Advertisement

“ಮನರೂಪ’ತೆರೆಗೆ ಸಿದ್ಧ

09:52 AM Aug 28, 2019 | Team Udayavani |

ಈ ಹಿಂದೆ ಮೋಷನ್‌ ಪೋಸ್ಟರ್‌ ಮೂಲಕ ಕುತೂಹಲ ಮೂಡಿಸಿದ್ದ “ಮನರೂಪ’ ಚಿತ್ರತಂಡ, ಇದೀಗ ಮತ್ತೊಂದು ಪೋಸ್ಟರ್‌ ಬಿಡುಗಡೆ ಮಾಡಿದೆ. ಐವರು ತಮ್ಮನ್ನೇ ತಾವು ಚಿತ್ರಿಸಿಕೊಂಡಂತೆ ಅಥವಾ ಇನ್ಯಾರೋ ಚಿತ್ರಿಸುತ್ತಿರುವಂತೆ ಭಾಸವಾಗುವ ಪೋಸ್ಟರ್‌ ಭಯ, ಆತಂಕ ಮತ್ತು ಕುತೂಹಲದ ಭಾವಗಳನ್ನು ಒಳಗೊಂಡು ಒಂದಷ್ಟು ಗಮನಸೆಳೆಯುವಂತಿದೆ.

Advertisement

ಪೋಸ್ಟರ್‌ನಲ್ಲಿರುವ “ಗುಮ್ಮ ಈಸ್‌ ವಾಚಿಂಗ್‌’ ಎಂಬ ಪದಗಳು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿವೆ. ನಿರ್ದೇಶಕ ಕಿರಣ್‌ ಹೆಗಡೆ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಕಾಡಲ್ಲಿ ಯಾರ ಕಣ್ಣಿಗೂ ಕಾಣದ ಕರಡಿ ಗುಹೆಯನ್ನು ಹುಡುಕಿ ಹೊರಡು ಐವರು ಗೆಳೆಯರಿಗೆ ಎದುರಾಗುವ ಸಮಸ್ಯೆಗಳು ಹೇಗಿರುತ್ತವೆ. ಆ ಸಮಸ್ಯೆಗಳಿಂದ ಅವರು ತಪ್ಪಿಸಿಕೊಂಡು ಹೊರಬರುತ್ತಾರಾ ಎಂಬುದು ಒನ್‌ಲೈನ್‌.

ಚಿತ್ರಕ್ಕೆ ಸರವಣ ಸಂಗೀತ ನೀಡಿದ್ದಾರೆ. ಸೂರಿ ಮತ್ತು ಲೋಕಿ ಚಿತ್ರದ ಸಂಕಲನ ಮಾಡಿದರೆ, ಗೋವಿಂದ್‌ರಾಜ್‌ ಛಾಯಾಗ್ರಹಣ ಮಾಡಿದ್ದಾರೆ. ಧ್ವನಿ ವಿನ್ಯಾಸವನ್ನು ನಾಗರಾಜ್‌ ಹುಲಿವಾನ್‌ ಮತ್ತು ನಾಗೇಶ್‌ ಮಾಡಿದ್ದಾರೆ. ಸಂಭಾಷಣೆಯನ್ನು ಮಹಾಬಲ ಸೀತಾಳಭಾವಿ ಬರೆದಿದ್ದಾರೆ. ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಅಕ್ಟೋಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.ಸಿ.ಎಂ.ಸಿ.ಆರ್‌ ಮೂವೀಸ್‌ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next