ಹಂಗಾಮಿ ಸ್ಪೀಕರ್ ಆಗಿ ಮೇನಕಾ ಗಾಂಧಿ ಆಯ್ಕೆಯಾಗಿದ್ದಾರೆ. ಅವರು ನವ ಸಂಸದರಿಗೆ ಜೂ.6ರಂದುಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ನೂತನ ಸಂಸದರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಸಂಸದರಾಗಿ ಆಯ್ಕೆಯಾಗಿ ರುವ ಲೆಕ್ಕಾಚಾರದಲ್ಲಿ ಯಾರು ಅತ್ಯಂತ ಹಿರಿಯರಾಗಿರುತ್ತಾರೋ ಅವರೇ ಸ್ಪೀಕರ್ ಆಗಿ ಪ್ರಮಾಣವಚನ ಬೋಧಿಸಬೇಕೆಂಬ ಶಿಷ್ಟಾಚಾರವಿರು ವುದರಿಂದ, 8 ಬಾರಿ ಸಂಸದೆಯಾಗಿರುವ ಮನೇಕಾ ಪಾಲಿಗೆ ಈ ಜವಾಬ್ದಾರಿ ಒಲಿದಿದೆ. ಹಲವು ಸರ್ಕಾರಗಳಲ್ಲಿ ಕೇಂದ್ರದ ಸಚಿವರಾಗಿ ಕಾರ್ಯನಿರ್ವಹಿಸಿರುವ ಮನೇಕಾ ಪ್ರಸ್ತುತ ಸುಲ್ತಾನ್ ಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 2014ರಲ್ಲಿ ಮೋದಿ ಮೊದಲ ಬಾರಿಗೆ ಪ್ರಧಾನಿ ಸ್ಥಾನಕ್ಕೇರಿದಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಆಯ್ಕೆಯಾಗಿದ್ದರು. ಸಾಮಾಜಿಕ ಹೋರಾಟ ಗಾರ್ತಿಯಾಗಿ, ಪ್ರಾಣಿ ದಯಾ ಸಂಘದ ನಾಯಕಿಯಾಗಿ ಹೆಸರು ಮಾಡಿದ್ದಾರೆ.
Advertisement