Advertisement

ಜನಾದೇಶ ಬಿಹಾರ ಜನಸೇವೆಗೆ; ಒಂದು ಕುಟುಂಬದ ಸೇವೆಗಲ್ಲ: ನಿತೀಶ್‌

07:17 PM Jul 28, 2017 | Team Udayavani |

ಹೊಸದಿಲ್ಲಿ : ಬಿಹಾರದ ಜನತೆ ನನಗೆ ಜನಾದೇಶ ಕೊಟ್ಟದ್ದು ಒಂದು ಕುಟುಂಬದ ಸೇವೆ ಮಾಡುವುದಕ್ಕಲ್ಲ; ಬದಲು ಪಾರದರ್ಶಕ ಆಡಳಿತ ಮತ್ತು ರಾಜ್ಯದ ಅಭಿವೃದ್ಧಿ ಸಾಧನೆಗಾಗಿ ಎಂದು ಮುಖ್ಯಮಂತ್ರಿ  ನಿತೀಶ್‌ ಕುಮಾರ್‌ ಅವರಿಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಚರ್ಚೆಯಲ್ಲಿ ಹೇಳಿದರು. 

Advertisement

ಜಾತ್ಯತೀತತೆ ಎನ್ನುವುದು ಸಿದ್ಧಾಂತವಾಗಿರಬೇಕು ಮತ್ತು ಆಚರಣೆಯಲ್ಲಿರಬೇಕು, ಹೊರತು ಭ್ರಷ್ಟಾಚಾರವನ್ನು ಮುಚ್ಚಿಡುವುದಕ್ಕೆ ಅಲ್ಲ. ಜಾತ್ಯತೀತತೆ ಬಗ್ಗೆ ನನಗೆ ಯಾರೂ ಪಾಠ ಮಾಡಬೇಕಾಗಿಲ್ಲ; ಪರಿಸ್ಥಿತಿ ಏನೆಂಬುದು ನನಗೆ ಚೆನ್ನಾಗಿ ಗೊತ್ತು ಎಂದು ನಿತೀಶ್‌ ತಮ್ಮ 10 ನಿಮಿಷದ ಭಾಷಣದಲ್ಲಿ ಕಟುವಾಗಿ ಹೇಳಿದರು. 

ಮುಖ್ಯಮಂತ್ರಿ ಅವರಿಂದ ಸದನದಲ್ಲಿ 131 – 108 ಮತಗಳ ಅಂತರದಲ್ಲಿ ವಿಶ್ವಾಸವನ್ನು ಗೆದ್ದು ರಾಜ್ಯದಲ್ಲಿ ಹೊಸ ಮೈತ್ರಿ ಕೂಟ ಸರಕಾರವನ್ನು (ಎನ್‌ಡಿಎ-ಜೆಡಿಯು) ಸ್ಥಾಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next