Advertisement
ಬರೀ ಮೆನು ಅಷ್ಟೇ ಅಲ್ಲ, ತಟ್ಟೆಯ ಆಚೆಈಚೆಯೂ ಇಲ್ಲಿ ಕಾಣುವುದು ಬರೀ ಕರಾವಳಿ. ಇಲ್ಲಿ ಆಹಾರ ಸವಿಯುವ ಪ್ರತಿಯೊಬ್ಬರಿಗೂ, ಸಮುದ್ರದ ದಂಡೆಯ ಮೇಲೆ ಊಟಕ್ಕೆ ಕುಳಿತಂಥ ಸುಖ ಸಿಗಬೇಕು ಎನ್ನುವುದು, ಮಾಲೀಕ ಸುರೇಂದ್ರ ಪೂಜಾರಿ ಅವರ ಸದಾಶಯ. ಊರ ಜನಜೀವನ, ಅದರ ನೆನಪುಗಳನ್ನು ಕಟ್ಟಿಕೊಡುತ್ತಲೇ, ಊರಿನ ರುಚಿಯನ್ನೂ ಭರ್ಜರಿಯಾಗಿಯೇ ಉಣಿಸುವ ಈ ವಿಭಿನ್ನ ಪ್ರಯತ್ನಕ್ಕೆ ಗ್ರಾಹಕರೂ ಮಾರುಹೋಗಿದ್ದಾರೆ.
ಬಂಗುಡೆ ಸಾರಿನ ಪರಿಮಳ, ಭೂತಾಯಿ ಫ್ರೈ ರುಚಿಯೇ ಕರಾವಳಿಗರ ಹೋಟೆಲ್‌ನ ಸಿಗ್ನೇಚರ್. ಆ ನಂಬಿಕೆಗೆ ಇಲ್ಲಂತೂ ಮೋಸ ಇಲ್ಲ. ಪಾಂಫ್ರೆಟ್, ಕಾನೆ, ಅಂಜಲ್, ಕೊಕ್ಕರಾ, ಕಲ್ಲೂರ, ಪಯ್ನಾ, ನಂಗ್ ಅಂಜಲ್, ಸಿಲ್ಲವರ್ ಮೀನುಗಳ ರುಚಿಗೆ ಇಲ್ಲಿ ಸಂಪೂರ್ಣ ಅಂಕ. ಏಡಿ ಮಸಾಲ, ಕ್ರಾಬ್ ಸೂಪ್ ಅಷ್ಟೇ ಸೂಪರು. ಪ್ರಾನ್ ಕೊಲ್ಹಾಪುರಿ, ಪ್ರಾನ್ ಜಿಂಜರ್ ಮಸಾಲಗಳ ಆಸ್ವಾದವಂತೂ, ಮನೆಗೆ ಹೋದ ಮೇಲೂ ಕಾಡುವಂಥದ್ದು. ಇನ್ನು ಬಿರಿಯಾನಿಪ್ರಿಯರು ಇಲ್ಲಿಗೆ ಬಂದು ಮುಖ ಬಾಡಿಸಿಕೊಳ್ಳುವ ಅಗತ್ಯವಿಲ್ಲ, ಧಮ್‌ಗಟ್ಟಿದ ಫಿಷ್ ಬಿರಿಯಾನಿ ನಿಮಗಾಗಿಯೇ ಕಾದು ಕೂತಿರುತ್ತದೆ. ಕರಾವಳಿಯನ್ನು ಹೀಗೆಲ್ಲ ನೆನಪಿಸುವ ಈ ಹೋಟೆಲ್‌ನಲ್ಲಿ ಬಿಸಿಬಿಸಿ ನೀರ್‌ದೋಸೆ, ಕೋರಿ ರೊಟ್ಟಿ ಇಲ್ಲದೇ ಇದ್ದೀತೇ? ಇವೆಲ್ಲದರ ಜೊತೆಗೆ ಚೈನೀಸ್ ಖಾದ್ಯಗಳು, ತಂದೂರ್ ವೆರೈಟಿಗಳು, ಮಟನ್ ಖಾದ್ಯಗಳೂ ತಮ್ಮದೇ ಶೈಲಿಯಲ್ಲಿ ಗ್ರಾಹಕರಿಗೆ ಇಷ್ಟವಾಗುತ್ತವೆ.
Related Articles
“ಊರಿನ ಖಾದ್ಯಗಳನ್ನು ಊರಿನವರು ಮಾಡಿದರೇನೇ ಚೆಂದ’ ಎನ್ನುತ್ತಾರೆ, ಸುರೇಂದ್ರ ಪೂಜಾರಿ ಅವರು. ಅದಕ್ಕಾಗಿ ಇವರ ಹೋಟೆಲ್‌ನ ಕಿಚನ್‌ನಲ್ಲಿ ಕರಾವಳಿಯ ನುರಿತ ಬಾಣಸಿಗರೇ ತುಂಬಿಕೊಂಡಿದ್ದಾರೆ. ಅವರು ಹಾಕುವ ಹದಕ್ಕೂ, ಊರಿನ ಮನೆಗಳಲ್ಲಿ ಸಿದ್ಧವಾದ ಅಡುಗೆಗೂ ಎಳ್ಳಷ್ಟೂ ಆಚೆಈಚೆ ಇರೋದಿಲ್ಲ. ಪರಿಶುದ್ಧತೆಗೆ ಆದ್ಯತೆ ಕೊಟ್ಟು, ಇಲ್ಲಿ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ.
Advertisement
ಹಳೇ ಮೀನಲ್ಲ, ತಾಜಾ ಮೀನುಬೆಂಗಳೂರಿನ ಸಾಕಷ್ಟು ಹೋಟೆಲ್‌ಗಳಲ್ಲಿ ಫ್ರೆಶ್ ಮೀನು ಖಾದ್ಯವೇ ಇರೋದಿಲ್ಲ. ಆದರೆ, ಇಲ್ಲಿ ಹಾಗಲ್ಲ. ಮಲ್ಪೆ, ಭಟ್ಕಳದಿಂದ ತರಿಸಿಕೊಂಡ ತಾಜಾ ಮೀನುಗಳು ಆಗಷ್ಟೇ ಅಡುಗೆ ಮನೆಗೆ ಸೇರಿರುತ್ತವೆ. ಅತ್ಯಂತ ಕ್ರಮಬದ್ಧವಾಗಿ ಅದನ್ನು ಸರಿಮಾಡಿ, ಗ್ರಾಹಕರಿಗೆ ಉಣಬಡಿಸಿದರೇನೇ ಮಾಲೀಕರಿಗೆ ಸಮಾಧಾನ. ಅದಕ್ಕಾಗಿಯೇ, ಕೇವಲ ಕರಾವಳಿಗರು ಮಾತ್ರವಲ್ಲ, ಬೆಂಗಳೂರಿಗರೂ ಸೇರಿದಂತೆ ಇತರ ಪ್ರಾದೇಶಿಕ ಮೂಲದವರೂ, ಈ ಹೋಟೆಲ್ ಅನ್ನು ಎರಡನೇ ಮನೆಯಂತೆಯೇ ನೋಡುತ್ತಾರೆ. ರುಚಿಯಲ್ಲೂ, ಶುಚಿಯಲ್ಲೂ ತನ್ನದೇ ಬ್ರ್ಯಾಂಡ್ ಅನ್ನು ಸೃಷ್ಟಿಸಿಕೊಂಡ, ಈ ಹೋಟೆಲ್‌ಗೆ ಮೀನುಮೋಹಿಗಳು ಧಾರಾಳ ಭೇಟಿ ನೀಡಬಹುದು. ಅಡುಗೆ ತಯಾರಿಯಲ್ಲಿ ಊರಿನ ಸಂಪ್ರದಾಯ ಕಾಯ್ದುಕೊಂಡು, ರುಚಿಯಲ್ಲೂ- ಶುಚಿಯಲ್ಲೂ ನಮ್ಮದೇ ಒಂದು ಬ್ರ್ಯಾಂಡ್ ಸೃಷ್ಟಿಸಿದ್ದೇವೆ. ಹಾಗಾಗಿ, ಗ್ರಾಹಕರು ಮಾನಸ ಫಿಶ್‌ಲ್ಯಾಂಡ್ ಅನ್ನು ಹುಡುಕಿಕೊಂಡು ಬರುತ್ತಾರೆ.
– ಸುರೇಂದ್ರ ಪೂಜಾರಿ, ಮಾಲೀಕ ವಿಳಾಸ
# 03, 7ನೇ ಮೇನ್, 80 ಅಡಿ ರಸ್ತೆ, ಎಚ್‌ಆರ್‌ಬಿಆರ್ ಲೇಔಟ್, ಬೆಂಗಳೂರು
ದೂ.ಸಂ.: 7090913399 ಎಂಥ ರುಚಿ ಮಾರಾಯ್ರೇ …
ಅಂಜಲ್ ವೆರೈಟಿ, ಕ್ರಾಬ್ ಮಸಾಲ, ಕ್ರಾಬ್ ಸೂಪ್, ಫಿಷ್ ಬಿರಿಯಾನಿ, ಪಾಂಫ್ರೆಟ್- ಬಂಗುಡೆ ಕರ್ರಿ – ಬಳಕೂರು ವಿ.ಎಸ್. ನಾಯಕ್