ತೇಜಶ್ವಿ‌ನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಈಶ್ವರ ಎಚ್‌. ದಾಸಪ್ಪನವರ, ಶುಶ್ರೂಷಣ ಅಧಿಧೀಕ್ಷಕಿ ರಾಜೇಶ್ವರಿ, ವಿಮಲ, ಜಗದೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next