Advertisement

ಡಾ. ಚನ್ನಬಸವ ಪಟ್ಟದ್ದೇವರು ಪ್ರಶಸ್ತಿಗೆ ಮನಗುಂಡಿ ಶ್ರೀ ಆಯ್ಕೆ

10:28 PM Nov 11, 2019 | Lakshmi GovindaRaju |

ಬಸವಕಲ್ಯಾಣ: ವಿಶ್ವ ಬಸವ ಧರ್ಮ ಟ್ರಸ್ಟ್‌ ಅನುಭವ ಮಂಟಪದಿಂದ ಪ್ರತಿವರ್ಷ ನೀಡಲಾಗುವ ಡಾ. ಚನ್ನಬಸವ ಪಟ್ಟದ್ದೇವರು ಪ್ರಶಸ್ತಿಗೆ ಧಾರವಾಡದ ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

Advertisement

ನ.23-24ರಂದು ನಗರದ ಅನುಭವ ಮಂಟಪ ಆವರಣದಲ್ಲಿ ನಡೆಯಲಿರುವ 40ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಪ್ರಶಸ್ತಿ ನೀಡಲಿದ್ದು, ಪ್ರಶಸ್ತಿ 50 ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದೆ. ಹಲವು ವರ್ಷಗಳಿಂದ ಭಾಲ್ಕಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಹಾಗೂ ಶಾಸಕ ಈಶ್ವರ ಖಂಡ್ರೆ ಅವರು ಪ್ರಶಸ್ತಿ ದಾತರರಾಗಿದ್ದಾರೆ ಎಂದರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಗಳ್ಳಿ ಗ್ರಾಮದ ಹಲಗಪ್ಪ ಜಯಮ್ಮನವರ ಪುತ್ರರಾಗಿ ಶ್ರೀ ಗುರುಬಸವ ಮಹಾಮನೆ 1971ರಲ್ಲಿ ಜನಿಸಿದರು. 9 ತಿಂಗಳಿದ್ದಾಗಲೇ ದೃಷ್ಟಿಹೀನರಾದರು. 1990ರಲ್ಲಿ ಎಸ್ಸೆಸ್ಸೆಲ್ಸಿ, 1992ರಲ್ಲಿ ಪಿಯುಸಿ ಪೂರೈಸಿ ಬಸವಾದಿ ಶರಣರ ವಚನ ಸಾಹಿತ್ಯದಿಂದ ಪ್ರಭಾವಿತರಾಗಿ ಚಾಮರಾಸ ಕವಿಯ ಪ್ರಭುಲಿಂಗ ಲೀಲೆ’ಯನ್ನು ಬ್ರೈಲ್‌ಲಿಪಿ ಯಲ್ಲಿ ಬರೆದು ಪ್ರವಚನಗಳ ಮೂಲಕ ಬಸವ ಭಕ್ತರ ಮೆಚ್ಚುಗೆಗೆ ಕಾರಣ ರಾದರು. ಗದಗ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ಧಲಿಂಗ ಸ್ವಾಮಿಗಳು ಇವರಿಗೆ ಆಶ್ರಯದಾತರು.

2005ರಲ್ಲಿ ಕರ್ನಾಟಕದ ಹಿರಿಯ ಮಠಾ ಧೀಶರ ಸಮ್ಮುಖದಲ್ಲಿ ಧಾರವಾಡ ಹತ್ತಿರವಿರುವ ಮನಗುಂಡಿ ಗ್ರಾಮದಲ್ಲಿ ಶ್ರೀಗುರು ಬಸವ ಮಹಾಮನೆ ಸ್ಥಾಪಿಸಿ ಆಧ್ಯಾತ್ಮ ಪ್ರವಚನವನ್ನು ಜನರಿಗೆ ಮುಟ್ಟಿಸುತ್ತಿದ್ದಾರೆ. ಅವರ ಸಮಗ್ರ ಸೇವೆ ಗುರುತಿಸಿ, ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next