Advertisement

ಕಾರ್ಗಿಲ್‌ ಕಥನ ಮನೆ-ಮನ ತಲುಪಲಿ

05:41 PM Feb 17, 2017 | Team Udayavani |

ಕಾರಟಗಿ: ಹದಿನೇಳು ವರ್ಷಗಳ ಹಿಂದೆ ಭಾರತಕ್ಕೆ ದಾಳಿ ಇಟ್ಟ ಪಾಕಿಸ್ತಾನವನ್ನು ಯುದ್ಧರಂಗದಲ್ಲಿ ಹಿಮ್ಮೆಟ್ಟಿಸಿದ ಕಾರ್ಗಿಲ್‌ ಕದನದ ಕಥನ ಪ್ರತಿ ಮನೆ-ಮನಗಳಿಗೂ ತಲುಪಬೇಕು. ಸೈನಿಕರ ನಿಸ್ವಾರ್ಥ ಹೋರಾಟದ ದೇಶದ ಗೆಲುವದು. ದೇಶ ಸೇವೆಗೆ ಪ್ರಾಣ ಬಲಿದಾನಗೈದ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಯುವ ಬ್ರಿಗೇಡ್‌ ವಿಭಾಗೀಯ ಸಂಚಾಲಕ ಕಿರಣಕುಮಾರ ಧಾರವಾಡ ಹೇಳಿದರು. 

Advertisement

ಪಟ್ಟಣದ ಸರಕಾರಿ ಬಾಲಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಂಜೆ ಯುವ ಬ್ರಿ ಗೇಡ್‌ ವತಿಯಿಂದ ಏರ್ಪಡಿಸಲಾಗಿದ್ದ ನನ್ನ ದೇಶ ನನ್ನ ಪ್ರೇಮ, ಯೌವ್ವನ ಇರುವುದು ದೇಹ ಪ್ರೇಮಕ್ಕಲ್ಲ, ದೇಶ ಪ್ರೇಮಕ್ಕೆ ಎನ್ನುವ ವಿನೂತನ ಹಾಗೂ ವೀರಯೋಧರಿಗೆ ಸನ್ಮಾನ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.  

ಪ್ರತಿಯೊಬ್ಬ ಭಾರತೀಯನಿಗೂ ಯೋಧ, ದೇಶದ ಬಗ್ಗೆ ಹೆಮ್ಮೆ-ಗೌರವವಿರಬೇಕು. ಮಕ್ಕಳನ್ನು  ಹಣ ಗಳಿಸುವ ಯಂತ್ರಗಳನ್ನಾಗಿ ರೂಪಿಸದೇ ದೇಶ ಕಾಯುವ ಯೋಧರನ್ನಾಗಿ ರೂಪಿಸಬೇಕು. ಪ್ರತಿ ಕ್ಷಣ ಸುಖವಾಗಿರುತ್ತೇವೆ ಎಂದರೆ ಅದರ ಹಿಂದೆ ವೀರ ಸೈನಿಕರ ಶ್ರಮವಿರುತ್ತದೆ ಎಂದರು. ಹುತಾತ್ಮರಾದ ಸೈನಿಕರನ್ನು ಕೇವಲ ಮಾತಿನಲ್ಲಿ ಹೊಗಳಿದರೆ ಸಾಲದು. ಮಕ್ಕಳು ಸಹ ಅವರಂತೆ ದೇಶ ಕಾಯುವ ವೀರರಾಗಬೇಕೆಂಬ ಮಹತ್ವಾಕಾಂಕ್ಷೆ ಪ್ರತಿಯೊಬ್ಬ ತಂದೆ-ತಾಯಂದಿರಲ್ಲಿ ಮೂಡಬೇಕು.

ಭಾರತೀಯ ಯೋಧರು ವೀರ ಪುರುಷರು. ಎಂತಹ ಕಠಿಣ ಸ್ಥಿತಿಯಲ್ಲೂ ಸಹ ಸ್ವಾರ್ಥವನ್ನು ಲೆಕ್ಕಿಸದೆ ದೇಶಕ್ಕಾಗಿ ಪ್ರಾಣ ಬಿಡುವಂತಹ ವೀರತ್ವವನ್ನು ಹೊಂದುವ ಮೂಲಕ ಇಡೀ ಪ್ರಪಂಚದಲ್ಲಿಯೇ ಮಾದರಿಯಾಗಿದ್ದಾರೆ ಎಂದು ಅವರು ಬಣ್ಣಿಸಿದರು. ಸಾನ್ನಿಧ್ಯ ವಹಿಸಿದ್ದ ಹೆಬ್ಟಾಳದ ಬೃಹನ್‌ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಈ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬನ ಹೃದಯದಲ್ಲೂ ನಾನು ಭಾರತೀಯ ಎನ್ನುವ ಹೆಮ್ಮೆ ಮೂಡಬೇಕು.

ಯೋಧನಾಗಿ ವೀರ ಮರಣವನ್ನಪ್ಪಿದರೆ ಸ್ವರ್ಗ ಸೇರುತ್ತೇವೆ. ಹುಟ್ಟಿದ ಮನುಷ್ಯ ಸಾಯಲೇಬೇಕು. ಈ ಸಾವು ದೇಶಕ್ಕಾಗಿ ಮುಡಿಪಾಗಿಡಬೇಕು. ದೇಹದಲ್ಲಿ ಹರಿಯುವ ಪ್ರತಿಯೊಂದು ರಕ್ತದ ಕಣವೂ ಭಾರತ ನಾಡಿನ ಸೇವೆಗೆ ಸಲ್ಲಬೇಕು ಎಂದು ಸಲಹೆ ನೀಡಿದರು. ನಂತರ ಕಳೆದ ಎರಡು ವರ್ಷದಿಂದ ಯುವ ಬ್ರಿ ಗೇಡ್‌ ನಡೆದು ಬಂದ ದಾರಿಯ ಬಗ್ಗೆ ಕಾರಟಗಿ ಯುವ ಬ್ರಿ ಗೇಡ್‌ ಸಂಚಾಲಕ ಶರಣೇಗೌಡ ಬೂದಗುಂಪಾ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಕಾರ್ಯಕ್ರಮದಲ್ಲಿ ಯೋಧರಿಗೆ ಪಟ್ಟಣದ ಗೋಗಲ್‌ ಗಾರ್ಡನ್‌ ಯುವಕರಿಂದ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಗಜಾನನ ಯುವಕ ಸಂಘದ ಸದಸ್ಯರು ಸಾರ್ವಜನಿಕರಿಗೆ ಹಾಗೂ ವೇದಿಕೆ ಮೇಲಿದ್ದ ಗಣ್ಯರಿಗೆ ಸಸಿ ವಿತರಣೆ ಮಾಡಿದರು. ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಕಾರಟಗಿ ಹಿರೇಮಠದ ಮರುಳಸಿದ್ದಯ್ಯಸ್ವಾಮಿ, ಬಳ್ಳಾರಿಯ ಯುವ ಬ್ರಿ ಗೇಡ್‌ ವಿಭಾಗೀಯ ಸಂಚಾಲಕ ಸಂತೋಷ ಸಾಮ್ರಾಜ್ಯ, ಯುವ ಬ್ರಿ ಗೇಡ್‌ನ‌ ಕೊಪ್ಪಳ ಸಂಪರ್ಕ ಪ್ರಮುಖ ಶಿವಲಿಂಗಪ್ಪ  ಸೇರಿದಂತೆ ಕಾರಟಗಿ ಯುವ ಬ್ರಿ ಗೇಡ್‌ನ‌ ಸದಸ್ಯರು ಇನ್ನಿತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next