Advertisement

ಕುರುಕಲು ತಿಂಡಿಗೆ ಶೀಘ್ರ ಜಂಕ್‌ಫ‌ುಡ್‌ ಲೇಬಲ್‌ ಕಡ್ಡಾಯ

09:41 AM Jan 22, 2017 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ನೀವು ಜನಪ್ರಿಯ ಬ್ರಾಂಡ್‌ನ‌ ಪ್ಯಾಕೆಟ್‌ಗಳಲ್ಲಿರುವ ಚಿಪ್ಸ್‌ ಮತ್ತು ಇತರ ಕುರುಕುಲು ತಿಂಡಿಗಳನ್ನು ಖರೀದಿಸುವ ಮೊದಲು “ಜಂಕ್‌ ಫ‌ುಡ್‌’ ಎಂಬ ಲೇಬಲ್‌ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿ.

Advertisement

ಹೆಚ್ಚಿನ ಪ್ರಮಾಣದಲ್ಲಿ ಫ್ಯಾಟ್‌, ಉಪ್ಪು, ಸಕ್ಕರೆ ಇರುವ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಇಂಥ ಲೇಬಲ್‌ ಅಳವಡಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಶೀಘ್ರ ಆದೇಶ ಹೊರಡಿಸಲಿದೆ. ಈ ಮೂಲಕ ಪೌಷ್ಟಿಕ ಆರೋಗ್ಯಪೂರ್ಣ ಆಹಾರ ಮತ್ತು ಆರೋಗ್ಯಕ್ಕೆ ಪೂರಕವಲ್ಲದ ಆಹಾರ ಎಂಬುದನ್ನು ವರ್ಗೀಕರಿಸಲು ನೆರವಾಗಲಿದೆ. “ಉಪ್ಪು, ಫ್ಯಾಟ್‌, ಸಕ್ಕರೆ ಪ್ರಮಾಣಗಳನ್ನು ಆಧರಿಸಿ ತಂಪು ಪಾನೀಯ, ಆಹಾರಗಳಿಗೆ ಇಂಥ ವರ್ಗೀಕರಣ ನೀಡಲಾಗುತ್ತದೆ. ಭಾರತೀಯ ಆಹಾರ ಪದ್ಧತಿ ಮತ್ತು ಅಂತಾರಾಷ್ಟ್ರೀಯ ಆಹಾರ ವ್ಯವಸ್ಥೆಯನ್ನು ಅನುಸರಿಸಿ ನಿಯಮ ಜಾರಿ ಮಾಡಲಾಗುತ್ತದೆ’ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್‌  ಅಗರ್ವಾಲ್‌ ಹೇಳಿದ್ದಾರೆ. ಪ್ರಾಧಿಕಾರ ಯಾವ ಉತ್ಪನ್ನಗಳು ಎಷ್ಟು ಪ್ರಮಾಣದಲ್ಲಿರಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸುತ್ತಿದೆ. ಆಯಾ ಆಹಾರದ ಉತ್ಪನ್ನಗಳನ್ನು ಉತ್ಪಾದಿಸುವ ಕಂಪೆನಿಗಳು ಫ್ಯಾಟ್‌ ಪ್ರಮಾಣ ಎಷ್ಟಿದೆ ಎಂಬ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಬೇಕಾಗುತ್ತದೆ. ಯಾವ ಆಹಾರ ಜಂಕ್‌ ಪುಡ್‌ ಆಗಿದೆ ಎಂಬ ಬಗ್ಗೆ ಪ್ರಕಟಣೆ ಹೊರಡಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next