Advertisement

ಮಂಡಲದೊಳಗೆ ಶರ್ಮಿಳಾ ಮಾಂಡ್ರೆ

02:17 PM Feb 22, 2023 | Team Udayavani |

ಕಳೆದ ವರ್ಷ “ಗಾಳಿಪಟ-2′ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದ ನಟಿ ಶರ್ಮಿಳಾ ಮಾಂಡ್ರೆ, ಈ ಬಾರಿ ಸೈನ್ಸ್‌ ಫಿಕ್ಷನ್‌ ಸಿನಿಮಾವೊಂದರ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.

Advertisement

ಹೌದು, ಶರ್ಮಿಳಾ ಮಾಂಡ್ರೆ ಈಗ “ಮಂಡಲ’ ಎಂಬ ಸೈನ್ಸ್‌ ಫಿಕ್ಷನ್‌ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಇದೇ ಮಾರ್ಚ್‌ 10ಕ್ಕೆ ತೆರೆಗೆ ಬರುತ್ತಿದೆ.

ಇತ್ತೀಚೆಗಷ್ಟೇ “ಮಂಡಲ’ ಸಿನಿಮಾದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಶರ್ಮಿಳಾ ಮಾಂಡ್ರೆ ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಮೂಲತಃ ಸಾಫ್ಟ್ವೇರ್‌ ಉದ್ಯೋಗಿಯಾದ್ದು, ಆ ನಂತರ ಪೂರ್ಣ ಪ್ರಮಾಣದಲ್ಲಿ ಸಿನಿಮಾರಂಗದಲ್ಲಿ ತೊಡಗಿಸಿಕೊಂಡ ಅಜಯ್‌ ಸರ್ಪೇಷ್ಕರ್‌ “ಮಂಡಲ’ ಸಿನಿಮಾಕ್ಕೆ ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ.

“ಮಂಡಲ’ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ ಅವರೊಂದಿಗೆ ಹಿರಿಯ ನಟ ಅನಂತ ನಾಗ್‌, ಪ್ರಕಾಶ್‌ ಬೆಳವಾಡಿ, ಸಂಯುಕ್ತ ಹೊರನಾಡು, ಕಿರಣ್‌ ಶ್ರೀನಿವಾಸ ಇತರ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

ಉಳಿದಂತೆ ಸುಧಾ ಬೆಳವಾಡಿ, ನೀನಾಸಂ ಅಶ್ವಥ್‌, ಮನ್‌ದೀಪ್‌ ರಾಯ್, ಕಿರಣ್‌ ನಾಯಕ್‌, ಸಮನ್ವಿತಾ ಶೆಟ್ಟಿ, ನರೇಶ್‌ ನರಸಿಂಹನ್‌ ಮೊದಲಾದ ಕಲಾವಿದರ ಬಳಗ ಚಿತ್ರದಲ್ಲಿದೆ.

ಅಂದಹಾಗೆ, “2018ರಲ್ಲೇ “ಮಂಡಲ’ ಸಿನಿಮಾದ ಚಿತ್ರೀಕರಣ ಮುಗಿದಿತ್ತು. ಸೈನ್ಸ್‌ ಫಿಕ್ಷನ್‌ ಸಿನಿಮಾವಾದ್ದರಿಂದ ವಿಶ್ಯುವಲ್‌ ಎಫೆಕ್ಟ್‌ನಂತಹ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯಿತು. ಅದಾದ ನಂತರ ಎದುರಾದ ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಕೆಲಕಾಲ ಸಿನಿಮಾದ ಕೆಲಸಗಳಿಗೆ ಬ್ರೇಕ್‌ ಬಿದ್ದಿತ್ತು. ಇದೀಗ ಸಿನಿಮಾದ ಸಂಪೂರ್ಣ ಕೆಲಸ ಮುಗಿದಿದ್ದು, ಮಾರ್ಚ್‌ 10ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಇದೊಂದು ಸೈನ್ಸ್‌ ಫಿಕ್ಷನ್‌ ಕಥಾಹಂದರದ ಸಿನಿಮಾ. ಜೊತೆಗೆ ಫ್ಯಾಮಿಲಿ ಡ್ರಾಮಾ ಕೂಡ ಸಿನಿಮಾದಲ್ಲಿದೆ’ ಎಂಬುದು ಚಿತ್ರದ ನಿರ್ದೇಶಕ ಅಜಯ್‌ ಸರ್ಪೇಷ್ಕರ್‌ ಮಾತು.

ಒಟ್ಟಾರೆ ಹೊಸಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ಶರ್ಮಿಳಾ ಪಾತ್ರ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ಮಾರ್ಚ್‌ ವೇಳೆಗೆ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next