Advertisement

Commissioner B. Dayanand: ಪೊಲೀಸ್‌ ಡ್ರೆಸ್‌ನಲ್ಲಿ ರೀಲ್ಸ್ ಗೆ ಕಮಿಷನರ್‌ ಬ್ರೇಕ್

11:27 AM Jul 23, 2024 | Team Udayavani |

ಬೆಂಗಳೂರು: ಸಮವಸ್ತ್ರದಲ್ಲಿರುವ ಫೋಟೋ, ವಿಡಿಯೋ, ರೀಲ್ಸ್ ಸೇರಿ ಇಲಾಖೆ ಹಾಗೂ ಪೊಲೀಸ್‌ ಕರ್ತವ್ಯಗಳಿಗೆ ಸಂಬಂಧಿಸಿದ ಯಾವುದೇ ವಿಷಯಗಳ ಕುರಿತು ಜಾಲತಾಣಗಳಲ್ಲಿ ಹರಿಬಿಡದಂತೆ ಅಧಿಕಾರಿ-ಸಿಬ್ಬಂದಿಗೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಎಚ್ಚರಿಸಿದ್ದಾರೆ.

Advertisement

ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನುಉದ್ದೇಶಿಸಿ ಆದೇಶಿಸಿರುವ ನಗರ ಪೊಲೀಸ್‌ ಆಯುಕ್ತರು, ಸಮವಸ್ತ್ರದಲ್ಲಿರುವ ಫೋಟೋ, ರೀಲ್ಸ್, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಹಾಗೂ ಪೊಲೀಸ್‌ ಇಲಾಖೆಯ ಅಧಿಕೃತ ಕೆಲಸಗಳ ಕುರಿತು ಅನಿಸಿಕೆ ವ್ಯಕ್ತಪಡಿಸುವುದು ನಿಯಮಗಳಿಗೆ ವಿರುದ್ಧವಾಗಿದೆ.

ಇಲಾಖೆಗೆ ಸಂಬಂಧಪಡದಿರುವ ವಿಷಯಗಳು ಇಲಾಖೆಯ ಘನತೆಗೆ ಹಾನಿಯುಂಟು ಮಾಡಬಹುದು. ಪೊಲೀಸ್‌ ಸಮವಸ್ತ್ರವು ಪೊಲೀಸರ ಬದ್ಧತೆ, ಹೊಣೆಗಾರಿಕೆಯ ಸಂಕೇತವಾಗಿದೆ. ಆದ್ದರಿಂದ ಯಾವುದೇ ಸಾರ್ವಜನಿಕ ಅಥವಾ ಡಿಜಿಟಲ್‌ ವೇದಿಕೆಯಲ್ಲಿ ಅದರ ಬಳಕೆಯು ಈ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆ. ಯಾವುದೇ ಸರ್ಕಾರಿ ನೌಕರನು ಅಧಿಕೃತವಾದ ಮಾಹಿತಿಯನ್ನು ಮಾಧ್ಯಮ, ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಮಾನ್ಯತೆ ಪಡೆದ ಅಧಿಕೃತ ಅಧಿಕಾರಿ ಮಾತ್ರವೇ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಮಾಹಿತಿ ಹಂಚಿಕೊಳ್ಳಲು ಅವಕಾಶವಿದೆ. ಪೊಲೀಸ್‌ ಸಮವಸ್ತ್ರದಲ್ಲಿ ಫೋಟೋಗಳು, ವಿಡಿಯೋಗಳು. ರೀಲ್ಸ್‌ಗಳು ಇತ್ಯಾದಿಗಳನ್ನು ಹರಿಬಿಡದಂತೆ ಜಾಗೃತಗೊಳಿಸಬೇಕು. ಒಂದು ವೇಳೆ ಲೋಪ ಕಂಡರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಲ್ಲಾ ವಿಭಾಗಗಳ ಡಿಸಿಪಿಗಳಿಗೆ ಬಿ.ದಯಾನಂದ್‌ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next