Advertisement

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ

07:34 PM Feb 22, 2024 | Team Udayavani |

ಮಹಾರಾಷ್ಟ್ರ: ತನ್ನ ಸಹೋದರಿಗೆ 12ನೇ ತರಗತಿ ಪರೀಕ್ಷೆಯಲ್ಲಿ ನಕಲು ಮಾಡಲು ನೆರವಾಗುವ  ನಿಟ್ಟಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್‌ ಸಮವಸ್ತ್ರ‌ ಧರಿಸಿ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಕಾರ್ಯವನ್ನು ನಿರ್ವಹಿಸುವಂತೆ ನಟಿಸಿ ಸಿಕ್ಕಿಬಿದ್ದಿರುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.

Advertisement

ಅನುಪಮ್ ಮದನ್ ಖಂಡಾರೆ (24) ಎಂಬಾತ ಪೊಲೀಸ್‌ ಕೈಗೆ ಸಿಕ್ಕಿಬಿದ್ದ ವ್ಯಕ್ತಿ.

ಪಾತೂರು ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯಲ್ಲಿ 12ನೇ ತರಗತಿಯ ಮೊದಲ ಪರೀಕ್ಷೆಯ ವೇಳೆ ಈ ಘಟನೆ ನಡೆದಿದೆ. ಪಾಂಗ್ರಾ ಬಂಡಿಯಿಂದ ಬಂದ ಖಂಡಾರೆ, ತನ್ನ ತಂಗಿಗೆ ಪರೀಕ್ಷೆಯಲ್ಲಿ ಕಾಪಿ ಮಾಡಲು ನೆರವಾಗುವ ನಿಟ್ಟಿನಲ್ಲಿ ನಿಜವಾದ ಪೊಲೀಸ್‌ ಧಿರಿಸಿನಲ್ಲಿ ಶಾಲೆಗೆ ಬಂದಿದ್ದಾನೆ. ಪರೀಕ್ಷಾ ಕೇಂದ್ರದ ಭದ್ರತೆಗೆ ನಿಂತು ಅಲ್ಲಿಂದ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಯೋಜನೆಯನ್ನು ಅನುಪಮ್‌ ಹಾಕಿಕೊಂಡಿದ್ದ.

ಇದೇ ವೇಳೆ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡವು ಆಗಮಿಸಿ ಭದ್ರತೆಯನ್ನು ಕಾಯ್ದುಕೊಂಡಿತು. ನಿಜವಾದ ಪೊಲೀಸ್‌ ಬಂದಾಗ ಅನುಪಮ್‌ ಸೆಲ್ಯೂಟ್‌ ನೀಡಿದ್ದಾನೆ. ಸೆಲ್ಯೂಟ್‌ ನೀಡಿದ ವಿಧಾನದಿಂದಲೇ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಅನುಪಮ್  ಮಾಡಿದ ಸೆಲ್ಯೂಟ್ ಪ್ರೋಟೋಕಾಲ್‌ಗೆ ಅನುಗುಣವಾಗಿಲ್ಲ ಮತ್ತು ಅವರ ಸಮವಸ್ತ್ರದ ಮೇಲಿನ ನಾಮಫಲಕ ತಪ್ಪಾಗಿತ್ತು. ಈ ಕಾರಣದಿಂದ ಅಧಿಕಾರಿಗಳಿಗೆ ಅನುಪಮ್‌ ಮೇಲೆ ಅನುಮಾನ ಮೂಡಿದೆ.

Advertisement

ಪೊಲೀಸರು ಕೂಲಂಕಷ ತನಿಖೆಯ ನಂತರ, ಆತನ ಜೇಬಿನಲ್ಲಿ ಇಂಗ್ಲಿಷ್ ಪರೀಕ್ಷಾ ಪತ್ರಿಕೆಯ ಪ್ರತಿಯನ್ನು ಪತ್ತೆಹಚ್ಚಿದ್ದಾರೆ. ಈ ವೇಳೆ ವ್ಯಕ್ತಿಯ ವಂಚನೆಯ ಕೃತ್ಯ ಬೆಳಕಿಗೆ ಬಂದಿದೆ.

ಪೊಲೀಸರು ಖಂಡಾರೆಯನ್ನು ಬಂಧಿಸಿ ಅವರ ವಿರುದ್ಧ 1982ರ ಕಾಯ್ದೆಯ ಸೆಕ್ಷನ್ 417, 419, 170, 171 ಮತ್ತು ಸೆಕ್ಷನ್ 7 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next