Advertisement
ತಾಲೂಕಿನ ಮಾಡಬಾಳ್ ಹೋಬಳಿ ಹಂಚೀಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮಂಚನಬೆಲೆ ಜಲಾಶಯವಿದ್ದು, ಕಳೆದ ಬಾರಿ ಸುರಿದ ಬಾರಿ ಮಳೆಗೆ ಜಲಾಶಯದಿಂದ ಹೆಚ್ಚುವರಿ ನೀರು ಹರಿದ ಪರಿಣಾಮ ಡಾಂಬರೀಕರಣ ಗೊಂಡಿ ದ್ದ ಜಲಾಶಯದ ಹಿಂಭಾಗದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಇದರಿಂದ ರಸ್ತೆ ಸಂಚಾರವೇ ಕಡಿದು ಹೋಗಿತ್ತು. ಕಳೆದ ವರ್ಷ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಶಾಸಕರಾಗಿದ್ದ ಎ.ಮಂಜುನಾಥ್, ಮಾಜಿ ಶಾಸಕರಾಗಿದ್ದ ಎಚ್. ಸಿ. ಬಾಲಕೃಷ್ಣ ಸಹ ಭೇಟಿ ನೀಡಿ ತಾತ್ಕಾಲಿಕ ರಸ್ತೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳೆ ಚರ್ಚಿಸಿದ್ದರು. ಅದರಂತೆ ತಾತ್ಕಾಲಿಕ ರಸ್ತೆ ಆಗಿದ್ದು, ಇತ್ತೀಚಗೆ ಸುರಿಯುತ್ತಿರುವ ಮಳೆಗೆ ಮಣ್ಣಿನಿಂದ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಸಹ ಕೊಚ್ಚಿ ಹೋಗಿದೆ. ಇದರಿಂದ ಈ ಅಪಾಯದ ಸೇತುವೆ ಮೇಲೆ ಸಂಚರಿಸುವುದು ಭಯದ ವಾತಾವರಣ ನಿರ್ಮಾಣಗೊಂಡಿದೆ.
Related Articles
Advertisement
ಶಾಸಕರಿಗೆ ಸೇತುವೆ ಸವಾಲು: ಶಾಸಕ ಎಚ್ .ಸಿ. ಬಾಲಕೃಷ್ಣಗೆ ಮಂಚನಬೆಲೆ ಹಿಂಭಾ ಗದ ಸೇತುವೆ ಸವಾಲಾಗಿದ್ದು, ಶೀಘ್ರದಲ್ಲಿಯೇ ಶಾಶ್ವತ ಸೇತುವೆಗೆ ಅಗತ್ಯ ಕ್ರಮ ಕೈಗೊಳ್ಳುವವರೇ ಕಾದು ನೀಡಬೇಕಿದೆ.
ಸಂಪರ್ಕ ಕಡಿತ: ಮಂಚನಬೆಲೆ ಜಲಾಶಯದ ಸಮೀಪದಲ್ಲೇ ಇರುವ ಸೇತುವೆ ಈಗ ಕುಸಿದಿರುವುದರಿಂದ ಸಂಪರ್ಕ ಕಡಿತವಾಗಿದ್ದು, ಮಕ್ಕಳು ಶಾಲಾ, ಕಾಲೇಜಿಗೆ ಹಾಗೂ ರೈತರು ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಸಾಕಷ್ಟು ಸಮಸ್ಯೆಯಾಗಿದೆ. 7 ಕಿ.ಮೀ. ದೂರ ಬಳಸಿಕೊಂಡು ಮಂಚನಬೆಲೆ ಮತ್ತು ಬೆಂಗ ಳೂ ರಿಗೆ ತಲುಪುತ್ತಿದ್ದಾರೆ. ಕೂಡಲೇ ಕಾವೇರಿ ನೀರಾವರಿ ನಿಗಮದ ಜಲಾಶಯದ ನೀರು ಕಡಿಮೆಯಾಗುತ್ತಿದ್ದಂತೆ ಶಾಶ್ವತವಾಗಿ ಸೇತುವೆ ನಿರ್ಮಾಣ ಮಾಡಬೇಕೆಂದು ಮಂಚನಬೆಲೆ ಗ್ರಾಮಸ್ಥರು ಮಾಜಿ ಸಿಎಂ ಅವರಲ್ಲಿ ಒತ್ತಾಯಿ ಸಿದರೂ ಇಲ್ಲಿಯವರೆಗೂ ಶಾಶ್ವತವಾದ ಸೇತು ವೆ ರಸ್ತೆ ಆಗಿಲ್ಲ ಎಂದು ದೂರಿದ್ದಾರೆ.
ಮಂಚನಬೆಲೆ ಹಿಂಭಾಗದ ಕಳೆದ ವರ್ಷ ಮುರಿದು ಬಿದ್ದಿದ್ದು, ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತವಾದ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ● ವೆಂಕಟೇಗೌಡ, ಕಾವೇರಿ ನೀರಾವರಿ ನಿಗಮ ಎಇಇ
ಪ್ರವಾಸೋಧ್ಯಮ ಮತ್ತು ಕಾವೇರಿ ನೀರಾವರಿ ಇಲಾಖೆ ಹಾಗೂ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಬಂಧಪಟ್ಟ ಸಚಿವರಿಂದ ಅನುದಾನ ಮಂಜೂರಾತಿ ಮಾಡಿಸುವ ಮೂಲಕ ಶೀಘ್ರದಲ್ಲೇ ಶಾಶ್ವತ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ● ಎಚ್.ಸಿ.ಬಾಲಕೃಷ್ಣ, ಶಾಸಕ
– ತಿರುಮಲೆ ಶ್ರೀನಿವಾಸ್