Advertisement
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲವಿಕಾಸ ಅಕಾಡೆಮಿ ಜಿಲ್ಲಾ ಕಾರ್ಯಾನುಧಿಷ್ಠಾನ ಸಮಿತಿ, ಡಾ| ಶಿವರಾಮ ಕಾರಂತ ಬಾಲವನ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಇತರ ಇಲಾಖೆಗಳ ಜಂಟಿ ಆಶ್ರಯದಲ್ಲಿ ಪರ್ಲಡ್ಕ ಬಾಲವನದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಮಕ್ಕಳ ಹಬ್ಬ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತಧಿನಾಡಿ, ಮಕ್ಕಳ ಪ್ರತಿಭೆಗೆ ತಕ್ಕಂತೆ ಅವಕಾಶ ಸೃಷ್ಟಿಸಿಧಿದಾಗ ಅವರ ಪ್ರತಿಭೆ ಉಜ್ವಲವಾಗಿ ಬೆಳವಣಿಗೆ ಹೊಂದುತ್ತದೆ ಎಂದರು.
ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭೆ ಅಧ್ಯಕ್ಷೆ ಜಯಂತಿ ಬಲಾ°ಡು, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನಗರಸಭೆ ಸದಸ್ಯೆ ಜಯಲಕ್ಷ್ಮೀ ಸುರೇಶ್, ಉಪವಿಭಾಗಧಿಕಾರಿ ರಘುನಂದನ್ ಮೂರ್ತಿ, ಪ್ರಭಾರ ತಹಶೀಲ್ದಾರ್ ಗಾರ್ಗಿ ಜೈನ್, ಬಾಲವಿಕಾಸ ಅಕಾಡೆಮಿ ಸದಸ್ಯೆ ಹೇಮಾ, ಜಿಲ್ಲಾ ಮಕ್ಕಳ ಕಲ್ಯಾಣಧಿಕಾರಿ ಉಸ್ಮಾನ್, ಪುತ್ತೂರು ಮಹಾಧಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ನಯನಾ ರೈ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ. ಹೆಗಡೆ ವಂದಿಸಿದರು. ನಿವೃತ್ತ ಉಪನ್ಯಾಸಕ ಪ್ರೊ| ಬಿ.ಜೆ. ಸುವರ್ಣ ನಿರೂಪಿಸಿದರು.
ಶಿಕ್ಷಣಾಧಿಕಾರಿ ವಿರುದ್ಧ ಸಚಿವ, ಶಾಸಕಿ ಗರಂ…!ಜಿಲ್ಲಾಮಟ್ಟದ ಮಕ್ಕಳ ಹಬ್ಬದಲ್ಲಿ ಪಾಲ್ಗೊಳ್ಳದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ವಿರುದ್ಧ ಗರಂ ಆದ ಸಚಿವ ರೈ, ಇಂತಹ ಅಗತ್ಯ ಕಾರ್ಯಕ್ರಮದಲ್ಲಿ ಅಧಿಕಾರಿಧಿಗಳು ಬಾರದಿರುವುದು ಅವರ ನಿರಾಸಕ್ತಿ ತೋರಿಧಿಸುತ್ತದೆ ಎಂದು ಅಸಮಾಧಾನ ವ್ಯಕ್ತಧಿಪಡಿಸಿದರು. ಬಳಿಕ ಶಾಸಕಿ ಶಕುಂತಳಾ ಟಿ. ಶೆಟ್ಟಿ ತಾಲೂಕು ಮತ್ತು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಗೈರಿನ ಬಗ್ಗೆ ಆಕ್ರೋಶ ವ್ಯಕ್ತಧಿಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಗೈರಿನ ಕುರಿತು ವಿಚಾರಿಸುವಂತೆ ಸಹಾಧಿಯಕ ಕಮಿಷನರ್‌ಗೆ ಸೂಚಿಸಿದ ಶಾಸಕಿ, ಇಲಾಖಾಧಿಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ನಿರ್ಧರಿಸಬೇಕು ಎಂದು ತನ್ನ ಭಾಷಣಧಿದಲ್ಲಿ ಉಲ್ಲೇಖೀಸಿದರು.