Advertisement

Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…

10:07 AM Mar 28, 2024 | Team Udayavani |

ಭೋಪಾಲ್: 80 ವರ್ಷದ ವೃದ್ಧ ಮಹಿಳೆಯೊಬ್ಬರ ಮೇಲೆ ಆಕೆಯ ಮೊಮ್ಮಗ ಹಾಗೂ ಆತನ ಪತ್ನಿ ಸೇರಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಭೋಪಾಲ್‌ನ ಜಹಾಂಗೀರಾಬಾದ್‌ ನಲ್ಲಿ ನಡೆದಿದೆ.

Advertisement

ವೃದ್ಧ ಮಹಿಳೆಗೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದೀಗ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಲ್ಲೆ ನಡೆಸಲು ಸ್ಪಷ್ಟ ಕರಣ ಇನ್ನಷ್ಟೇ ತಿಳಿದುಬರಬೇಕಾಗಿದ್ದು ಬೇರೆ ಬೇರೆ ರೀತಿಯ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ, ಒಂದು ಕಡೆ ಅಜ್ಜಿ ಸರಿಯಾಗಿ ಅಡುಗೆ ಮಾಡಲಿಲ್ಲ ಹಾಗಾಗಿ ಮೊಮ್ಮಗ ಹಾಗು ಆತನ ಪತ್ನಿ ಸೇರಿ ಅಜ್ಜಿಗೆ ಹಲ್ಲೆ ನಡೆಸಿರುವುದಾಗಿ ಹೇಳಿದರೆ ಇನ್ನೊಂದು ಮಾಹಿತಿಯ ಪ್ರಕಾರ ಅಸ್ತಿ ವಿಚಾರದಲ್ಲಿ ಕಳೆದ ಕೆಲ ದಿನಗಳಿಂದ ಅಜ್ಜಿ ಮೊಮ್ಮಗನ ನಡುವೆ ಜಗಳಗಳು ನಡೆಯುತ್ತಿತ್ತು ಇದೆ ವಿಚಾರದಲ್ಲಿ ಅಜ್ಜಿಗೆ ಮೊಮ್ಮಗ ಮತ್ತು ಆತನ ಪತ್ನಿ ಸೇರಿ ಮನಬಂದಂತೆ ಥಳಿಸಿದ್ದಾರೆ ಎಂದು ಹೇಳಲಾಗಿದೆ.

ಅಜ್ಜಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ನೆರೆಮನೆಯಲ್ಲಿ ಗಲಾಟೆ ಕೇಳುತ್ತಿದೆ ಎಂದು ಪಕ್ಕದ ಮನೆಯವರು ಮನೆಯ ಬಳಿ ತೆರಳಿದ ವೇಳೆ ಅಜ್ಜಿ ಬೊಬ್ಬೆ ಹಾಕುವುದು ಕೇಳಿದೆ ಈ ವೇಳೆ ಕಿಟಕಿಯ ಮೂಲಕ ಹಲ್ಲೆ ನಡೆಸುವ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹಲ್ಲೆ ನಡೆಸಿದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಹಲ್ಲೆ ನಡೆಸಲು ಕಾರಣ ಏನೆಂಬುದನ್ನು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಪೊಲೀಸರ ಲಾಠಿ ರುಚಿ ಬೀಳುತ್ತಿದ್ದಂತೆ ತಮ್ಮ ತಪ್ಪನ್ನು ಒಪ್ಪಿಕೊಂಡ ದಂಪತಿ ಇನ್ನು ಮುಂದೆ ಹಲ್ಲೆ ನಡೆಸುವುದಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ.

Advertisement

ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next