Advertisement

ಐಪಿಎಲ್ ತಂಡ ಖರೀದಿಸಲು ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್ ಮಾಲಕರು

03:25 PM Oct 21, 2021 | Team Udayavani |

ಮುಂಬೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೂಟವನ್ನು ಯಶಸ್ವಿಯಾಗಿ ಮುಗಿಸಿದ ಖುಷಿಯಲ್ಲಿರುವ ಬಿಸಿಸಿಐ ಮುಂದಿನ ಆವೃತ್ತಿಗೆ ಸಿದ್ದತೆ ನಡೆಸುತ್ತಿದೆ. ಮುಂದಿನ ಆವೃತ್ತಿಗೆ ಮತ್ತೆರಡು ತಂಡಗಳನ್ನು ಸೇರ್ಪಡೆ ಮಾಡಲು ಬಿಸಿಸಿಐ ಮುಂದಾಗಿದೆ.

Advertisement

ಫುಟ್ ಬಾಲ್ ಕ್ರೀಡೆಯ ಪ್ರಸಿದ್ದ ಫ್ರಾಂಚೈಸಿ ಮ್ಯಾಂಚೆಸ್ಟರ್ ಯುನೈಟೆಡ್ ನ ಮಾಲಕರು ಇದೀಗ ಐಪಿಎಲ್ ತಂಡವನ್ನು ಖರೀದಿಸಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.

ಇಂಗ್ಲೀಷ್ ಪ್ರೀಮಿಯರ್ ಲೀಗ್ ನ ಪ್ರಸಿದ್ದ ತಂಡವಾದ ಮ್ಯಾಂಚೆಸ್ಟರ್ ಯುನೈಟೆಡ್ ನ ಮಾಲಕತ್ವವನ್ನು ಗ್ಲಾಜರ್ ಕುಟುಂಬ ಹೊಂದಿದೆ. ಸದ್ಯ ಎರಡು ಹೊಸ ತಂಡಗಳಿಗಾಗಿ ಬಿಸಿಸಿಐ ಟೆಂಡರ್ ಆಹ್ವಾನಿಸಿದ್ದು, ಗ್ಲಾಜರ್ ಕುಟುಂಬ ಈ ಬಗ್ಗೆ ಆಸಕ್ತಿ ಹೊಂದಿದೆ ಎನ್ನಲಾಗಿದೆ.

ಅಕ್ಟೋಬರ್ ಕೊನೆಯ ವಾರದೊಳಗೆ ಬಿಡ್ ಅರ್ಜಿ ಸಲ್ಲಿಸಲು ಬಿಸಿಸಿಐ ಆಹ್ವಾನ ನೀಡಿದೆ. ಐಪಿಎಲ್‌ನಲ್ಲಿ ಹೊಸ ಫ್ರಾಂಚೈಸಿಯ ಖರೀದಿಗೆ ಸಾಕಷ್ಟು ಕಠಿಣ ನಿಯಮಗಳಿದೆ. ಹೊಸ ತಂಡಗಳಿಗಾಗಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವ ಬಿಡ್ಡರ್‌ಗಳು 3000 ಕೋಟಿಯಷ್ಟು ವ್ಯವಹಾರವನ್ನು ಹೊಂದಿರಬೇಕು. ಅಥವಾ 2500 ಕೋಟಿಗೂ ಅಧಿಕ ಅಥವಾ ವೈಯಕ್ತಕ ಮೌಲ್ಯ 2500 ಕೋಟಿಯಷ್ಟಿರಬೇಕು.

ಇದನ್ನೂ ಓದಿ:ಟಿಬೇಟಿಯನ್ನ ರ ಕ್ಯಾಂಪ್‌ಗೆ ನುಗ್ಗಿ ದಾಂಧಲೆ ನಡೆಸಿದ ಸಲಗ!

Advertisement

ಈ ಬಿಡ್ಡಿಂಗ್‌ಗಾಗಿ ಐಟಿಟಿ ಪಡೆದುಕೊಂಡು ವಿದೇಶಿ ಸಂಸ್ಥೆಗಳು ಕೂಡ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಆದರೆ ವಿದೇಶಿ ಸಂಸ್ಥೆಗಳು ಈ ಬಿಡ್ಡಿಂಗ್‌ನಲ್ಲಿ ಗೆದ್ದರೆ ಆಗ ಭಾರತದಲ್ಲಿ ಹೊಸ ಕಂಪನಿಯನ್ನು ಸ್ಥಾಪಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

“ವಿದೇಶಿ ಹೂಡಿಕೆದಾರರು ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ತಾಂತ್ರಿಕವಾಗಿ ಅವಕಾಶವಿದೆ. ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಲೀಕರು ಈ ಬಿಡ್ಡಿಂಗ್‌ನಲ್ಲಿ ಬಂದು ಪಾಳ್ಗೊಳ್ಳುತ್ತಾರೆಯೇ ಎಂಬು ನಮಗೆ ನಿಜಕ್ಕೂ ತಿಳಿದಿಲ್ಲ. ಆದರೆ ಈವರೆಗೆ ತಿಳಿದುಬಂದ ಮಾಹಿತಿಯಂತೆ ಈ ಬಗ್ಗೆ ಅವರು ಆಸಕ್ತಿಯನ್ನು ಹೊಂದಿದ್ದಾರೆ” ಎಂದು ಈ ಬೆಳವಣಿಯ ಬಗ್ಗೆ ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next