ರಾಮನಗರ: ನರೇಗಾ ಯೋಜನೆ ಗ್ರಾಮಗಳ ಅಭಿವೃದ್ಧಿಗೆ ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಮಂಚನಾಯಕನ ಹಳ್ಳಿ ಗ್ರಾಮ ಪಂಚಾಯಿತಿ ಕಲ್ಯಾಣಿ ನಿರ್ಮಿಸಿ ನಿರೂಪಿಸಿದೆ ಎಂದು ಮಾಗಡಿ ಶಾಸಕ ಎ. ಮಂಜುನಾಥ್ ಹೇಳಿದರು. ಬಿಡದಿ ಹೋಬಳಿಯ ತಾಳಕುಪ್ಪೆ ಗ್ರಾಮದ ಪಾರ್ವತಿ ದೇವಿ ದೇವಾಲಯದ ಬಳಿ ಪಂಚಾಯಿತಿಯಿಂದ ನಿರ್ಮಿಸಲಾಗಿರುವ ಕಲ್ಯಾಣಿಯನ್ನು ಸೋಮವಾರ ಲೋಕಾ ರ್ಪಣೆಗೊಳಿಸಿ ಮಾತನಾಡಿದರು.
ನರೇಗಾ ಯೋಜನೆಯಡಿಯಲ್ಲಿ ಜಿಲ್ಲೆಗೆ ಮಾದರಿಯಾಗುವ ಕಲ್ಯಾಣಿಯನ್ನು ಮಂಚನಾಯ್ಕನಹಳ್ಳಿ ಗ್ರಾಪಂ ನಿರ್ಮಿಸಿದೆ. ನರೇಗಾ ಯೋಜನೆ ಸದ್ಬಳಕೆಗೆ ಇದೊಂದು ಉತ್ತಮ ನಿದರ್ಶನವಾಗಿದೆ. ಈ ಯೋಜನೆಯಿಂದ ಸುಮಾರು 20 ಲಕ್ಷ ರೂ. ಮತ್ತು ಗ್ರಾಪಂ ನಿಧಿಯಿಂದ 5 ಲಕ್ಷ ರೂ. ವೆಚ್ಚ ಮಾಡಿಆಕರ್ಷಣೀಯವಾಗಿ ಕಲ್ಯಾಣಿ ನಿರ್ಮಿಸ ಲಾಗಿದೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲ್ಯಾಣಿಯಲ್ಲಿ ನೀರು ಸದಾ ಇರಲು ಕೊಳವೆಬಾವಿ ಅಗತ್ಯವಿದ್ದು,
ಇದಕ್ಕೆಂದೇ ಪ್ರತ್ಯೇಕ ಕೊಳವೆ ಬಾವಿ ಕೊರೆಸುವ ಉದ್ದೇಶವಿದೆ. ಇದರೊಟ್ಟಿಗೆ ಉದ್ಯಾನವನ ನಿರ್ಮಾಣ, ಹಾಕುವುದು ಹಾಗೂ ಮತ್ತಿತರ ಅಭಿವೃದ್ಧಿಗೆ ಇನ್ನೂ 5 ಲಕ್ಷ ರೂ. ಅಗತ್ಯವಿದೆ. ಪುರಾ ತನ ಕಲ್ಯಾ ಣಿ ಗಳೂ ಅಭಿ ವೃದ್ಧಿಯಾಗ ಬೇಕು ಎಂದು ಆಶಿಸಿದರು. ಪಾರ್ವತಿ ದೇವಿ ದೇವಾಲಯಕ್ಕೆ ಸೇರಿದ 12 ಎಕರೆ ಜಾಗವಿದೆ. ಅಲ್ಲಿ ಔಷಧ ಗಿಡ ನೆಡಲಾಗಿದೆ. ಈ ಜಾಗ ಅಭಿವೃದ್ಧಿಪಡಿಸ ಬೇಕಿದ್ದು, ಹೆಚ್ಚಿನ ಹಣಕಾಸಿನ ಸಹಕಾರ ನೀಡಬೇಕು ಎಂದು ಜಿಪಂ ಸಿಇಒ ಇಕ್ರಂ ಅವರಲ್ಲಿ ಶಾಸಕರು ಮನವಿ ಮಾಡಿದರು.
ಮಂಚನಾಯನಕಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಪ್ರಭಾ ಆನಂದ್ ಮಾತನಾಡಿ, ನಮ್ಮ ಗ್ರಾಪಂನ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿಯೇ ಒಂದು ಮಾದರಿಯಾದ ಕಲ್ಯಾಣಿ ನಿರ್ಮಿಸ ಲಾಗಿದೆ. ಈ ಯೋಜನೆ ಸಾಕಾರಗೊಳ್ಳಲು ಸಹಕಾರ ನೀಡಿದ ಗ್ರಾಪಂ ಸದಸ್ಯ ಮೂಡಲಗಿರಿಯಪ್ಪ ಮತ್ತಿತರರಿಗೆ ಅವರು ಇದೇ ವೇಳೆ ಧನ್ಯವಾದ ತಿಳಿಸಿದರು. ಬೈರಮಂಗಲ ಜಿಪಂ ಸದಸ್ಯ ಮಂಜುನಾಥ್ ಮಾತನಾಡಿದರು.
ಜಿಪಂ ಸಿಇಒ ಇಕ್ರಂ, ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಗ್ರಾಪಂ ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಪಂ ಅಧ್ಯಕ್ಷ ಬಸಪ್ಪ, ಬಿಡದಿ ರೈತರ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ನರಸಿಂಹ ಮೂರ್ತಿ, ಮುಖಂಡರಾದ ವೀರಭದ್ರಣ್ಣ, ಶೇಷಪ್ಪ, ಸೋಮೇಗೌಡ, ಬಾಷ್ ಪ್ರತಿಷ್ಠಾನದ ಡಾ.ಪುಂಡಲೀಕ ಕಾಮತ್ ಸೇರಿದಂತೆ ಮತ್ತಿತರರು ಹಾಜರಿದ್ದರು.