Advertisement

Mandarthi: ಜೂ.18 ರಂದು ಮಳೆಗಾಲದ ಯಕ್ಷಗಾನ ಸೇವೆ ಆಟಕ್ಕೆ ಚಾಲನೆ

10:48 PM Jun 16, 2024 | Team Udayavani |

ಬ್ರಹ್ಮಾವರ: ಯಕ್ಷಗಾನ ಪ್ರಿಯೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರರೀ ದೇವಸ್ಥಾನದಲ್ಲಿ 7ನೇ ವರ್ಷದ ಮಳೆಗಾಲದ ಸೇವೆ ಆಟ ಜೂ. 18ರಿಂದ ಜರಗಲಿದೆ.

Advertisement

ಸಂಪ್ರದಾಯದಂತೆ ಬೆಳಗ್ಗೆ ಬಾರಾಳಿ ಶ್ರೀ ಗಣಪತಿ ದೇವಾಲಯದಲ್ಲಿ ಗಣಹೋಮವಾಗಿ ಅನಂತರ ಶ್ರೀ ದುರ್ಗಾಪರಮೇಶ್ವರರೀ ದೇಗುಲದಲ್ಲಿ ಗಣಹೋಮ, ಮಹಾಪೂಜೆ ಅನಂತರ ತಾಳ, ಗೆಜ್ಜೆ ನೀಡಿ ಸೇವೆಯಾಟಕ್ಕೆ ಚಾಲನೆ ನೀಡಲಾಗುವುದು.

ದೇಗುಲದ ದುರ್ಗಾಪರಮೇಶ್ವರರೀ ಕಲ್ಯಾಣ ಮಂದಿರದಲ್ಲಿ ದಿನಂಪ್ರತಿ ಸಂಜೆ 7ರಿಂದ ರಾತ್ರಿ 1ರ ತನಕ ಪ್ರದರ್ಶನ ನಡೆಯಲಿದೆ.

ನವೆಂಬರ್‌ 5ರ ತನಕ ನಡೆಯಲಿದ್ದು, ಸುಮಾರು 145 ದಿನಗಳ ಕಾಲ ದಿನಕ್ಕೆ ಎರಡು ಸೇವೆಯಾಟದಂತೆ ಒಟ್ಟು 290 ಸೇವೆ ಪೂರ್ಣಗೊಳ್ಳಲಿದೆ ಎಂದು ಅಧ್ಯಕ್ಷ ಎಚ್‌. ಧನಂಜಯ ಶೆಟ್ಟಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next