ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಅಯೋಧ್ಯೆಯಲ್ಲಿ ಒಂದು ವೇಳೆ ರಾಮ ಮಂದಿರ ನಿರ್ಮಾಣ ಮಾಡುವುದಾದರೆ ಚಿನ್ನದ ಇಟ್ಟಿಗೆಯನ್ನು ದಾನವಾಗಿ ಕೊಡುವುದಾಗಿ ಮೊಘಲ್ ವಂಶಸ್ಥ ಪ್ರಿನ್ಸ್ ಹಬೀಬುದ್ದೀನ್ ಭರವಸೆ ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿರುವ, ಹೈದರಾಬಾದ್ ನಲ್ಲಿ ವಾಸಿವಾಗಿರುವ ಹಬೀಬುದ್ದೀನ್ ಟ್ಯೂಸಿ ಮೊಘಲ್ ವಂಶದ ಆರನೇಯ ತಲೆಮಾರಿನವರಾಗಿದ್ದಾರೆ. 1529ರಲ್ಲಿ ಮೊಘಲ್ ವಂಶದ ಮೊದಲ ದೊರೆ ಬಾಬರ್ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದರು. ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳ ಸುಪ್ರೀಂಕೋರ್ಟ್ ತನಗೆ ಹಸ್ತಾಂತರಿಸಬೇಕು, ಯಾಕೆಂದರೆ ನಾನು ಆ ಜಾಗದ ನಿಜವಾದ ಹಕ್ಕುದಾರನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಒಂದು ಸುಪ್ರೀಂಕೋರ್ಟ್ ನನಗೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳವನ್ನು ನನಗೆ ಹಸ್ತಾಂತರಿಸಿದರೆ. ರಾಮಮಂದಿರ ನಿರ್ಮಿಸಲು ನಾನು ಇಡೀ ಜಾಗವನ್ನು ದಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಬಾಬ್ರಿ ಮಸೀದಿ ನಿರ್ಮಿಸಿದ ಜಾಗ ರಾಮನ ಜನ್ಮಭೂಮಿಯಾಗಿದೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ.
1992ರ ಡಿಸೆಂಬರ್ 6ರಂದು ಸಾವಿರಾರು ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. 50ರ ಹರೆಯದ ಹಬೀಬುದ್ಧೀನ್, ಆ ಜಾಗದ ನಿಜವಾದ ವಾರಿಸುದಾರ ತಾನು ಎಂಬುದಾಗಿ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಏತನ್ಮಧ್ಯೆ ಹಬೀಬುದ್ದೀನ್ ಸಲ್ಲಿಸಿದ್ದ ಅರ್ಜಿ ಇನ್ನಷ್ಟೇ ಅಂಗೀಕರಿಸಿದ ವಿಚಾರಣೆ ನಡೆಯಬೇಕಾಗಿದೆ.
ಬಾಬ್ರಿ ಮಸೀದಿ ಜಾಗಕ್ಕ ಸಂಬಂಧಿಸಿದ ದಾಖಲೆ, ಮಾಲೀಕತ್ವದ ಬಗ್ಗೆ ಮೂರನೇಯವರು ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಆದರೆ ಮೊಘಲ ವಂಶಸ್ಥನಾದ ನನಗೆ ನನ್ನ ಅಭಿಪ್ರಾಯವನ್ನು ಹೇಳಲು ಹಕ್ಕುದಾರನಾಗಿದ್ದೇನೆ ಎಂದು ಹಬೀಬುದ್ದೀನ್ ತಿಳಿಸಿದ್ದಾರೆ.