Advertisement
ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾದಲ್ಲಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದರು. ತಪಾಸಣ ವಿಭಾಗದಲ್ಲಿ ಬ್ಯಾಗ್ ಪರಿಶೀಲನೆ ವೇಳೆ 32 ಎಂಎಂ ಪಿಸ್ತೂಲ್‌ಗೆ ಬಳಸುವ ಗುಂಡುಗಳು ಪತ್ತೆಯಾಗಿವೆ. ಕೂಡಲೇ ಭದ್ರತಾ ಸಿಬಂದಿ ಸಿಐಎಸ್‌ಎಫ್ ಅಧಿಕಾರಿಗಳಿಗೆ ಮಾಜಿ ಶಾಸಕರನ್ನು ಒಪ್ಪಿಸಿದ್ದು, ಸ್ವಲ್ಪ ಹೊತ್ತು ವಿಚಾರಣೆ ನಡೆಸಲಾಗಿದೆ.
ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, “ತನ್ನಲ್ಲಿ ಪಿಸ್ತೂಲ್ ಮತ್ತು ಗುಂಡು ಬಳಕೆ ಪರವಾನಿಗೆ ಇದೆ. ಕಾಲಾವಕಾಶ ನೀಡಿದರೆ ತಂದು ಕೊಡುವುದಾಗಿ ಮನವಿ ಮಾಡಿದ್ದಾರೆ. ಅಲ್ಲದೆ, ಬ್ಯಾಗ್‌ನಲ್ಲಿ ಜೀವಂತ ಗುಂಡುಗಳು ಇರುವ ಬಗ್ಗೆ ಗಮನಕ್ಕೆ ಬಂದಿರಲಿಲ್ಲ. ಯಾವುದೇ ಉದ್ದೇಶದಿಂದ ಕೊಂಡೊಯ್ಯುತ್ತಿಲ್ಲ’ ಎಂದು ತಿಳಿಸಿದ ಕಾರಣ ಲಿಖೀತ ಹೇಳಿಕೆ ಪಡೆದು ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾಜಿ ಶಾಸಕರು ಪರವಾನಿಗೆ ಪತ್ರ ಸಲ್ಲಿಸಿದ ಬಳಿಕ ಗುಂಡುಗಳನ್ನು ಹಿಂದಿರುಗಿಸಲಾಗುತ್ತದೆ. ಅದುವರೆಗೂ ಅದು ತಮ್ಮ ಬಳಿಯೇ ಇರಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.